ಮುಧೋಳ: ದಿಬ್ಬಣದ ಬಸ್​ಗೆ ಲಾರಿ ಡಿಕ್ಕಿ- ಹೊತ್ತಿ ಉರಿದ ಬಸ್​ನಲ್ಲಿದ್ದ ಇಬ್ಬರು ಸಜೀವ ದಹನ

|

Updated on: Mar 03, 2021 | 7:53 PM

ಅಪಘಾತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.  ಮೃತರನ್ನು ಈರವ್ವ ಗಾಣಿಗೇರ (70) ಹಾಗೂ ಅಣ್ಣವ್ವ ಗಾಣಿಗೇರ (58) ಎಂದು ಗುರುತಿಸಲಾಗಿದೆ.

ಮುಧೋಳ: ದಿಬ್ಬಣದ ಬಸ್​ಗೆ ಲಾರಿ ಡಿಕ್ಕಿ- ಹೊತ್ತಿ ಉರಿದ ಬಸ್​ನಲ್ಲಿದ್ದ ಇಬ್ಬರು ಸಜೀವ ದಹನ
ಹೊತ್ತಿ ಉರಿದ ಬಸ್​
Follow us on

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಸಮೀಪ ಇಂದು ಸಂಜೆ ಲಾರಿ ಹಾಗೂ ಮಿನಿ ಲಕ್ಸುರಿ ಬಸ್​ ನಡುವೆ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಬಸ್​ ಹೊತ್ತಿ ಉರಿದಿದೆ. ಈ ವೇಳೆ ಇಬ್ಬರು ಸಜೀವ ದಹನವಾಗಿದ್ದಾರೆ. 

ಮುಧೋಳ-ಯಾದವಾಡದ ರಸ್ತೆಯ ಉತ್ತೂರು ಫ್ಯಾಕ್ಟರಿ ಬಳಿ ಲಾರಿ ಹಾಗೂ ಬಸ್​ಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಈ ವೇಳೆ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು, ಮಿನಿ ಲಕ್ಸುರಿ ಬಸ್ ಪಲ್ಟಿ ಆಗಿದೆ. ಬಸ್​ ಬೀಳುತ್ತಿದ್ದಂತೆ, ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ಬಸ್​ನಿಂದ ಇಳಿದಿದ್ದಾರೆ.

ನಂತರ ನೋಡ ನೋಡುತ್ತಿದ್ದಂತೆ ಬಸ್​ ಹೊತ್ತಿ ಉರಿದಿದೆ. ಅಪಘಾತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.  ಮೃತರನ್ನು ಈರವ್ವ ಗಾಣಿಗೇರ (70) ಹಾಗೂ ಅಣ್ಣವ್ವ ಗಾಣಿಗೇರ (58) ಎಂದು ಗುರುತಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದವರು. ಅಥಣಿ ತಾಲ್ಲೂಕಿನ ಚಮಕೇರಿ ಗ್ರಾಮಕ್ಕೆ ಮದುವೆಗೆ ಹೋಗಿದ್ದರು. ಚಮಕೇರಿ ಗ್ರಾಮದಿಂದ ಯಾದವಾಡ ಗ್ರಾಮಕ್ಕೆ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿದ್ದಾರೆ. ಮುಧೋಳ ಅಗ್ನಿಶಾಮಕ ದಳ‌ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ‌ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: Rishab Shetty | ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

Published On - 7:50 pm, Wed, 3 March 21