Double confusion: 1 ಪೋಸ್ಟ್ -2 ಅಧಿಕಾರಿಗಳು: ಇದು ಬಾಗಲಕೋಟೆ ನಗರಸಭೆಯಲ್ಲಿ ‘ಕಿಸ್ಸಾ ಕುರ್ಸಿ ಕಾ’ ಕಥೆ-ವ್ಯಥೆ

|

Updated on: Oct 17, 2023 | 11:34 AM

ಬಾಗಲಕೋಟೆ ನಗರಸಭೆ (ಸಿಎಂಸಿ) ಆಯುಕ್ತರನ್ನಾಗಿ ಜಾಧವ್ ಅವರ ನೇಮಕವನ್ನು ಪ್ರಶ್ನಿಸಿ ಹಾಲಿ ಆಯುಕ್ತ ವಾಸಣ್ಣ ಅವರು ಕೆಎಟಿ ಮೊರೆ ಹೋಗಿದ್ದರು. ವಾದ ಆಲಿಸಿದ ಕೆಎಟಿ ವಾಸಣ್ಣ ಅವರನ್ನು ಸಿಎಂಸಿ ಆಯುಕ್ತರಾಗಿ ಮುಂದುವರಿಸುವಂತೆ ಆದೇಶ ನೀಡಿದ್ದರೂ ಜಾಧವ್ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪರಿಣಾಮವಾಗಿ, ವಾಸಣ್ಣ ಕಮಿಷನರ್ ಆಗಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದಾಗ, ಜಾಧವ್ ತಮ್ಮ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ಈಗ, ವಾಸಣ್ಣ ಮತ್ತು ಜಾಧವ್ ಇಬ್ಬರೂ ಒಂದೇ ಕ್ಯುಬಿಕಲ್‌ನಲ್ಲಿ ಕುಳಿತಿದ್ದಾರೆ- ಇಬ್ಬರೂ ಆಯುಕ್ತರಾಗಿ!

Double confusion: 1 ಪೋಸ್ಟ್ -2 ಅಧಿಕಾರಿಗಳು: ಇದು ಬಾಗಲಕೋಟೆ ನಗರಸಭೆಯಲ್ಲಿ ಕಿಸ್ಸಾ ಕುರ್ಸಿ ಕಾ ಕಥೆ-ವ್ಯಥೆ
ಇದು ಬಾಗಲಕೋಟೆ ನಗರಸಭೆಯಲ್ಲಿ 'ಕಿಸ್ಸಾ ಕುರ್ಸಿ ಕಾ' ಕಥೆ-ವ್ಯಥೆ
Follow us on

ಬೆಂಗಳೂರು: ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳು ಏಕಕಾಲದಲ್ಲಿ ಕಮಿಷನರ್ ಹುದ್ದೆಯನ್ನು ಅಲಂಕರಿಸಿದ್ದಾರೆ! ಇಬ್ಬರೂ ಅಧಿಕಾರಿಗಳು ಒಂದೇ ಕಚೇರಿಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಒಂದೇ ಕ್ಯುಬಿಕಲ್ ಅನ್ನು ಸಹ ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಗಲಕೋಟೆ ನಗರಸಭೆ (ಸಿಎಂಸಿ -Bagalkote City Municipal Council) ಆಯುಕ್ತರಾಗಿದ್ದ ವಾಸಣ್ಣ ಅವರ ವರ್ಗಾವಣೆಗೆ (Transfer) ತಡೆಯಾಜ್ಞೆ ನೀಡಿದ ನಂತರ ಈ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಅವರು ಸ್ಟೇ ಪಡೆಯುವ ವೇಳೆಗೆ ಅವರ ಸ್ಥಾನಕ್ಕೆ ರಮೇಶ್ ಜಾಧವ್ ಅವರನ್ನು ನೇಮಿಸಲಾಯಿತು. ಈಗ, ಇಬ್ಬರೂ ಅಧಿಕಾರಿಗಳು ಅಕ್ಷರಶಃ ಒಂದೇ ಸೂರಿನಡಿ ಕಾರ್ಯನಿರ್ವಹಿಸುತ್ತಿದ್ದಾರೆ – ಅದೂ ಒಂದೇ ಸಮಯದಲ್ಲಿ!

ಜಾಧವ್ ಅವರನ್ನು ಆಯುಕ್ತರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ವಾಸಣ್ಣ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ -KAT) ಮೊರೆ ಹೋಗಿದ್ದರು. ವಾದ ಆಲಿಸಿದ ಕೆಎಟಿ, ವಾಸಣ್ಣ ಅವರನ್ನು ಸಿಎಂಸಿ ಆಯುಕ್ತರನ್ನಾಗಿ ಮುಂದುವರಿಸುವಂತೆ ಆದೇಶ ನೀಡಿದ್ದರೂ ಜಾಧವ್ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪರಿಣಾಮವಾಗಿ, ವಾಸಣ್ಣ ಕಮಿಷನರ್ ಆಗಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದಾಗ, ಜಾಧವ್ ತಮ್ಮ ಹುದ್ದೆಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಈಗ, ವಾಸಣ್ಣ ಮತ್ತು ಜಾಧವ್ ಇಬ್ಬರೂ ಒಂದೇ ಕ್ಯುಬಿಕಲ್‌ನಲ್ಲಿ ಕುಳಿತಿದ್ದಾರೆ – ಇಬ್ಬರೂ ಆಯುಕ್ತರಾಗಿ!

Also Read: ಮಂಡ್ಯದ ಬಡ ರೈತ ಕುಟುಂಬದ ರಾಘವೇಶ್ ಗದಗ ಪಶು ವೈದ್ಯ ಕಾಲೇಜಿನಲ್ಲಿ 16 ಚಿನ್ನದ ಪದಕದೊಂದಿಗೆ ಪದವಿ ಸಾಧನೆ! 

ಜಾಧವ್ ಅವರು ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರೆ, ವಾಸಣ್ಣ ಅವರು ಕೆಎಟಿ ಆದೇಶದ ಆಧಾರದ ಮೇಲೆ ಸಿಎಂಸಿ ಆಯುಕ್ತರಾಗಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿರುವುದಾಗಿ ಹೇಳಿರುವುದಾಗಿ timesnownews ವರದಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ