ನವದೆಹಲಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ತಳಪಾಯ ಹಾಕುವ ಕಾರ್ಯ ಈಗಾಗಲೇ ಪೂರ್ಣವಾಗಿದೆ. ಮತ್ತೊಂದು ಪದರದ ತಳಪಾಯ ನಿರ್ಮಾಣಕ್ಕೆ ಈಗ ಕರ್ನಾಟಕದ ಗ್ರಾನೈಟ್ ಕಲ್ಲುಗಳನ್ನು ಬಳಸಲು ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ. ಜೊತೆಗೆ ಉತ್ತರ ಪ್ರದೇಶದ ಮಿರ್ಜಾಪುರದ ಮರಳುಗಲ್ಲುನ್ನು ಕೂಡ ಬಳಸಲಾಗುತ್ತೆ. ಕರ್ನಾಟಕದ ಯಾವ ಭಾಗದ ಗ್ರಾನೈಟ್ ಅನ್ನು ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತದೆ. ಈ ಬಗ್ಗೆ ಅಯೋಧ್ಯೆಯ ಮಂದಿರ ಟ್ರಸ್ಟ್ ಏನು ಹೇಳಿದೆ ಎನ್ನುವುದರ ಡೀಟೈಲ್ ಇಲ್ಲಿದೆ ನೋಡಿ.
ಅಯೋಧ್ಯೆಯ ಭವ್ಯ ರಾಮಮಂದಿರದ ಗ್ರೌಂಡ್ ಪ್ಲೋರ್ 2023ರ ಡಿಸೆಂಬರ್ಗೆ ಪೂರ್ಣವಾಗಲಿದೆ. ಈ ಗ್ರೌಂಡ್ ಪ್ಲೋರ್ ನಲ್ಲೇ ಗರ್ಭಗುಡಿ ಇರಲಿದ್ದು, ಇದರಲ್ಲಿ ರಾಮಲಲ್ಲಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಇಲ್ಲೇ ಭಕ್ತರು ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತೆ. ರಾಮಮಂದಿರ ನಿರ್ಮಾಣಕ್ಕಾಗಿ ತಳಪಾಯ ನಿರ್ಮಿಸುವ ಕಾರ್ಯ ಮುಗಿದಿದೆ ಎಂದು ಇತ್ತೀಚೆಗೆ ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದರು. ಆದರೇ, ಇನ್ನೊಂದು ಪದರವನ್ನು ಕರ್ನಾಟಕದ ಗ್ರಾನೈಟ್ ಹಾಗೂ ಉತ್ತರ ಪ್ರದೇಶದ ಮಿರ್ಜಾಪುರದ ಮರಳುಗಲ್ಲುನ್ನು ಬಳಸಿ ನಿರ್ಮಿಸಲು ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗ್ರಾನೈಟ್ ಅನ್ನು ಈಗ ಮಂದಿರ ಮತ್ತೊಂದು ಪದರ ನಿರ್ಮಾಣಕ್ಕೆ ಬಳಸಲು ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ. ಇದುವರೆಗೂ ತಳಪಾಯಕ್ಕೆ 48 ಪದರದ ರೋಲರ್ ಕಾಂಪ್ಯಾಕ್ಟಡ್ ಕಾಂಕ್ರಿಟ್ (ಆರ್‌ಸಿಸಿ) ಹಾಕಲಾಗಿದೆ.
ಈಗ ಮೊದಲ ಹಂತದ ತಳಪಾಯ ನಿರ್ಮಾಣ ಮುಗಿದಿದೆ. ಈ ಕಾಂಕ್ರೀಟ್ ಬೇಸ್ ಮೇಲೆ ಮತ್ತೊಂದು ಪದರವನ್ನು ಕರ್ನಾಟಕದ ಗ್ರಾನೈಟ್ ಹಾಗೂ ಮಿರ್ಜಾಪುರದ ಮರಳುಗಲ್ಲುನ್ನು ಬಳಸಿ ನಿರ್ಮಿಸುತ್ತೇವೆ ಎಂದು ಅಯೋಧ್ಯೆಯ ರಾಮಮಂದಿರದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಜೊತೆಗೆ ರಾಜಸ್ಥಾನದ ಬನ್ಸಿ ಪರಪುರ ಪ್ರದೇಶದ ಒಂದು ಲಕ್ಷ ಕ್ಯೂಬಿಕ್ ಅಡಿ ಕಲ್ಲುಗಳು ಕೂಡ ನಿರ್ಮಾಣಕ್ಕೆ ರೆಡಿಯಾಗಿವೆ.
ದೇವಾಲಯದ ಕಾಂಪ್ಲೆಕ್ಸ್ ಅನ್ನು ಎಲ್ ಅಂಡ್ ಟಿ ಕಂಪನಿಯು ನಿರ್ಮಿಸುತ್ತಿದೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಕಂಪನಿಯು ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಕಂಪನಿ ಆಗಿ ಕಾರ್ಯನಿರ್ವಹಿಸುತ್ತಿದೆ. ದೇವಾಲಯದ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 900 ರಿಂದ 1000 ಕೋಟಿ ರೂಪಾಯಿ ವೆಚ್ಚವಾಗಲಿದೆ. ದೇವಾಲಯ ಕಾಂಪ್ಲೆಕ್ಸ್ ಒಟ್ಟಾರೆ 110 ಎಕರೆ ವಿಶಾಲ ಜಾಗದಲ್ಲಿ ಇರಲಿದೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯರಂಗಬಳ್ಳಿಯಲ್ಲಿ ಈ ಮೊದಲು ಕಲ್ಲು ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿತ್ತು. ಆದರೇ, ಈಗ ಕಲ್ಲು ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿಲ್ಲ. ಗ್ರಾನೈಟ್ ಗಣಿಗಾರಿಕೆ ಮೇಲೆ ರಾಜ್ಯ ಸರ್ಕಾರ ನಿಷೇಧ ವಿಧಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೇ, ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕರ್ನಾಟಕದ ಕೊಳ್ಳೇಗಾಲದ ಗ್ರಾನೈಟ್ ಕಲ್ಲುಗಳನ್ನೇ ಮಂದಿರದ ತಳಪಾಯದ ಮತ್ತೊಂದು ಪದರ ನಿರ್ಮಾಣಕ್ಕೆ ಬಳಸುವುದಾಗಿ ಹೇಳಿದ್ದಾರೆ. ಹೀಗಾಗಿ ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಏನಾದರೂ, ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೇ, ರಾಜ್ಯ ಸರ್ಕಾರ ಕೊಳ್ಳೇಗಾಲ, ಹನೂರು, ಯರಂಗಬಳ್ಳಿ ಪ್ರದೇಶಗಳಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಬಳಸಲು ಅನುಕೂಲವಾಗುಂತೆ ಗ್ರಾನೈಟ್ ಗಣಿಗಾರಿಕೆಗೆ ವಿಶೇಷ ಅನುಮತಿ ನೀಡಬಹುದು. ಆದರೇ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಸದ್ಯ ಯಾವುದೇ ಗ್ರಾನೈಟ್ ಗಣಿಗಾರಿಕೆಯು ನಡೆಯುತ್ತಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಕೂಡ ಹೇಳಿದ್ದಾರೆ.
ಆದರೆ, ಈಗಾಗಲೇ ಕೊಳ್ಳೇಗಾಲ ಹಾಗೂ ಮಿರ್ಜಾಪುರದಿಂದ ಕಲ್ಲುಗಳ ಪೂರೈಕೆ ಆರಂಭವಾಗಿದೆ ಎಂದು ದೇವಾಲಯ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ. 3 ದಶಕಗಳ ಕಾಲ ರಾಮಭಕ್ತರಿಂದ ಸಂಗ್ರಹಿಸಿರುವ 2 ಲಕ್ಷ ಇಟ್ಟಿಗೆಗಳನ್ನ ಕೂಡ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತೆ. ರಾಮಜನ್ಮಭೂಮಿ ನಿರ್ಮಾಣ ಕಾರ್ಯಾಲಯದಲ್ಲಿರುವ ಇಟ್ಟಿಗೆಗಳನ್ನು ಮಂದಿರ ನಿರ್ಮಾಣ ಕಾರ್ಯದ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತೆ ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.
ನ್ಯೂಸ್ ಏಜೆನ್ಸಿ ಪಿಟಿಐ ವರದಿ ಪ್ರಕಾರ, ರಾಮಮಂದಿರ ಕಾಂಪ್ಲೆಕ್ಸ್ ನಲ್ಲಿ ಆರು ದೇವಾಲಯಗಳನ್ನು ನಿರ್ಮಾಣ ಮಾಡಲಾಗುತ್ತೆ. ಇವುಗಳ ಬ್ಲೂಪ್ರಿಂಟ್ ಕೂಡ ರೆಡಿಯಾಗಿದೆ. ಭಗವಾನ್ ಸೂರ್ಯ, ಭಗವಾನ್ ಗಣೇಶ್, ಶಿವ, ದುರ್ಗಾ, ವಿಷ್ಣು, ಬ್ರಹ್ಮ ದೇವಾಲಯಗಳನ್ನು ರಾಮಜನ್ಮಭೂಮಿ ಆವರಣದಲ್ಲೇ ನಿರ್ಮಾಣ ಮಾಡಲಾಗುತ್ತೆ. ಈ ಆರು ದೇವಾಲಯಗಳನ್ನು ರಾಮಮಂದಿರದ ಹೊರ ವಲಯದಲ್ಲಿ ನಿರ್ಮಾಣ ಮಾಡಲಾಗುತ್ತೆ. ಆದರೇ, ರಾಮಮಂದಿರದ ಆವರಣದಲ್ಲೇ ಈ ಆರು ದೇವಾಲಯಗಳು ಇರಲಿವೆ. ಶ್ರೀರಾಮನ ಪೂಜಿಸುವುದರ ಜೊತೆಗೆ ಈ ಆರು ದೇವರುಗಳನ್ನು ಪೂಜಿಸುವುದು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದುದ್ದು ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾರವರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುವ ಹಾಗೆ ರಾಮಮಂದಿರದ ಲೋಕಾರ್ಪಣೆ 2023 ರಲ್ಲಿ ಆಗುತ್ತದೆಯೇ?
(Ayodhya Ram Temple Karnataka Kollegal Granite will be Used for Construction of Ram Mandir)