ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಬರಲಿದೆ ಎಐ ಆ್ಯಪ್; ಸಚಿವ ಚಲುವರಾಯಸ್ವಾಮಿ ಸುಳಿವು

|

Updated on: Aug 18, 2023 | 3:06 PM

ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಸಾಕಷ್ಟು ಕೃಷಿ ಇಲಾಖೆ ಬಳಿ ಸಾಕಷ್ಟು ಮಾಹಿತಿ ಇದೆ. ಇದನ್ನು ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್​ಗೆ ಫೀಡ್ ಮಾಡಬಹುದಾಗಿದೆ. ಇದು ರೈತರ ಅಗತ್ಯಗಳಿಗೆ ಅನುಗುಣವಾಗಿ ಮಾಹಿತಿಯನ್ನು ಒದಗಿಸಲಿದೆ. ಇದಲ್ಲದೆ, ಈ ಆ್ಯಪ್ 14 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಬರಲಿದೆ ಎಐ ಆ್ಯಪ್; ಸಚಿವ ಚಲುವರಾಯಸ್ವಾಮಿ ಸುಳಿವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್18: ಕರ್ನಾಟಕದ ರೈತರ ಸಮಸ್ಯೆಗಳಿಗೆ ಒಂದೇ ವೇದಿಕೆಯಡಿ ಪರಿಹಾರ ನೀಡುವುದಕ್ಕಾಗಿ ಕೃಷಿ ಇಲಾಖೆಯು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಆ್ಯಪ್ ಒಂದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ ಎಂದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ಗುರುವಾರ ತಿಳಿಸಿದ್ದಾರೆ. ರೈತರಿಗೆ ಸಂಬಂಧಿಸಿದ ಕೇಂದ್ರೀಕೃತ ಕಾಲ್ ಸೆಂಟರ್ ಉದ್ಘಾಟಿಸಿದ ಮಾತನಾಡಿದ ಅವರು, ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು ಮತ್ತು ರೈತರಿಗೆ ಮಾಹಿತಿ ನೀಡಲು ಎಐ ಆಧಾರಿತ ಸೂಪರ್ ಆ್ಯಪ್​ನಿಂದ ಸಾಧ್ಯವಾಗಲಿದೆ. ಬೀಜಗಳು, ಬೆಳೆ ಮಾದರಿಗಳು ಮತ್ತು ಹಲವಾರು ಕೃಷಿ ಆಧಾರಿತ ಮಾಹಿತಿಯನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಅವರು ಸೇರಿಸಿದ್ದಾರೆ.

ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಸಾಕಷ್ಟು ಕೃಷಿ ಇಲಾಖೆ ಬಳಿ ಸಾಕಷ್ಟು ಮಾಹಿತಿ ಇದೆ. ಇದನ್ನು ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್​ಗೆ ಫೀಡ್ ಮಾಡಬಹುದಾಗಿದೆ. ಇದು ರೈತರ ಅಗತ್ಯಗಳಿಗೆ ಅನುಗುಣವಾಗಿ ಮಾಹಿತಿಯನ್ನು ಒದಗಿಸಲಿದೆ. ಇದಲ್ಲದೆ, ಈ ಆ್ಯಪ್ 14 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕಾಲ್ ಸೆಂಟರ್ ಕುರಿತು ಮಾತನಾಡಿದ ಸಚಿವರು, ರೈತರಿಗೆ ಸಹಾಯ ಮಾಡಲು ಬಹು ಸಹಾಯವಾಣಿಗಳನ್ನು (ಸುಮಾರು ಎಂಟು ಸಹಾಯವಾಣಿಗಳು) ಸ್ಥಾಪಿಸಲಾಗಿತ್ತು. ಆದರೆ ಈ ಸಹಾಯವಾಣಿಗಳು ರೈತರಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿನ ಗೊಂದಲವನ್ನು ಉಂಟುಮಾಡುತ್ತಿದ್ದವು. ಆದ್ದರಿಂದ, ನಾವು ಈ ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಲು ಮತ್ತು ರೈತರಿಗೆ ಮಾಹಿತಿ ನೀಡಲು ಕಾಲ್ ಸೆಂಟರ್ ಅನ್ನು ಸ್ಥಾಪಿಸಲು ನಿರ್ಧರಿಸಿದ್ದೆವು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅನುಮತಿ ಇಲ್ಲ: ಕೆ.ಹೆಚ್​.ಮುನಿಯಪ್ಪ

ನಮ್ಮ ಯೋಜನೆಯಂತೆಯೇ ಈಗ ಕ್ರಮ ಕೈಗೊಳ್ಳಲಾಗಿದೆ. ಈ ಎಂಟು ಸಹಾಯವಾಣಿಗಳು ವಾರಕ್ಕೊಮ್ಮೆ ಸುಮಾರು 500 ಕರೆಗಳನ್ನು ಸ್ವೀಕರಿಸುತ್ತಿದ್ದವು. ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಿದ ನಂತರ, ಮೊದಲ ಹಂತದಲ್ಲಿ 30 ಉದ್ಯೋಗಿಗಳನ್ನು ನೇಮಕ ಮಾಡಲಾಗುವುದು. ನಂತರ ಅಗತ್ಯಕ್ಕೆ ಅನುಗುಣವಾಗಿ, ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ರೈತರು ಯಾವ ಸಂಖ್ಯೆಗೆ ಕರೆ ಮಾಡಬೇಕು?

ಕೇಂದ್ರೀಕೃತ ಕಾಲ್ ಸೆಂಟರ್ ರೈತರಿಗಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಕರೆ ಮಾಡುವ ಮೂಲಕ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಬಹುದಾಗಿದೆ. ಇದರ ನೆರವನ್ನು ಪಡೆಯಲು ಸಂಖ್ಯೆ 18004253553 ಕ್ಕೆ ರೈತರು ಕರೆ ಮಾಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ