ಮನೆಗೆ ಬಂದ ಹಾವನ್ನೆ ತನ್ನ ಮೃತ ಗಂಡ ಎಂದು ತಿಳಿದು ಹಾವಿನ ಜೊತೆ ನಾಲ್ಕು ದಿನ ವಾಸ ಮಾಡಿದ ಅಜ್ಜಿ

ಅಜ್ಜಿಯೊಬ್ಬರು ಮನಗೆ ಬಂದ ಹಾವಿನ ಜೊತೆ ನಾಲ್ಕು ದಿನ ಕಳೆದಿರುವ ಘಟನೆ  ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಗೆ ಬಂದ ಹಾವನ್ನೆ ತನ್ನ ಮೃತ ಗಂಡ ಎಂದು ತಿಳಿದು ಹಾವಿನ ಜೊತೆ ನಾಲ್ಕು ದಿನ ವಾಸ ಮಾಡಿದ ಅಜ್ಜಿ
ಹಾವಿನೊಂದಿಗೆ ನಾಲ್ಕು ದಿನ ಕಳೆದ ಅಜ್ಜಿ
Edited By:

Updated on: Jun 06, 2022 | 8:28 PM

ಬಾಗಲಕೋಟೆ: ಅಜ್ಜಿಯೊಬ್ಬರು ಮನಗೆ ಬಂದ ಹಾವಿನ ಜೊತೆ ನಾಲ್ಕು ದಿನ ಕಳೆದಿರುವ ಘಟನೆ  ಬಾಗಲಕೋಟೆ (Bagalakote) ಜಿಲ್ಲೆ ರಬಕವಿ-ಬನಹಟ್ಟಿ (Rabakavi-Banhatti) ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಜ್ಜಿ ಹೆಸರು ಶಾರವ್ವ ಮೌನೇಶ್ ಕಂಬಾರ ಆಗಿದ್ದು ಇವರು ಮಾನಸಿಕ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಅಜ್ಜಿಯ ಪತಿ ಮೃತ ಹೊಂದಿದ್ದು ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ಭಾವಿಸಿ ಹಾವಿನ ಜೊತೆ ನಾಲ್ಕು ದಿವಸ ಕಳೆದಿದ್ದಾರೆ.

ಮನೆಯಲ್ಲಿ ಹಾಸಿರುವ ಚಾಪೆಯ ಒಂದು ಮೂಲೆಯಲ್ಲಿ ಮಿಸುಗಾಡುತ್ತಿರುವ ಹಾವಿನ ಪಕ್ಕದಲ್ಲಿ ಭಯ ಪಡದೇ  ಹಾಯಾಗಿ ಅಜ್ಜಿ ಹಾಯಾಗಿ ಕುಳಿತಿದ್ದಾರೆ.  ವಿಷಯ ತಿಳಿದು ಕೂಡಲೇ ಊರ ಜನರು ಅಜ್ಜಿ ಮತ್ತು ಹಾವನ್ನು ನೋಡಲು ತಂಡೋಪ ತಂಡವಾಗಿ ಆಗಮಿಸಿದ್ದಾರೆ.

ಇದನ್ನು ಓದಿ: ವಿಜಯಪುರ ಉಪ‌ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚಾವತಾರ; ಸರ್ಕಾರಿ ಶುಲ್ಕಕ್ಕಿಂತಲು ಹೆಚ್ಚಿಗೆ ಹಣ ಪಡೆಯುತ್ತಿರುವ ಆರೋಪ

ಶಾರವ್ವ ಅವರ ಪತಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರಂತೆ.ಈಕೆಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದು,ಹೆಣ್ಣು ಮಗಳ ಮದುವೆಯಾಗಿದೆ.ಇಬ್ಬರು ಮಕ್ಕಳು ಬೇರೆ ಊರಲ್ಲಿದ್ದು,ಒಬ್ಬ ಮಗ ಆಗಾಗ ಬಂದು ಹೋಗುತ್ತಾನೆ.ಮನೆಯಲ್ಲಿ ಏಕಾಂಗಿತನದಿಂದ ಖಿನ್ನತೆ, ಗಂಡ ಅಗಲಿದ ದುಃಖದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇದನ್ನು ಓದಿ: RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ; ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ನಾಲ್ಕು ದಿನಗಳ ಹಿಂದೆ ರಾತ್ರಿ ಮಲಗಿದ್ದಾಗ ಅಜ್ಜಿ ಹಾಸಿಗೆಯಲ್ಲಿ ಹಾವು ಬಂದಿದೆ. ಆದರೆ, ಹಾವು ಕಂಡು ಅಜ್ಜಿ ಕೂಗಾಟ, ಚೀರಾಟ ಏನನ್ನೂ ಮಾಡದೇ ಅದರ ಜೊತೆಗೆ ಇದ್ದಾಳೆ. ಹೀಗೆ ಎರಡ್ಮೂರು ದಿನಗಳ ಕಳೆದ ಮೇಲೆ ಈ ವಿಚಾರ ಅನೇಕರಿಗೆ ತಿಳಿದು ಅಜ್ಜಿ ಮನೆಗೆ ಹೋಗಿ ನೋಡಿದ್ದಾರೆ. ಹಾವು ಹೊರಗೆ ಕಳುಹಿಸುವಂತೆ ಹೇಳಿದರೂ ಅಜ್ಜಿ ಅದಕ್ಕೆ ಒಪ್ಪಿರಲಿಲ್ಲ. ನಾಲ್ಕು ದಿನಗಳ ಕಾಲ ಅದರ ಜೊತೆಗೆ ಇದ್ದಾರೆ. ಇನ್ನು ಹಾವಿಗೆ ಪೆಟ್ಟು ಆಗಿದ್ದು, ಅದು ಸ್ಥಳದಿಂದ ಬೇರೆ ಕಡೆಗೆ ಹೋಗದಂತೆ ಅಲ್ಲಿಯೇ ಇತ್ತು ಎನ್ನಲಾಗುತ್ತಿದೆ.  ಕೊನೆಗೆ ನೆರೆಹೊರೆಯವರು ಸೇರಿ ಅಜ್ಜಿಗೆ ತಿಳಿಹೇಳಿ ಮನೆಯಲ್ಲಿ ಇದ್ದ ಹಾವನ್ನು ನದಿ ಹತ್ತಿರಕ್ಕೆ ಹೋಗಿ ಬಿಟ್ಟು ಬಂದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.