SM Krishna No More; ಮುಖ್ಯಮಂತ್ರಿಯಾಗಿ ಅವರು ರಾಜ್ಯವನ್ನು ಮುನ್ನಡೆಸಿದ ರೀತಿ ಅಸಾಧಾರಣವಾಗಿತ್ತು: ಸುದರ್ಶನ್, ಸಂಬಂಧಿ

|

Updated on: Dec 10, 2024 | 12:51 PM

SM Krishna No More: ಮುಖ್ಯಮಂತ್ರಿಯಾಗಿ ಎಸ್ ಎಂ ಕೃಷ್ಣ ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ, ನೀರಾವರಿ ಯೋಜನೆಗಳಿಗೆ ಅವರು ಆದ್ಯತೆ ನೀಡಿದರು, ಬೆಂಗಳೂರು-ಮೈಸೂರು ಕಾರಿಡಾರ್ ರೂಪ ತಳೆದಿದ್ದು ಅವರ ಅಧಿಕಾರಾವಧಿಯಲ್ಲಿ, ಮತ್ತು ಬೆಂಗಳೂರು ನಗರವನ್ನು ಐಟಿ ಹಬ್ ಆಗಿ ಪರಿವರ್ತಿಸಿದ ಶ್ರೇಯಸ್ಸು ಕೇವಲ ಕೃಷ್ಣ ಅವರಿಗೆ ಮಾತ್ರ ಸಲ್ಲುತ್ತದೆ ಎಂದು ಸುದರ್ಶನ್ ಹೇಳಿದರು.

ಮಂಡ್ಯ: ಎಸ್​ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರೊಂದಿಗೆ ಸಚಿವಾಲಯ ಮತ್ತು ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಸುದರ್ಶನ್ ಅಗಲಿದ ನಾಯಕನ ಚಿಕ್ಕಪ್ಪನ ಮಗ. ಕೃಷ್ಣ ಅವರ ಜೊತೆ ಮೂರು ಚುನಾವಣೆ-ಎರಡು ವಿಧಾನಸಭಾ ಮತ್ತು ಒಮ್ಮೆ ಲೋಕಸಭಾ ಚುನಾವಣೆಗಳ ಪ್ರಚಾರದಲ್ಲಿ ಭಾಗಿಯಾಗಿರುವ ವಿಷಯವನ್ನು ಸುದರ್ಶನ್ ಹೇಳುತ್ತಾರೆ. ಮುಖ್ಯಮಂತ್ರಿಯಾಗಿ ಬಹಳ ಸೊಗಸಾದ ರೀತಿಯಲ್ಲಿ ಆಡಳಿತ ನೀಡಿದರು ಮತ್ತು ಸರ್ಕಾರೀ ಅಧಿಕಾರಿಗಳಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಅದ್ಭುತವಾಗಿತ್ತು ಎಂದು ಸುದರ್ಶನ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   SM Krishna: ಕರ್ನಾಟಕಕ್ಕೆ ಎಸ್​ಎಂ ಕೃಷ್ಣ ಕೊಡುಗೆಗಳೇನು? ಚಿತ್ರ ಸಹಿತ ಮಾಹಿತಿ ಇಲ್ಲಿದೆ

Published on: Dec 10, 2024 12:36 PM