ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 3:09 PM

ಯುವರಾಜ್​ ಪಕ್ಕಾ ಆರ್​ಎಸ್​ಎಸ್​ ಕಾರ್ಯಕರ್ತ. ಇಂಥವರನ್ನು ಆರ್​ಎಸ್​ಎಸ್​ ದೇಶದ ಹಲವೆಡೆ ಬಿಟ್ಟು, ಕೆಲಸ ಮಾಡಿಸುತ್ತಿದೆ. ಯುವರಾಜ್‌ನಿಂದ ₹400 ಕೋಟಿ ವ್ಯವಹಾರ ನಡೆದಿದೆ. ಈತ ಅಮಿತ್​ ಷಾ ಜತೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಲಕ್ಷ್ಮಣ್​ ಆರೋಪಿಸಿದ್ದಾರೆ.

ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ಪ್ರಮುಖ ನಟಿಯರು ಭಾಗಿಯಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ
Follow us on

ಮೈಸೂರು: ಸರ್ಕಾರಕ್ಕೆ ಬದ್ಧತೆ ಎಂಬುದು ಇದ್ದರೆ ಯುವರಾಜ್ ಸ್ವಾಮಿಯ ವಂಚನೆ ಪ್ರಕರಣದ ಸಮಗ್ರ ಮಾಹಿತಿಯನ್ನು ಜನರಿಗೆ ತಿಳಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಆಗ್ರಹಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವರಾಜ್​ ಪ್ರಕರಣದಲ್ಲಿ ಸುಮಾರು 8-10 ನಟಿಯರು ಭಾಗಿಯಾಗಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ. ಆದರೆ ರಾಧಿಕಾರ ಮಾತ್ರ ಟಾರ್ಗೆಟ್ ಆಗಿದ್ದು ಯಾಕೆ? ಡ್ರಗ್ಸ್ ಕೇಸ್​​ನಲ್ಲೂ ಅಷ್ಟೇ, ಸಂಜನಾ, ರಾಗಿಣಿಯನ್ನು ಮಾತ್ರ ಟಾರ್ಗೆಟ್​ ಮಾಡಿದರು. ಅವರಿಬ್ಬರನ್ನೂ ಮುಂದಿಟ್ಟುಕೊಂಡು ಉಳಿದ ಆರೋಪಿಗಳನ್ನು ಉಳಿಸಿದರು ಎಂದು ಆರೋಪಿಸಿದರು.

ಆರ್​ಎಸ್​ಎಸ್ ಕಾರ್ಯಕರ್ತ
ಯುವರಾಜ್​ ಪಕ್ಕಾ ಆರ್​ಎಸ್​ಎಸ್​ ಕಾರ್ಯಕರ್ತ. ಇಂಥವರನ್ನು ಆರ್​ಎಸ್​ಎಸ್​ ದೇಶದ ಹಲವೆಡೆ ಬಿಟ್ಟು, ಕೆಲಸ ಮಾಡಿಸುತ್ತಿದೆ. ಯುವರಾಜ್‌ನಿಂದ ₹400 ಕೋಟಿ ವ್ಯವಹಾರ ನಡೆದಿದೆ. ಈತ ಅಮಿತ್​ ಷಾ ಜತೆ ನೇರ ಸಂಪರ್ಕದಲ್ಲಿದ್ದಾನೆ. ಆದರೂ ಬಿಜೆಪಿಯವರು ತಮಗೆ ಸಂಬಂಧವಿಲ್ಲ ಎನ್ನುತ್ತಾರೆ. ಹಾಗೇ ಯುವರಾಜ್​ ಮತ್ತು ಬಿ.ಎಲ್​. ಸಂತೋಷ್​ ನಡುವಿನ ಸಂಬಂಧವೇನು? ಅವರಿಬ್ಬರ ಫೋನ್ ಕಾಲ್ ಯಾಕೆ ಆಚೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಎಸ್.ಟಿ.ಸೋಮಶೇಖರ್ ಬಸ್​ಸ್ಟ್ಯಾಂಡ್​ನಲ್ಲಿದ್ದರು
ಸಚಿವ ಎಸ್​.ಟಿ.ಸೋಮಶೇಖರ್​ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಣ್​, ಎಸ್​.ಟಿ.ಸೋಮಶೇಖರ್​ ಬಸ್​ಸ್ಟ್ಯಾಂಡ್​ನಲ್ಲಿದ್ದವರು. ಈ ಸ್ಥಾನಕ್ಕೆ ತಂದಿದ್ದೇ ಕಾಂಗ್ರೆಸ್​. ಮೈಸೂರಿಗೆ ಬಂದ ಮೇಲೆ ಅವರು ಎಷ್ಟು ಹಣ ತಂದಿದ್ದಾರೆ? ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಹಾಗೇ, ನೀವು ಚರ್ಚೆಗೆ ಬನ್ನಿ, ನಿಮ್ಮ ಹಗರಣಗಳನ್ನು ನಾವು ಹೇಳುತ್ತೇವೆ ಎಂದೂ ಸವಾಲು ಹಾಕಿದರು.

ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ
2018-19ರ ಅವಧಿಯಲ್ಲಿ ನಡೆದ ಫೋನ್ ಕದ್ದಾಲಿಕೆ ವಿಚಾರವಾಗಿ ಮಾತನಾಡಿದ ಅವರು, ಫೋನ್​ ಕದ್ದಾಲಿಕೆಗೆ ಸಂಬಂಧಪಟ್ಟಂತೆ ಸಿಬಿಐ ಚಾರ್ಜ್​ಶೀಟ್​ ಸಿದ್ಧಪಡಿಸಿದೆ. ಅಲೋಕ್‌ಕುಮಾರ್ ನಿರ್ದೇಶನದಂತೆ ಫೋನ್ ಕದ್ದಾಲಿಕೆ ಮಾಡಿದ್ದಾಗಿ ಅಧಿಕಾರಿಗಳೇ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಮೂವರ ವಿರುದ್ಧ ಸಿಬಿಐ ಆರೋಪಪಟ್ಟಿ ಸಿದ್ಧಪಡಿಸಿದೆ. ಕೋರ್ಟ್‌ಗೆ ಸಲ್ಲಿಸಲು ಸರ್ಕಾರದ ಅನುಮತಿ ಕೇಳಿ 2 ತಿಂಗಳಾಗಿದೆ. ಇದೀಗ ರಾಜ್ಯ ಸರ್ಕಾರ ಫೋನ್​ ಕದ್ದಾಲಿಕೆ ವರದಿ ತಿರಸ್ಕರಿಸಲು ಹೊರಟಿದೆ. ಈಗ ಸಿಬಿಐ ವರದಿಯಲ್ಲಿರುವುದನ್ನು ಬಹಿರಂಗಪಡಿಸಬೇಕು. ವರದಿಯಲ್ಲಿ ಉಲ್ಲೇಖವಾದವರ ವಿರುದ್ಧ FIR ದಾಖಲಿಸಬೇಕು ಎಂದಿದ್ದಾರೆ.

ಕಿರಣ್​ ಬೇಡಿ ವಿರುದ್ಧ ಧರಣಿ ಮುಂದುವರಿಸಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ