ಚಿತ್ರದುರ್ಗ: ಶಸ್ತ್ರಚಿಕಿತ್ಸೆಗೆ ಹಣ ಫಿಕ್ಸ್ ಮಾಡಿ ಬ್ರೋಕರ್ ಮೂಲಕ ವಸೂಲಿ ಮಾಡುತ್ತಿರುವ ಆರೋಪ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ವೈದ್ಯ ಜಯರಾಂ ವಿರುದ್ಧ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆರ್ಥೋಪೆಡಿಕ್ ವೈದ್ಯ ಜಯರಾಂ, ಬ್ರೋಕರ್‌ಗಳಾದ ಆಶಾ, ಸುರೇಶ್ ಮೂಲಕ ಹಣ ವಸೂಲಿ ಮಾಡಿಸಿ ಬಳಿಕ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡುತ್ತಿದ್ದರಂತೆ.
ಹೊಳಲ್ಕೆರೆ ತಾಲೂಕಿನ ತಾಳೀಕೆರೆ ಗ್ರಾಮದ ರಾಮಚಂದ್ರಪ್ಪ ಅಪಘಾತದಿಂದಾಗಿ ಕಾಲುಮುರಿದುಕೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಬ್ರೋಕರ್ಗಳಿಂದ ಹಣ ವಸೂಲಿ ಮಾಡಿ ನಂತರ ಚಿಕಿತ್ಸೆ ನೀಡುವಂತೆ ವೈದ್ಯರಾದ ಡಾ.ಜಯರಾಮ್ ಒಪ್ಪಿಗೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಬ್ರೋಕರ್‌ಗಳಾದ ಆಶಾ, ಸುರೇಶ್ರಿಂದ 30 ಸಾವಿರ ಹಣ ವಸೂಲಿ ಮಾಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಡಾ. ಜಯರಾಮ್ ಬ್ರೋಕರ್ಗಳಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವೈದ್ಯರ ನಿರ್ಲಕ್ಷ್ಯದಿಂದ ನನ್ನ ಪತ್ನಿ ಮೃತಪಟ್ಟಿದ್ದಾಳೆ -ವೈದ್ಯರ ವಿರುದ್ಧ BJP ಮುಖಂಡನ ಆರೋಪ