AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ

ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣ ಹಾಗೂ ವಾಣಿ ವಿಲಾಸ್ ಕಾಲೇಜಿಗೆ ಸಮೀಪದಲ್ಲೇ ಇರುವ ಜಲಕಂಠೇಶ್ವರ ದೇವಾಲಯದ ಬಳಿ ಪುರಾತನ ಕಾಲದ ವಿಗ್ರಹ ಮತ್ತು ಪಿರಂಗಿ ಗುಂಡುಗಳು ಪತ್ತೆಯಾಗಿವೆ.

ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ
ಪುರಾತನ ಕಾಲದ ವಿಗ್ರಹ
ಪೃಥ್ವಿಶಂಕರ
| Edited By: |

Updated on:Jan 03, 2021 | 1:48 PM

Share

ಬೆಂಗಳೂರು: ವಾಣಿ ವಿಲಾಸ್ ಕಾಲೇಜು ಬಳಿಯ ಖಾಲಿ ಜಾಗದಲ್ಲಿ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆಯಾಗಿವೆ.

ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣ ಹಾಗೂ ವಾಣಿ ವಿಲಾಸ್ ಕಾಲೇಜಿಗೆ ಸಮೀಪದಲ್ಲೇ ಇರುವ ಜಲಕಂಠೇಶ್ವರ ದೇವಾಲಯದ ಬಳಿ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಜಲಕಂಠೇಶ್ವರ ದೇವಾಲಯ ಪುರಾತನ ಕಾಲದ್ದು, ಈ ಹಿಂದಿನ ಕಾಲದಿಂದಲೂ ಇರುವಂತಹ ದೇವಾಲಯ ಇದಾಗಿದೆ. ಸ್ಥಳೀಯರ ಪ್ರಕಾರ ಈ ಸ್ಥಳದಲ್ಲಿ ಹಿಂದೆ ಕಲ್ಯಾಣಿ ಇತ್ತು. ಆದರೆ ಕಾಲ ಕ್ರಮೇಣ ಮುಚ್ಚಿ ಹೋಗಿರಬಹುದು.

ಅದ್ರೆ ಈಗ ಈ ಜಾಗವನ್ನು ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್ ಹಿರಿಯ ಪ್ರಾಥಮಿಕ ಶಾಲೆ ಹಾಗು ಪದವಿ ಪೂರ್ವ ಕಾಲೇಜಿಗೆ ನೀಡಲಾಗಿದೆ. ದಶಕದ ಕಾಲದಿಂದ ಕಾಲೇಜು ಒಡೆತನದಲ್ಲಿ ಈ ಸ್ಥಳ ಇದೆ. ಈಗ ಹೊಸ ಕಟ್ಟೆ ಕಟ್ಟಲು ಪಾಯ ತೆಗೆಯಲಾಗುತಿತ್ತು. ಈ ವೇಳೆ ಪ್ರಾಚೀನ ಕಾಲದ ವಿಗ್ರಹಗಳಿರುವ ಕಲ್ಲು ಮತ್ತು ಕಲ್ಯಾಣಿಯ ಕುರುಹುಗಳು ಪತ್ತೆಯಾಗಿವೆ.

ಭೂಮಿ ಒಳಗೆ ಕಲ್ಯಾಣಿ ಹಾಗು ಇನ್ನು ಇತರ ಪ್ರಾಚೀನ ಕಟ್ಟಡ ಇರಬಹುದು ಎಂದು ವಾದ ಮಾಡಿರುವ ಸ್ಥಳೀಯರು ಗುಂಡಿ ತೆಗೆಯುವ ಕಾರ್ಯವನ್ನು ನಿಲ್ಲಿಸಿದ್ದಾರೆ. ಜೀರ್ಣೋದ್ಧಾರ ಕೆಲಸ ಮಾಡಿದ್ರೆ ಪ್ರಾಚೀನ ಪಾವಿತ್ರ್ಯವನ್ನು ಉಳಿಸಿಕೊಳ್ಳಬಹುದು ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶಾಲೆ ಆಡಳಿತ ಮಂಡಳಿಗೆ ಜೀರ್ಣೋದ್ಧಾರದ ಬಗ್ಗೆ ಆಸಕ್ತಿ ಇಲ್ಲಾ. ಹೀಗಾಗಿ  ಪುರಾತತ್ವ ಶಾಸ್ತ್ರ ಹಾಗು ಮುಜರಾಯಿ ಇಲಾಖೆಯಿಂದ ಕ್ರಮಕ್ಕೆ ಮುಂದಾಗುವಂತೆ ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ.

Published On - 1:48 pm, Sun, 3 January 21