- Kannada News Photo gallery Bannerghatta Park is overflowing with Shakti Yojana effect, Here are the photos
Bannerghatta National Park: ಶಕ್ತಿ ಯೋಜನೆ ಎಫೆಕ್ಟ್ಗೆ ತುಂಬಿ ತುಳುಕಿದ ಬನ್ನೇರುಘಟ್ಟ ಪಾರ್ಕ್; ಇಲ್ಲಿದೆ ಫೋಟೋಸ್
ವಾರದ ರಜೆ, ಹೇಳಿ ಕೇಳಿ ಮೊದಲೇ ಬಸ್ ಫ್ರೀ ಹೀಗಾಗಿ ಪ್ರವಾಸಿ ತಾಣಕ್ಕೆ ಮಹಿಳೆಯರು ಸೇರಿದಂತೆ ಯುವತಿಯರು ಗುಂಪು ಗುಂಪಾಗಿ ಬರುತ್ತಿದ್ದು, ಫ್ರೀ ಬಸ್ ಎಫೆಕ್ಟ್ ಈಗ ಶುರುವಾಗಿದೆ. ಒಂದು ಕಡೆ ಸಾರಿಗೆ ಇಲಾಖೆಗೆ ನಷ್ಟವಾದ್ರೂ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
Updated on: Jun 18, 2023 | 7:43 AM

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ನಲ್ಲಿ ಮಹಿಳೆ ಹಾಗೂ ಹೆಣ್ಣು ಮಕ್ಕಳ ಭೇಟಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಶಕ್ತಿ ಯೋಜನೆಯ ಎಫೆಕ್ಟ್ ಅಡಿ ಮಹಿಳಾ ಪ್ರವಾಸಿಗರ ಸಂಖ್ಯೆ ನಿನ್ನೆ(ಜೂ.17) ಹೆಚ್ವಾಗಿ ಕಂಡು ಬಂತು. ರಾಜ್ಯದ ಹಲವು ಜಿಲ್ಲೆಗಳಿಂದ ಬೆಂಗಳೂರಿಗೆ ಬಂದಂತಹ ಮಹಿಳೆಯರು ಹಾಗೂ ಮಕ್ಕಳು ಬನ್ನೇರುಘಟ್ಟ ಪಾರ್ಕ್‌ಗೆ ಲಗ್ಗೆ ಇಟ್ಟಿದ್ದರು.

ವಾರಂತ್ಯ ಬಂದ್ರೆ ಸಾಕು ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ನಲ್ಲಿ ಸಫಾರಿ ಹಾಗೂ ಜೂ ನೋಡಲು ಜನರು ಸಾಮಾನ್ಯವಾಗಿ ಹೆಚ್ಚಾಗಿ ಬರ್ತಾರೆ, ಆದರೆ, ಈ ಬಾರಿ ರಾಜ್ಯ ಇತರ ಜಿಲ್ಲೆಗಳಿಂದಲೂ ಬೆಂಗಳೂರಿಗೆ ಫ್ರೀ ಬಸ್ ಮುಖಾಂತರ ಬಂದಂತಹ ಕುಟುಂಬ ಸದಸ್ಯರು ಬನ್ನೇರುಘಟ್ಟ ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರಿನಿಂದ 20 ಕಿ.ಮಿ ಅಂತರದಲ್ಲಿರುವ ಬನ್ನೇರುಘಟ್ಟ ಪಾರ್ಕ್ ಮೆಜೆಸ್ಟಿಕ್ ಹಾಗೂ ಯಶವಂತಪುರದಿಂದ ಬಿಎಮ್ಟಿಸಿ ನೇರವಾದ ಸೇವೆ ನೀಡುತ್ತಿದೆ. ಈ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಹಿಳಾಮಣಿಗಳು ಭೇಟಿ ಕೊಟ್ಟು ನೈಸರ್ಗಿಕ ಸೌಂದರ್ಯ ಸವಿದರು.

ಮಹಿಳೆಯರಿಗೆ ಬಸ್ ಫ್ರೀ ಮಾಡಿ ಸಾರಿಗೆ ಇಲಾಖೆ ನಷ್ಟ ಹೊಂದಿದರೂ, ಪ್ರವಾಸೋದ್ಯಮ ಇಲಾಖೆ ಹಾಗೂ ಚಿಕ್ಕ ಪುಟ್ಟ ಹೊಟೇಲ್ ಉದ್ಯಮಕ್ಕೆ ಪರೋಕ್ಷವಾಗಿ ಆದಾಯ ಹರಿದು ಬರಲು ಶುರುವಾಗಿದೆ.

ದಿನ ಕಳದಂತೆ ಬನ್ನೇರುಘಟ್ಟ ಪಾರ್ಕ್‌ಗೆ ಉತ್ತಮವಾದ ಸ್ಪಂದನೆ ವ್ಯಕ್ತವಾಗುತ್ತಿದ್ದು, ಒಂದು ದಿನದ ಪ್ರವಾಸಕ್ಕೆ, ಹೇಳಿ ಮಾಡಿಸಿದ ಜಾಗ ಇದಾಗಿದೆ.

ಇನ್ನು ರವಿವಾರವಾಗಿರುವ ಇಂದು(ಜೂ.18) ನಿನ್ನೆಗಿಂತ ಹೆಚ್ಚಿನ ಜನರು ಬರುವ ನಿರೀಕ್ಷೆಯಿದ್ದು, ಇದರಿಂದಾಗಿ ಬನ್ನೇರುಘಟ್ಟ ಪ್ರಾಣಿ ಪ್ರಪಂಚಕ್ಕೂ ಒಳ್ಳೆಯದಾಗಲಿದೆ ಅನ್ನೋದು ಪಾರ್ಕ್ ಸಿಬ್ಬಂದಿಯವರ ಅಭಿಮತವಾಗಿದೆ.
























