WTC 2025: ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು?

Team India: ವೆಸ್ಟ್ ಇಂಡೀಸ್ (West Indies) ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತ ತಂಡದ (Team India) ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಪಂದ್ಯವಾಳಿ ಆರಂಭವಾಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 17, 2023 | 10:08 PM

ಇಂಗ್ಲೆಂಡ್​-ಆಸ್ಟ್ರೇಲಿಯಾ (England vs Australia) ನಡುವಣ ಟೆಸ್ಟ್ ಸರಣಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (WTC) ಪಂದ್ಯಾವಳಿ ಶುರುವಾಗಿದೆ. 2023 ರಿಂದ 2025 ರವರೆಗೆ ನಡೆಯಲಿರುವ ಈ ಚಾಂಪಿಯನ್​ಶಿಪ್​ನ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ 2 ತಂಡಗಳು 2025 ರಲ್ಲಿ ಫೈನಲ್ ಆಡಲಿದೆ.

1 / 9
ಇನ್ನು ವೆಸ್ಟ್ ಇಂಡೀಸ್ (West Indies) ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತ ತಂಡದ (Team India) ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಪಂದ್ಯವಾಳಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ (Rohit Sharma) ಅಥವಾ ಅಜಿಂಕ್ಯ ರಹಾನೆ (Ajinkya Rahane) ಮುನ್ನಡೆಸುವ ಸಾಧ್ಯತೆಯಿದೆ. ಆದರೆ ಇವರಿಬ್ಬರು ಮುಂದಿನ ಫೈನಲ್​ವರೆಗೂ ತಂಡದಲ್ಲಿರುವುದು ಅನುಮಾನ.

2 / 9
ಏಕೆಂದರೆ ರೋಹಿತ್ ಶರ್ಮಾ ಅವರ ಪ್ರಸ್ತುತ ವಯಸ್ಸು 36 ವರ್ಷ. ಇನ್ನೆರಡು ವರ್ಷಗಳ ಕಾಲ ಅವರು ಟೀಮ್ ಇಂಡಿಯಾ ಪರ ಆಡುವುದು ಅನುಮಾನ ಎಂದೇ ಹೇಳಬಹುದು. ಅದರಲ್ಲೂ ಈ ಬಾರಿಯ ಏಕದಿನ ವಿಶ್ವಕಪ್​ ಬಳಿಕ ರೋಹಿತ್ ಶರ್ಮಾ ಅವರ ನಾಯಕತ್ವದ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ 2024 ರಲ್ಲಿ ಅವರು ತಂಡದಲ್ಲಿರುವ ಸಾಧ್ಯತೆ ತುಂಬಾ ಕಡಿಮೆ.

3 / 9
ಮತ್ತೊಂದೆಡೆ ಉಪನಾಯಕರಾಗಿರುವ ಅಜಿಂಕ್ಯ ರಹಾನೆ ಅವರ ವಯಸ್ಸು 35 ವರ್ಷ. ಇನ್ನೊಂದು ವರ್ಷ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡರೂ ಅವರು ಕೂಡ 2025 ರವರೆಗೆ ಟೀಮ್​ನಲ್ಲಿರುವುದು ಅನುಮಾನ.

4 / 9
ಹೀಗಾಗಿಯೇ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗಳಿಗೆ ಸದ್ಯ ಹಾರ್ದಿಕ್ ಪಾಂಡ್ಯ ಅವರ ಹೆಸರು ಕೇಳಿ ಬರಲಾರಂಭಿಸಿದೆ. ಇದಕ್ಕೆ ಮುಖ್ಯ ಕಾರಣ ಪಾಂಡ್ಯರನ್ನು ಟೆಸ್ಟ್ ಕ್ರಿಕೆಟ್​ ಮರಳಿ ಕರೆತರುವ ಪ್ರಯತ್ನಕ್ಕೆ ಬಿಸಿಸಿಐ ಕೈ ಹಾಕಿರುವುದು.

5 / 9
ಹೌದು, ಆಲ್​ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ ಆಡಿ 5 ವರ್ಷಗಳೇ ಕಳೆದಿವೆ. ಗಾಯದ ಕಾರಣ ದೀರ್ಘಾವಧಿ ಕ್ರಿಕೆಟ್​ನಿಂದ ದೂರ ಉಳಿದಿದ್ದ ಪಾಂಡ್ಯ ಇದೀಗ ಸಂಪೂರ್ಣ ಫಿಟ್​ನೆಸ್ ಹೊಂದಿದ್ದಾರೆ. ಹೀಗಾಗಿ ಮತ್ತೆ ಟೆಸ್ಟ್ ಕ್ರಿಕೆಟ್ ಆಡುವಂತೆ ಪಾಂಡ್ಯ ಅವರ ಮನವೊಲಿಸಲು ಆಯ್ಕೆ ಸಮಿತಿ ಮುಂದಾಗಿದೆ.

6 / 9
ಇಲ್ಲಿ ಹಾರ್ದಿಕ್ ಪಾಂಡ್ಯರನ್ನು ಟೆಸ್ಟ್ ಕ್ರಿಕೆಟ್​ಗೆ ಕರೆತರಲು ಬಿಸಿಸಿಐ ಬಯಸಿರುವುದು ನಾಯಕತ್ವ ನೀಡಲು ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಏಕೆಂದರೆ ಈಗಾಗಲೇ ಟಿ20 ತಂಡವನ್ನು ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಹಾಗೆಯೇ ಏಕದಿನ ವಿಶ್ವಕಪ್​ ಬಳಿಕ ತಂಡದ ಸಾರಥ್ಯವನ್ನು ಹಾರ್ದಿಕ್​ಗೆ ವಹಿಸುವ ಸಾಧ್ಯತೆ ಹೆಚ್ಚಿದೆ.

7 / 9
ಇದರ ನಡುವೆ ಟೆಸ್ಟ್ ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ ಮರಳಿದರೆ ಮೂರು ತಂಡಗಳಿಗೂ ಏಕೈಕ ನಾಯಕನನ್ನು ಆಯ್ಕೆ ಮಾಡಬಹುದು. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಅವರ ಟೆಸ್ಟ್ ಕಂಬ್ಯಾಕ್ ಅನ್ನು ಬಿಸಿಸಿಐ ಎದುರು ನೋಡುತ್ತಿದೆ.

8 / 9
ಇದಾಗ್ಯೂ ಹಾರ್ದಿಕ್ ಪಾಂಡ್ಯಗೆ ಪ್ರಬಲ ಪೈಪೋಟಿಯಾಗಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಹೆಸರು ಕೂಡ ಕೇಳಿ ಬರುತ್ತಿದ್ದು, ಇವರಿಬ್ಬರೂ ಸ್ಥಿರ ಪ್ರದರ್ಶನ ನೀಡಿದರೆ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡಗಳ ನಾಯಕರಾಗಿ ಆಯ್ಕೆಯಾಗಬಹುದು.

9 / 9
Follow us
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ