ಸೋಂಕಿತ ಗರ್ಭಿಣಿಯರ ಪಾಲಿನ ಸಂಜೀವಿನಿಯಾದ ವಾಣಿವಿಲಾಸ ಆಸ್ಪತ್ರೆಯ ಸಾಧನೆ ಇದು!
[lazy-load-videos-and-sticky-control id=”UkNXQqRDUTQ”] ಕೊರೊನಾ ಸಂಕಷ್ಟದ ವೇಳೆ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದೇ ಕಷ್ಟದ ಸಂಗತಿಯಾಗಿತ್ತು. ಆದರೆ ಗರ್ಭಿಣಿಯರ ಪಾಲಿಗೆ ವಾಣಿವಿಲಾಸ ಆಸ್ಪತ್ರೆ ಈಗ ವರದಾನವಾಗಿದೆ. ಕೊರೊನಾ ನಡುವೆಯೂ ಗರ್ಭಿಣಿಯರ ಪಾಲಿನ ಸಂಜೀವಿನಿಯಾಗಿದೆ. ವಾಣಿವಿಲಾಸದಲ್ಲಿ 200 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಮೇ 9ಕ್ಕೆ ಮೊದಲ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಲಾಗಿತ್ತು. ನಂತರ ಮೇ 9 -ಜುಲೈ 17 ರವರೆಗೆ 100 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಯಿತು. ಜುಲೈ 17 -ಆಗಸ್ಟ್ 10ರವರೆಗೆ 100 ಹೆರಿಗೆಯನ್ನ […]

[lazy-load-videos-and-sticky-control id=”UkNXQqRDUTQ”]
ಕೊರೊನಾ ಸಂಕಷ್ಟದ ವೇಳೆ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದೇ ಕಷ್ಟದ ಸಂಗತಿಯಾಗಿತ್ತು. ಆದರೆ ಗರ್ಭಿಣಿಯರ ಪಾಲಿಗೆ ವಾಣಿವಿಲಾಸ ಆಸ್ಪತ್ರೆ ಈಗ ವರದಾನವಾಗಿದೆ. ಕೊರೊನಾ ನಡುವೆಯೂ ಗರ್ಭಿಣಿಯರ ಪಾಲಿನ ಸಂಜೀವಿನಿಯಾಗಿದೆ.
ವಾಣಿವಿಲಾಸದಲ್ಲಿ 200 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಮೇ 9ಕ್ಕೆ ಮೊದಲ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಲಾಗಿತ್ತು. ನಂತರ ಮೇ 9 -ಜುಲೈ 17 ರವರೆಗೆ 100 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಯಿತು. ಜುಲೈ 17 -ಆಗಸ್ಟ್ 10ರವರೆಗೆ 100 ಹೆರಿಗೆಯನ್ನ ಮಾಡಲಾಗಿದೆ.
ವಾಣಿವಿಲಾಸ ಸಿಬ್ಬಂದಿ ಕೇವಲ 23 ದಿನದಲ್ಲಿ 100 ಹೆರಿಗೆ ಮಾಡಿಸಿದ್ದಾರೆ. ಕೊರೊನಾ ಆರಂಭದಲ್ಲಿ ಸಾಕಷ್ಟು ಹೆರಿಗೆ ಸಮಸ್ಯೆಯಾಗುತ್ತಿತ್ತು. ಈಗ ಸುಲಭವಾಗಿ ಹೆರಿಗೆ ಮಾಡಿಸೋ ಸಾಮರ್ಥ್ಯ ಹೊಂದಿರೋ ಸಿಬ್ಬಂದಿ, ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿ ಹೆರಿಗೆ ಮಾಡುತ್ತಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿರುವುದರಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
Published On - 1:50 pm, Tue, 11 August 20




