ಚಿಕ್ಕಬಳ್ಳಾಪುರ: ಚಳಿಗಾಲಕ್ಕೂ ಅವರೆಕಾಯಿಗೋ ಅದೇನು ನಂಟೋ ಗೊತ್ತಿಲ್ಲ. ಚಳಿ ಜೋರಾಗುತ್ತಿದ್ದಂತೆಯೇ ನಾಟಿ ಅವರೇಕಾಯಿ ಫಸಲು ಹೆಚ್ಚಾಗುತ್ತೆ. ಈ ಬಾರಿ ವಿಪರೀತ ಚಳಿ ಇರೋ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅವರೇಕಾಯಿ ಫಸಲು ಚೆನ್ನಾಗಿ ಬಂದಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅವರೆಕಾಯಿ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಇನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅವರೆಕಾಯಿಯದ್ದೇ ಹವಾ.. ಮಾರ್ಕೆಟ್‌ನಲ್ಲಿ ಗ್ರಾಹಕರು ಅವರೆಕಾಯಿ ನೋಡಿದ್ದೆ ತಡ, ತರಹೇವಾರಿ ತರಕಾರಿಗಳಿಗೆ ಗುಡ್ ಬೈ ಹೇಳಿ ಅವರೆಕಾಯಿಯತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿ ಅವರೆಕಾಯಿಗೆ ಚಿಕ್ಕಬಳ್ಳಾಪುರದಲ್ಲಿ 40 ರೂಪಾಯಿ ಇದೆ, ಅದರಲ್ಲೂ ಚಿಕ್ಕಬಳ್ಳಾಪುರದ ಅವರೆಕಾಯಿಗೆ ಬೆಂಗಳೂರಿನಲ್ಲಿ ಭಾರೀ ಡಿಮ್ಯಾಂಡ್ ಇದೆ.
ಹಾಗಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಕೆ.ಜಿ. ಅವರೆಕಾಯಿಗೆ 50 ರಿಂದ 60 ರೂಪಾಯಿ ಇದೆ. ಬೆಳಗಾಗುತ್ತಿದ್ದಂತೆ ಖಾಸಗಿ ಬಸ್, ಟೆಂಪೋಗಳ ಮೂಲಕ ಚಿಕ್ಕಬಳ್ಳಾಫುರದ ಅವರೆಕಾಯಿ ಬೆಂಗಳೂರಿಗೆ ಸೇರುತ್ತಿದೆ.
ಒಟ್ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಮಾಲ್ ಮಾಡುತ್ತಿರುವ ನಾಟಿ ಅವರೆಕಾಯಿ, ಗ್ರಾಹಕರ ಬಾಯಲ್ಲಿ ನೀರೂರಿಸುತ್ತ ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಷ್ಟಪಟ್ಟು ಬೆಳೆದ ರೈತರ ಜೇಬು ಕೂಡ ತುಂಬುತ್ತಿದೆ.
ಸಜ್ಜನ್ ರಾವ್ ಸರ್ಕಲ್ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್ನದ್ದೇ ಪ್ರಾಬ್ಲಂ
Published On - 7:30 am, Thu, 24 December 20