Karnataka Weather: ಮುಂದಿನ 4 ದಿನ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ಮುಂದಿನ 4 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

Karnataka Weather: ಮುಂದಿನ 4 ದಿನ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ
ಮಳೆ
Follow us
|

Updated on: Jun 18, 2023 | 8:05 AM

ಮುಂದಿನ 4 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜೂನ್ 20 ರಂದು ಚಿಕ್ಕಮಗಳೂರು, ಹಾಸನ, ಕೋಲಾರ, ಕೊಡಗು, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಇನ್ನುಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಕ್ಯಾಸಲ್ ರಾಕ್, ಸಿದ್ದಾಪುರ, ಕದ್ರಾ, ಕೊಲ್ಲೂರಿನಲ್ಲಿ ಮಳೆಯಾಗಿದೆ. ಗರಿಷ್ಠ ಉಷ್ಣಾಂಶವು ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್​ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಸಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಎಚ್​ಎಎಲ್​ನಲ್ಲಿ 32.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ 33.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ:ಬಿಪೊರ್ ಜಾಯ್ ಅಬ್ಬರ, ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್, ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ

ಭಾರೀ ಸಂಚಲನವನ್ನುಂಟು ಮಾಡಿದ್ದ ಬಿಪೋರ್​ಜಾಯ್ ಚಂಡಮಾರುತ ಸದ್ಯ ತನ್ನ ಉಗ್ರರೂಪವನ್ನು ನಿಧಾನವಾಗಿ ಕಡಿಮೆ ಮಾಡುತ್ತಿದೆ. ಗುಜರಾತ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದ ಚಂಡಮಾರುತ ಸದ್ಯ ಪಾಕಿಸ್ತಾನದತ್ತ ಸಾಗುತ್ತಿದ್ದು, ನಂತರ ಪುನಃ ಭಾರತದತ್ತ ವ್ಯಾಪಿಸುವ ಸಾಧ್ಯತೆ ಇದೆ.

ಚಂಡಮಾರುತ ಗುಜರಾತ್​ನಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದು, ಸುಮಾರು 940 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನೂರಾರು ಮರಗಳು ಧರೆಗುರುಳಿವೆ. ಚಂಡಮಾರುತವು ಗಂಟೆಗೆ 108 ಕಿಮೀ ವೇಗದಲ್ಲಿ ಅರಬ್ಬಿ ಸಮುದ್ರದಿಂದ ಜಖೌ ಬಂದರಿನ ಬಳಿ ಭೂಕುಸಿತ ಉಂಟು ಮಾಡಿದೆ. ಚಂಡಮಾರುತದ ಬೀಸಿದ ನಂತರ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯೂ ಆಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ