ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ; ಮೂವರು ವಶಕ್ಕೆ

ಬಾಗಲಕೋಟೆಯ ಕನ್ನೊಳ್ಳಿ ಗ್ರಾಮದಲ್ಲಿ ಕಾರಿನಲ್ಲಿ ವ್ಯಕ್ತಿಯ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಕಸ್ಮಿಕ ಸಾವಲ್ಲ ಇದೊಂದು ಭೀಕರ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಪತ್ನಿಯೊಂದಿಗಿನ ಅನೈತಿಕ ಸಂಬಂಧದ ಕಾರಣಕ್ಕೆ ಸಂಬಂಧಿಯೇ ವ್ಯಕ್ತಿಯನ್ನು ಕೊಲೆ ಮಾಡಿ, ನಂತರ ಶವವನ್ನು ಕಾರಿನಲ್ಲಿಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನದ ನಾಟಕ ಆಡಿದ್ದ ಎಂಬುದು ಗೊತ್ತಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ; ಮೂವರು ವಶಕ್ಕೆ
ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ
Image Credit source: Tv9 Kannada
Edited By:

Updated on: Apr 21, 2026 | 4:11 PM

ಬಾಗಲಕೋಟೆ, ಏಪ್ರಿಲ್​​ 21: ಜಮಖಂಡಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಕಾರಲ್ಲೇ ವ್ಯಕ್ತಿಯೋರ್ವ ದಹನವಾಗಿರುವ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಮೃತನನ್ನು ಅದೇ ಗ್ರಾಮದ ಕೃಷಿಕ ಸೋಮು ಪಡಸಲಗಿ (36) ಎಂದು ಗುರುತಿಸಲಾಗಿದ್ದು, ಇದು ಆಕಸ್ಮಿಕ ಸಾವಲ್ಲ ಬದಲಾಗಿ ಕೊಲೆ ಎಂಬುದು ತನಿಖೆ ವೇಳೆ ಬಯಲಾಗಿದೆ. ತನ್ನ ಪತ್ನಿಯ ಜೊತೆ ಈತ ಅನೈತಿಕ ಸಂಬಂಧ ಹೊಂದಿರುವ ಹಿನ್ನೆಲೆ ಸೋಮು ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಮತ್ತು ಆತನ ಸಹಚರರೇ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನೈತಿಕ ಸಂಬಂಧ ವಿಚಾರವಾಗಿ ಮೃತ ಸೋಮು ಪಡಸಲಗಿ ಮತ್ತು ಸದಾಶಿವ ಪಡಸಲಗಿ ನಡುವೆ ಹಳೆಯ ವೈಷಮ್ಯ ಇತ್ತು. ಈ ನಡುವೆ ಬಸವಜಯಂತಿ ಶುಭದಿನ ಎಂದು ಸೋಮು ಹೊಸ ಕಾರು ಖರೀದಿಸಿದ್ದ.ಪೂಜೆ ಮಾಡಿಸಿಕೊಂಡು‌ ಊರ ಕಡೆ ಬರುತ್ತಿದ್ದ ಆತನನ್ನು ಹಿಂಬಾಲಿಸಿರುವ ಸದಾಶಿವ ಪಡಸಲಗಿ ಮತ್ತು ಆತನ ಸ್ನೇಹಿತರಾದ ರವಿ ಪಾಟಿಲ್ ಮತ್ತು ನಾವಿ, ಸೋಮು ಇದ್ದ ಕಾರನ್ನು ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ. ನೋಡ ನೋಡುತ್ತಿದ್ದಂತೆ ಸೋಮು ಪಡಸಲಗಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕಾರಲ್ಲಿ ಕೂರಿಸಿ, ಕಾರಲ್ಲೇ ಇದ್ದ ಪೆಟ್ರೋಲ್​​ನ ಸೋಮು ಶವಕ್ಕೆ ಎರಚಿದ್ದಾರೆ. ನಂತರ ಕಾರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆ ಮೂಲಕ ಕಾರಿಗೆ ಬೆಂಕಿ ತಗುಲಿ ಸೋಮು ಸಜೀವ ದಹನವಾಗಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಲವ್‌ ಜಿಹಾದ್​ ಆರೋಪಕ್ಕೆ ಬಿಗ್ ಟ್ವಿಸ್ಟ್; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ಇನ್ನು ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್. ಪಿ. ಸಿದ್ದಾರ್ಥ್ ಗೋಯೆಲ್ ಮತ್ತು ಸಾವಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ನಡೆದ ಅರ್ಧ ಗಂಟೆಯಲ್ಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೋಮು ಸದಾಶಿವ ಪಡಸಲಗಿ ಪತ್ನಿ ಜೊತೆ ಮೂರು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ.ಇದರಿಂದ ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂಬ ವಿಚಾರವೂ ಕೊಲೆ ಬೆನ್ನಲ್ಲೇ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us