ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ; ನಾವೇ ಅಧಿಕಾರಕ್ಕೆ ಬಂದರೂ ಸರಿ ಮಾಡುವುದಕ್ಕೆ 2 ವರ್ಷ ಬೇಕು: ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Jun 07, 2022 | 9:32 PM

ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ನಾವೇ ಅಧಿಕಾರಕ್ಕೆ ಬಂದರೂ, ನಾನೇ ಹಣಕಾಸು ಸಚಿವನಾದರೂ,ಇದನ್ನ ಸರಿ ಮಾಡುವುದಕ್ಕೆ 2 ವರ್ಷ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದ್ದಾರೆ.

ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ; ನಾವೇ ಅಧಿಕಾರಕ್ಕೆ ಬಂದರೂ ಸರಿ ಮಾಡುವುದಕ್ಕೆ 2 ವರ್ಷ ಬೇಕು: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಬಾಗಲಕೋಟೆ: ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ನಾವೇ ಅಧಿಕಾರಕ್ಕೆ ಬಂದರೂ, ನಾನೇ ಹಣಕಾಸು ಸಚಿವನಾದರೂ,ಇದನ್ನ ಸರಿ ಮಾಡುವುದಕ್ಕೆ 2 ವರ್ಷ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  (Siddaramaiah) ಬಾಗಲಕೋಟೆಯ (Bagalakote) ಸೀಮಿಕೇರಿ ಲಡ್ಡುಮುತ್ಯಾ (Laddumutya) ದೇವಸ್ಥಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಇದನ್ನು ನಾವು ಚುನಾವಣೆಗಾಗಿ ಹೇಳ್ತಿಲ್ಲ‌, ಅಂಕಿ ಅಂಶ ನೋಡಿ. ನಮ್ಮ ಸರ್ಕಾರ ಇದ್ದಾಗ ಎರಡು ಲಕ್ಷ ಕೋಟಿ ಸಾಲ ಇತ್ತು, ಈಗ ಐದು ಲಕ್ಷದ ನಲವತ್ತು ಸಾವಿರ ಕೋಟಿ ಸಾಲ ಆಗಿದೆ. ಈಗ ಮೂರು ಲಕ್ಷ ಕೋಟಿ ಸಾಲ ಹೆಚ್ಚಾಗಿದೆ.  ಹೀಗಾದರೆ ರಾಜ್ಯ ಉಳಿಯುತ್ತಾ? ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಉದ್ಧಾರ ಆಗುತ್ತೇನರೆ. ಮನೆ‌, ಜಮೀನು ಮಾರಿಕೊಳ್ಳಬೇಕಾಗುತ್ತೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನು ಓದಿ: ಮೋದಿ ಒಬ್ಬೊಬ್ಬರ ತಲೆ ಮೇಲೆ 1.75 ಲಕ್ಷ ಸಾಲ ಇಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು ಯಾರು? ಮಿಸ್ಟರ್ ನರೇಂದ್ರ ಮೋದಿ. ಬಾಯಿ ಔರ ಬಹೆನೋ ಅದಷ್ಟೆ ಬರೋದು ಅವರಿಗೆ. ನಾ ಖಾವುಂಗಾ ನಾ ಖಾನೆದೂಂಗಾ. ಕಂಟ್ರಾಕ್ಟರ್ ಅಸೋಸಿಯೇಶನ್’ನವರು ಪತ್ರ ಬರೆದದ್ದು ಯಾವಾಗ? ಉತ್ತರ ಇಲ್ಲ. ನಾ ಖಾವುಂಗಾ ,ನಾ ಖಾನೇದೂಂಗಾ. ಹೇ ಕಿತ್ತ ಎಸಿರಿ ಇದನ್ನ ಕಿತ್ತ ಎಸಿರಿ. ಅಚ್ಚೇ ದಿನ್ ಆಯೆಂಗೆ…ಎಲ್ಲಿದೆ ಅಚ್ಚೆ‌ದಿನ್. ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ಎಲ್ಲಿಯವರೆಗೆ‌ ನೀವು ಬಿಜೆಪಿ ಸರ್ಕಾರವನ್ನ ಕಿತ್ತು ನಡೆಯುವುದಿಲ್ಲವೊ. ಅಲ್ಲಿಯವರೆಗೆ ರಾಜ್ಯ ದೇಶ ಉದ್ದಾರವಾಗುವುದಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ದೇಶ ಒಡೆದ ಜಿನ್ನಾ ಹೆಸರು ಹೇಳಿದರೂ ಆಶ್ಚರ್ಯ ಪಡಬೇಡಿ: ಸಿ.ಟಿ ರವಿ ವಾಗ್ದಾಳಿ

ಬಿಜೆಪಿಯವರು ಹಿಂದೂಗಳನ್ನು ಗುತ್ತಿಗೆ ಪಡೆದಿದ್ದಾರಾ? ಬಸವಣ್ಣ, ಕುವೆಂಪು, ಅಂಬೇಡ್ಕರ್, ಭಗತ್ ಸಿಂಗ್ ಹಿಂದೂ.ನನ್ನನ್ನು ಹಿಂದೂ ವಿರೋಧಿ ಅಂತಾರೆ, ನಾನು ಹಿಂದೂ ನಮ್ಮಪ್ಪ ಹಿಂದೂ, ನಮ್ಮ ತಾತ ಹಿಂದೂ, ನಮ್ಮ ತಾತನ ತಾತ ಹಿಂದೂ, ಅವರ ತಾತನೂ ಹಿಂದೂ, ನಾನು ಹಿಂದೂ ಎಂದು ಸಿದ್ದರಾಮಯ್ಯ ಒತ್ತಿ ಒತ್ತಿ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:32 pm, Tue, 7 June 22