
ಹಾಸನ: ಸಕಲೇಶಪುರದ ಹಾಲೇಬೇಲೂರು ಬಳಿಯ ಹೇಮಾವತಿ ನದಿ ತೀರದಲ್ಲಿ ಪುರಾತನ ಕಾಲದ ಬೃಹತ್ ಚನ್ನಕೇಶವ ವಿಗ್ರಹವೊಂದು ಪತ್ತೆಯಾಗಿದೆ.
ಹೇಮಾವತಿ ನದಿ ತೀರದಲ್ಲಿ ಮರಳು ತೆಗೆಯುವಾಗ ಚನ್ನಕೇಶವ ವಿಗ್ರಹ ಸಿಕ್ಕಿದೆ. ಭೂಮಿಯಲ್ಲಿ ಹುದುಗಿದ್ದ ಸುಮಾರು 5 ಅಡಿ ಎತ್ತರದ ಚನ್ನಕೇಶವ ವಿಗ್ರಹವನ್ನು ಜನ ಹೊರ ತೆಗೆದಿದ್ದಾರೆ. ವಿಗ್ರಹದ ಗಾತ್ರ ಕಂಡು ಜನರು ಬೆರಗಾಗಿದ್ದಾರೆ. ಹಾಲೇಬೇಲೂರು ದೇಗುಲದಲ್ಲಿ ವಿಗ್ರಹವನ್ನು ಇಟ್ಟು ಸ್ಥಳೀಯರು ಪೂಜೆ ಸಲ್ಲಿಸಿದ್ದಾರೆ.
ಜೆಸಿಬಿ ಮೂಲಕ ನದಿ ತೀರದಲ್ಲಿ ಮರಳು ತೆಗೆಯಲಾಗುತ್ತಿತ್ತು. ಮರಳು ತೆಗೆಯುವ ವೇಳೆ ಜೆಸಿಬಿಗೆ ವಿಗ್ರಹ ಸಿಕ್ಕಿ ಬಿದ್ದಿದೆ. ಬೃಹತ್ ಆಕಾರದ ವಿಗ್ರಹವನ್ನು ಕಂಡ ಜೆಸಿಬಿ ಚಾಲಕ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಗ್ರಹ ಯಾವ ಕಾಲಕ್ಕೆ ಸೇರಿದ್ದು ಎಂಬುದರ ಕುರಿತಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ