ದೆಹಲಿಗೆ ಹೋದರೂ BSNL ನೆಟ್​ವರ್ಕ್ ಸಿಗುವುದಿಲ್ಲ: ಸಂಸದ ಅನಂತ್ ಕುಮಾರ್ ಹೆಗಡೆ

|

Updated on: Aug 11, 2020 | 2:47 PM

ಬೆಂಗಳೂರು:ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಸಂಸದ ಅನಂತ್ ಕುಮಾರ್ ಹೆಗಡೆ ಈಗ ಅಂಥದ್ದೇ ಕೆಲಸ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೆಹಲಿಗೇ ಹೋದರೂ BSNL ನೆಟ್​ವರ್ಕ್ ಸಿಗುವುದಿಲ್ಲ! ಅದಕ್ಕೇ BSNL .. BSNL ನೆಟ್​ವರ್ಕ್ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ್, BSNL ಕಂಪನಿಯಲ್ಲಿ ಬರೀ ದೇಶದ್ರೋಹಿಗಳು ತುಂಬಿದ್ದಾರೆ. ಹಾಗಾಗಿ BSNL ಕಂಪನಿಯನ್ನು ಖಾಸಗೀಕರಣ ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ. ಜೊತೆಗೆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 80,000 ನೌಕರರನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದೇವೆ. ಕಂಪನಿಯಲ್ಲಿ ಎಲ್ಲಾ ಸೌಲಭ್ಯ […]

ದೆಹಲಿಗೆ ಹೋದರೂ BSNL ನೆಟ್​ವರ್ಕ್ ಸಿಗುವುದಿಲ್ಲ: ಸಂಸದ ಅನಂತ್ ಕುಮಾರ್ ಹೆಗಡೆ
Follow us on

ಬೆಂಗಳೂರು:ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಸಂಸದ ಅನಂತ್ ಕುಮಾರ್ ಹೆಗಡೆ ಈಗ ಅಂಥದ್ದೇ ಕೆಲಸ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೆಹಲಿಗೇ ಹೋದರೂ BSNL ನೆಟ್​ವರ್ಕ್ ಸಿಗುವುದಿಲ್ಲ! ಅದಕ್ಕೇ BSNL ..
BSNL ನೆಟ್​ವರ್ಕ್ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ್, BSNL ಕಂಪನಿಯಲ್ಲಿ ಬರೀ ದೇಶದ್ರೋಹಿಗಳು ತುಂಬಿದ್ದಾರೆ. ಹಾಗಾಗಿ BSNL ಕಂಪನಿಯನ್ನು ಖಾಸಗೀಕರಣ ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಜೊತೆಗೆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 80,000 ನೌಕರರನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದೇವೆ. ಕಂಪನಿಯಲ್ಲಿ ಎಲ್ಲಾ ಸೌಲಭ್ಯ ಇದ್ದರೂ ಸಹ ಸರಿಯಾದ ಕೆಲಸ ಮಾಡುತ್ತಿಲ್ಲ. ದೆಹಲಿಗೆ ಹೋದರೂ BSNL ನೆಟ್​ವರ್ಕ್ ಸಿಗುವುದಿಲ್ಲ. ಹೀಗಾಗಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Published On - 2:46 pm, Tue, 11 August 20