Karnataka Rain: ಕರ್ನಾಟಕದ ಹಲವೆಡೆ ಭಾರೀ ಮಳೆ, ಬಾಗಲಕೋಟೆಯಲ್ಲಿ ಮಳೆಗಾಗಿ ಕತ್ತೆಗಳಿಗೆ ಮದುವೆ

|

Updated on: Jun 18, 2023 | 8:02 PM

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಗಿದೆ.

Karnataka Rain: ಕರ್ನಾಟಕದ ಹಲವೆಡೆ ಭಾರೀ ಮಳೆ, ಬಾಗಲಕೋಟೆಯಲ್ಲಿ ಮಳೆಗಾಗಿ ಕತ್ತೆಗಳಿಗೆ ಮದುವೆ
ಮಳೆಗಾಗಿ ಬಾಗಲಕೋಟೆಯಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿದ ಜನರು
Follow us on

ಬಾಗಲಕೋಟೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು (Karnataka Rain), ಕೆಲವೆಡೆ ಸಾಧಾರಣ ಮಳೆಯಾಗಿದೆ. ಆದರೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಗಿದೆ. ಹೌದು, ಈ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ.

ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ. ಗಂಡು ಕತ್ತೆಯ ಸಂಬಂಧಿಕರಾಗಿ ರಾಮಪ್ಪ ಭಜಂತ್ರಿ ಕುಟುಂಬ ಹಾಗೂ ಹೆಣ್ಣು ಕತ್ತೆಯ ಕಡೆಯವರಾಗಿ ಸಣ್ಣಪ್ಪ ಕುಟುಂಬಸ್ಥರು ಇದ್ದರು. ಒಟ್ಟಾರೆಯಾಗಿ ವರುಣನ ಕೃಪೆಗಾಗಿ ಸಕಲ‌ ವಾದ್ಯಗಳೊಂದಿದೆ ಸಂಪ್ರದಾಯಬದ್ದವಾಗಿ ಕತ್ತೆಗಳ ಮದುವೆ ಕಾರ್ಯ ನಡೆದಿದೆ.

ಇದನ್ನೂ ಓದಿ: Karnataka Weather: ಮುಂದಿನ 4 ದಿನ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ಯಾದಗಿರಿಯಲ್ಲಿ ಬೀಸಿದ ಬಿರುಗಾಳಿ: ಜಾನುವಾರುಗಳು ಸಾವು

ಯಾದಗಿರಿ: ಸುರಪುರ ತಾಲೂಕಿನ ಏವೂರು ಗ್ರಾಮದ ಬೀಸಿದ ಬಿರುಗಾಳಿಗೆ ಜಮೀನಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ. ಧರೆಗುರುಳಿದ ವಿದ್ಯುತ್ ತಂತಿ ಸ್ಪರ್ಶಿಸಿ ರೈತರಾದ ಮೈಹಿಬೂಬ್ ಸಾಬ್‌, ಅಪ್ಪಣ್ಣ ಪೂಜಾರಿಗೆ ಸೇರಿದ 4 ಜಾನುವಾರು ಸಾವನ್ನಪ್ಪಿವೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಕೊಪ್ಪಳ: ಜಿಲ್ಲೆಯ ಹಲವೆಡೆ ಇಂದು ಮಧ್ಯಾಹ್ನದಿಂದಲೇ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಇನ್ನೂ ಮಳೆಯಾಗುತ್ತಿದೆ. ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲಿನ ಬಡಿತಕ್ಕೆ ತೆಂಗಿನ ಮರ ಕೂಡ ಹೊತ್ತಿ ಉರಿದಿದೆ. ಇನ್ನು, ಜಿಲ್ಲಾದ್ಯಂತ ಸುರಿದ ಭರ್ಜರಿ ಮಳೆಗೆ ಹಲವು ದಿನಗಳಿಂದ ಮಳೆಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಸಂತಸ ಕಾಣುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Sun, 18 June 23