RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ; ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

RSS ಚಡ್ಡಿ ಸುಟ್ಟು ಹಾಕುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಆರ್ಎಸ್ಎಸ್ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್ ವಿಚಾರಕ್ಕೆ ಸಂಬಂಧಿಸಿ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ.

RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ; ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
Follow us
TV9 Web
| Updated By: ಆಯೇಷಾ ಬಾನು

Updated on:Jun 06, 2022 | 7:39 PM

ಚಿಕ್ಕೋಡಿ: ಕಳೆದ ಬಾರಿ ಎರಡು ಬಿಜೆಪಿ ಒಂದು ಕಾಂಗ್ರೆಸ್, ಒಂದು ಜೆಡಿಎಸ್ ಪಾಲಾಗಿತ್ತು. ಈ ಬಾರಿ ನಮ್ಮ ಎಲ್ಲ ಕ್ಷೇತ್ರದಲ್ಲೂ ಬಹುಮತ ಸಾಧಿಸುತ್ತೇವೆ ಎಂದು ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯಾ ನಿಷೇಧ ಹಾಗೂ ಮತಾಂತರ ಕಾಯ್ದೆ ಜಾರಿಗೆ ತರಲು ಸಮಸ್ಯೆಯಾಯ್ತು. ಈ ಚುನಾವಣೆ ಹಗುರವಾಗಿ ತೆಗೆದುಕೊಳ್ಳಲ್ಲ. ಸವಾಲಾಗಿ ತಗೆದುಕೊಳ್ಳಬೇಕು. ಶಿಕ್ಷಕರು ಹಾಗೂ ಪದವಿಧರ ಮತದಾರರು ಇದ್ದಾರೆ. ಮೈಸೂರಿನಲ್ಲಿ ಮೊದಲ ಬಾರಿ ಬಿಜೆಪಿ ಬಂದಿದೆ. ಹುಬ್ಬಳ್ಳಿ ಒಂದು ಬಾರಿಯೂ ಬಂದಿಲ್ಲ. ಹೊರಟ್ಟಿ ಬಿಜೆಪಿಗೆ ಬಂದಿರುವುದರಿಂದ ಹುಬ್ಬಳ್ಳಿ ಕೂಡ ಈ ಬಾರಿ ಬರುತ್ತೆ. ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕರು ಮತದಾರರ ಸಂಪರ್ಕದಲ್ಲಿ ಇರಬೇಕು. ಕಾಂಗ್ರೆಸ್ ತಂತ್ರ ಮಾಡಿದ್ದಾರೆ. ಬೋಗಸ್ ಓಟ್ ಬಗ್ಗೆ ಹೇಳುತ್ತಿದ್ದಾರೆ. ಮತದಾರರ ಮನವಲಿಸಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು ಎಂದು ಪ್ರಚಾರ ಸಭೆಯಲ್ಲಿ ಶಾಸಕರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಟೀಲು ಕರೆ ನೀಡಿದ್ದಾರೆ. ಇದನ್ನೂ ಓದಿ: Trending: ಚಿಟ್ಟೆಗಾಗಿ ಗುಂಪು ದಾಳಿ, ಮನರಂಜನೆ ವಿಡಿಯೋ ನೀವೂ ನೋಡಿ

ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ ಇನ್ನು ಮತ್ತೊಂದೆಡೆ RSS ಚಡ್ಡಿ ಸುಟ್ಟು ಹಾಕುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಆರ್ಎಸ್ಎಸ್ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್ ವಿಚಾರಕ್ಕೆ ಸಂಬಂಧಿಸಿ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ. RSS ವಿಷಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ ಎಂದು ರಾಯಬಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾರ್ನಿಂಗ್ ಕೊಟ್ಟಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಭಕ್ತಿ ನಿರ್ಮಾಣ ಮಾಡುವ ಕಾರ್ಯ ಮಾಡುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ವಿಶ್ವಾಸದಲ್ಲಿ ನಂಬಿಕೆ ಇರುವಂತಹದ್ದು. RSS ಸಾಮಾಜಿಕ ಸೇವಾ ಸಂಸ್ಥೆ. ಅಂತಹ ಸಂಸ್ಥೆ ರಾಜಕಾರಣಕ್ಕೆ ತರುವುದು ಸಿದ್ದರಾಮಣ್ಣಗೆ ಶೋಭೆ ಅಲ್ಲ. ತುಷ್ಟಿಕರಣ ನೀತಿ ಅಲ್ಪಸಂಖ್ಯಾತರ ಮತಬ್ಯಾಂಕಿಗೋಸ್ಕರ ಈ ರೀತಿ ಶಬ್ದ ಬಳಕೆ ಮಾಡುತ್ತಾರೆ. ಮಾಜಿ‌ ಮುಖ್ಯಮಂತ್ರಿಯಾಗಿರುವಂತ ಸಿದ್ದರಾಮಯ್ಯ ಅವರಿಗೆ ಶೋಭೆ ಅಲ್ಲ. RSS ಲಕ್ಷಾಂತರ ಜನ ಕಾರ್ಯಕರ್ತರಿರುವಂತಹ ಸಂಸ್ಥೆ. ಸಂಘ ದೇಶ ಕಾರ್ಯ ಮಾಡುವಂತಹದ್ದು, ಯಾರ ಟೀಕೆ ಟಿಪ್ಪಣೆ ಮೇಲೆ ನಡೆಯಲ್ಲ. ಸಂಘ ನಿಷೇಧ ಮಾಡಲು ನೆಹರೂ ಕೈ ಹಾಕಿದ್ರು ಆಗಲಿಲ್ಲ. ಇಂದಿರಾ ಗಾಂಧಿ ಸಂಘ ನಿಷೇಧ ಮಾಡಲು ಅವರು ಕೈ ಹಾಕಿದ್ರು ಅವರಿಂದಲು ಆಗಲಿಲ್ಲ. ಈಗ ಸಿದ್ರಾಮಯ್ಯ RSS ವಿಷಯಕ್ಕೆ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಸುಟ್ಟು ಹೋಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನೂಪುರ್ ಶರ್ಮಾಗೆ ಸಮನ್ಸ್ ಕಳಿಸಲಿದೆ ಮುಂಬೈ ಪೊಲೀಸ್

Published On - 7:30 pm, Mon, 6 June 22