ಭಾರತಕ್ಕೆ ಬರಬರುತ್ತಿದ್ದಂತೆ ರಫೇಲ್ ಜೆಟ್ಸ್ ತಾಲೀಮು!

ಭಾರತಕ್ಕೆ ಬರಬರುತ್ತಿದ್ದಂತೆ ರಫೇಲ್ ಜೆಟ್ಸ್ ತಾಲೀಮು!

[lazy-load-videos-and-sticky-control id=”0Fhot4fDAH4″] ದೆಹಲಿ: ಭಾರತ-ಚೀನಾ ನಡುವಿನ ವಾಸ್ತವ ಗಡಿ ರೇಖೆ ಬಳಿ ಇರುವ ಉದ್ವಿಗ್ನ ಸ್ಥಿತಿ ಇನ್ನೂ ಕಡಿಮೆಯಾಗಿಲ್ಲ. ಇದರ ನಡುವೆ ಭಾರತಕ್ಕೆ ಬಂದಿಳಿದಿರೋ ರಫೇಲ್ ಜೆಟ್​ಗಳು ರಾತ್ರಿ ತಾಲೀಮು ಆರಂಭಿಸಿವೆ. ಈ ಮೂಲಕ ಚೀನಾಗೆ ತಕ್ಕ ಉತ್ತರ ನೀಡಲು ಭಾರತ ಸಿದ್ಧ ಅನ್ನೋ ಸಂದೇಶವನ್ನ ರವಾನಿಸಿದ್ದು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಶಮನಕ್ಕೆ 2 ರಾಷ್ಟ್ರಗಳು ಆದ್ಯತೆ ನೀಡಬೇಕು ಅಂತಾ ಚೀನಾಗೆ ಸಂದೇಶ ರವಾನಿಸಿದೆ. ಭಾರತ-ಚೀನಾ ವಾಸ್ತವ ಗಡಿ ರೇಖೆಯಲ್ಲಿ ಚೀನಾ ಕ್ಯಾತೆ ತೆಗೆಯೋದನ್ನ ಇನ್ನೂ ನಿಲ್ಲಿಸಿಲ್ಲ. […]

Ayesha Banu

| Edited By: sadhu srinath

Aug 11, 2020 | 1:02 PM

[lazy-load-videos-and-sticky-control id=”0Fhot4fDAH4″]

ದೆಹಲಿ: ಭಾರತ-ಚೀನಾ ನಡುವಿನ ವಾಸ್ತವ ಗಡಿ ರೇಖೆ ಬಳಿ ಇರುವ ಉದ್ವಿಗ್ನ ಸ್ಥಿತಿ ಇನ್ನೂ ಕಡಿಮೆಯಾಗಿಲ್ಲ. ಇದರ ನಡುವೆ ಭಾರತಕ್ಕೆ ಬಂದಿಳಿದಿರೋ ರಫೇಲ್ ಜೆಟ್​ಗಳು ರಾತ್ರಿ ತಾಲೀಮು ಆರಂಭಿಸಿವೆ. ಈ ಮೂಲಕ ಚೀನಾಗೆ ತಕ್ಕ ಉತ್ತರ ನೀಡಲು ಭಾರತ ಸಿದ್ಧ ಅನ್ನೋ ಸಂದೇಶವನ್ನ ರವಾನಿಸಿದ್ದು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಶಮನಕ್ಕೆ 2 ರಾಷ್ಟ್ರಗಳು ಆದ್ಯತೆ ನೀಡಬೇಕು ಅಂತಾ ಚೀನಾಗೆ ಸಂದೇಶ ರವಾನಿಸಿದೆ.

ಭಾರತ-ಚೀನಾ ವಾಸ್ತವ ಗಡಿ ರೇಖೆಯಲ್ಲಿ ಚೀನಾ ಕ್ಯಾತೆ ತೆಗೆಯೋದನ್ನ ಇನ್ನೂ ನಿಲ್ಲಿಸಿಲ್ಲ. ಇದರ ನಡುವೆ ಭಾರತೀಯ ವಾಯುಸೇನೆ ಬಹುದಿನಗಳಿಂದ ಎದುರು ನೋಡುತ್ತಿದ್ದ ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬಂದಿಳಿದಿವೆ. ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದ 10 ದಿನಗಳ ಬಳಿಕ, ಹಿಮಾಚಲ ಪ್ರದೇಶದಲ್ಲಿರುವ ವಾಸ್ತವ ಗಡಿ ರೇಖೆ ಬಳಿ ರಾತ್ರಿ ತಾಲೀಮು ಆರಂಭಿಸಿವೆ. ಈ ಮೂಲಕ ಚೀನಾ ಸೈನಿಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿವೆ.

ಹಿಮಾಚಲದ ಗುಡ್ಡಗಾಡಿನಲ್ಲಿ ‘ಗೋಲ್ಡನ್​ ಆ್ಯರೋಸ್’ ಹಾರಾಟ! ಭಾರತೀಯ ವಾಯುಸೇನೆಯ ಮೂಲಗಳ ಪ್ರಕಾರ ರಫೇಲ್ ಯುದ್ಧ ವಿಮಾನಗಳು ಹಿಮಾಚಲ ಪ್ರದೇಶದ ಗುಡ್ಡಗಾಡಿನಲ್ಲಿ ರಾತ್ರಿ ವೇಳೆ ಅಭ್ಯಾಸ ಆರಂಭಿಸಿವೆ. ಆದ್ರೆ, ಭಾರತ-ಚೀನಾ ವಾಸ್ತವ ಗಡಿ ರೇಖೆಯಿಂದ ದೂರದಲ್ಲಿ ತಾಲೀಮು ನಡೆಸ್ತಿವೆ. ಒಂದು ವೇಳೆ ವಾಸ್ತವ ಗಡಿ ರೇಖೆ ಬಳಿ ಅಭ್ಯಾಸ ನಡೆಸಿದ್ರೆ, ಚೀನಾ ಆಕ್ರಮಿತ ಅಕ್ಸಾಯ್ ಚಿನ್​ನಲ್ಲಿರೋ ಚೀನಾ ರಾಡಾರ್​ಗಳಿಗೆ, ರಫೇಲ್ ಕಂಪನಾಂಕಗಳು ತಿಳಿಯೋ ಸಾಧ್ಯತೆ ಇರುತ್ತೆ.

ಇದನ್ನ ಬಳಸಿಕೊಂಡು, ಸಂಕಷ್ಟದ ಸಮಯದಲ್ಲಿ ಚೀನಾ ದಾಳಿ ಮಾಡಬಹುದು. ಹೀಗಾಗಿ ಎಲ್ಎಸಿಯಿಂದ ದೂರದಲ್ಲಿ ರಾತ್ರಿ ತಾಲೀಮು ಆರಂಭಿಸಿವೆ. ಆದ್ರೆ, ತಜ್ಞರ ಪ್ರಕಾರ ಎಲ್ಎಸಿ ಬಳಿ ರಫೇಲ್ ಹಾರಾಟ ನಡೆಸಿದ್ರೂ ಅಂತಾ ತೊಂದರೆ ಏನಿಲ್ಲ. ಯಾಕಂದ್ರೆ, ರಫೇಲ್ ಅಭ್ಯಾಸ ಸಮಯದಲ್ಲಿ ಒಂದು ರೀತಿ, ಯುದ್ಧದ ಸಂದರ್ಭದಲ್ಲಿ ಮತ್ತೊಂದು ರೀತಿಯ ಕಂಪನಾಂಕಗಳನ್ನ ಹೊರಡಿಸುತ್ತೆ. ಹೀಗಾಗಿ ಅಂತಾ ತೊಂದಇಲ್ಲ ಅಂತಿದ್ದಾರೆ.

ರಫೇಲ್​ನಲ್ಲಿರೋ ಮೀಟಿಯರ್, ಸ್ಕಾಲ್ಪ್, ಮಿಕಾ ಕ್ಷಿಪಣಿಗಳು, ಇಸ್ರೇಲಿ ನಿರ್ಮಿತ ಹೆಲ್ಮೆಟ್ ತಂತ್ರಜ್ಞಾನ ಚೀನಾ ಆಕ್ರಮಣ ನಡೆಸಿದ್ರೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿವೆ. ರಫೇಲ್​ಗಳು ರಾತ್ರಿ ಅಭ್ಯಾಸ ಆರಂಭಿಸಿರೋದು ಭಾರತೀಯ ಸೇನೆಗೆ ಭಾರಿ ಬಲ ತಂದುಕೊಟ್ಟಿರೋದು ಮಾತ್ರ ಸುಳ್ಳಲ್ಲ.

Follow us on

Related Stories

Most Read Stories

Click on your DTH Provider to Add TV9 Kannada