
ಬಾಗಲಕೋಟೆ, ಜೂನ್ 17: ದೆವ್ವ ಬಿಡಿಸುವುದಾಗಿ ಹೇಳಿ ಜ್ಯೋತಿಷಿಯು (Astrologer) ಮಹಿಳೆಗೆ ವಂಚಿಸಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ತೇರದಾಳ ಪಟ್ಟಣದ ಲಕ್ಷ್ಮಿ ಲಾಗಲೋಟಿ ವಂಚನೆಗೊಳಗಾದವರು. ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ವಂಚಿಸಿದ ಆರೋಪಿ. ಲಕ್ಷ್ಮಿ ಲಾಗಲೋಟಿ ಅವರು ತೇರದಾಳದಲ್ಲಿನ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಲಕ್ಷ್ಮಿ ಅವರ ಎರಡು ವರ್ಷದ ಮಗುವಿಗೆ ಮೇಲಿಂದ ಮೇಲೆ ಜ್ವರ ಬರುತ್ತಿತ್ತು. ಸುಮಾರು ದಿನಗಳಿಂದ ಕಡಿಮೆಯಾಗಿರಲಿಲ್ಲ.
ಆಗ, ಲಕ್ಷ್ಮಿ ಅವರ ಸ್ನೇಹಿತೆ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಜ್ಯೋತಿಷಿ ಸೀಮಾಶಾಂಭವಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಂತರ ಒಂದು ದಿನ ಲಕ್ಷ್ಮಿ ಅವರಿಗೆ ಕರೆ ಮಾಡಿದ ಜ್ಯೋತಿಷಿ ಸೀಮಾಶಾಂಭವಿ ನಿಮ್ಮ ಮಗುವಿನ ದೇಹದಲ್ಲಿ ನಿಮ್ಮ ತಾಯಿ ದೆವ್ವವಾಗಿ ಸೇರಿಕೊಂಡಿದ್ದಾಳೆ. ಹೋಮ ಹವನ, ವಿಶೇಷ ಪೂಜೆ ಮಾಡಬೇಕು ಎಂದು ಹೇಳಿದ್ದಾಳೆ. ನಂತರ, ಮಗುವಿನ ಹೆಸರಲ್ಲಿ ಪೂಜೆ, ನವಗ್ರಹ ಹೋಮ ಸೇರಿದಂತೆ ವಿವಿಧ ಹೋಮ ಮಾಡಿದ್ದೇನೆ ಎಂದು ಸೀಮಾಶಾಂಭವಿಯು ಲಕ್ಷ್ಮಿ ಅವರಿಗೆ ವಿಡಿಯೋ ಕಳುಹಿಸಿ, ಹಣ ನೀಡುವಂತೆ ಹೇಳಿದ್ದಾಳೆ. ಇದನ್ನು ನಂಬಿದ ಲಕ್ಷ್ಮಿಯವರು ಸೀಮಾಶಾಂಭವಿ ಕೇಳಿದಾಗಲೆಲ್ಲ ಪೋನ್ ಪೆ, ಆರ್ಟಿಜಿಎಸ್ ಮೂಲಕ ಬರೊಬ್ಬರಿ 28 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್, ಅತ್ಯಾಚಾರ ಯತ್ನ: ಕೇರಳದ ಪೆರಿಂಗೋಟ್ಟುಕ್ಕಾರದ ಅರ್ಚಕ ಬೆಂಗಳೂರಿನಲ್ಲಿ ಬಂಧನ
ಲಕ್ಷ್ಮಿ ಚಿನ್ನ ಮಾರಿ, ತಾಯಿಯ ಠೇವಣಿ ಹಣವನ್ನು ಸೀಮಾಶಾಂಭವಿಗೆ ನೀಡಿದ್ದಾರೆ ಕೈ ಸುಟ್ಟುಕೊಂಡಿದ್ದಾರೆ. ಜ್ಯೀತಿಷಿ ಸೀಮಾಶಾಂಭವಿಯು ಹಣ ಪಡೆದು ಲಕ್ಷ್ಮಿ ಅವರಿಗೆ ವಂಚಿಸಿದ್ದಾಳೆ. ಘಟನೆ ಸಂಬಂಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.