ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ಸದ್ಯ ಕೋರ್ಟ್ ತೀರ್ಮಾನಕ್ಕಾಗಿ ಎಲ್ಲರೂ ಕಾದು ಕುಳಿತ್ತಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಕರ್ನಾಟಕ ಸರ್ಕಾರ ಕೂಡಾ 16ರ ವರೆಗೆ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ನಡುವೆ ರಾಜ್ಯದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ (Namaz) ಮಾಡಿದ್ದಾರೆ. ನಮಾಜ್ ಮಾಡಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಿಕ್ಷಕರ ಗಮನಕ್ಕೂ ತರದೆ ವಿದ್ಯಾರ್ಥಿಗಳು ನಮಾಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾರಿ ಮುಖ್ಯ ಶಿಕ್ಷಕಿ ಹೆಚ್ ವೈ ಕಾರಕೂನ್ ಈ ಬಗ್ಗೆ ಮಾತನಾಡಿ, ಮತ್ತೊಮ್ಮೆ ಶಾಲೆಯಲ್ಲಿ ನಮಾಜ್ ಮಾಡದಂತೆ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆಯಲ್ಲಿ ನಮಾಜ್ ಮಾಡಬೇಡಿ ಎಂದು ಮೊದಲೇ ಹೇಳಿದ್ದೇವೆ. ಶಾಲೆಯಲ್ಲಿ 232 ವಿದ್ಯಾರ್ಥಿಗಳಿದ್ದಾರೆ. ಬಿಸಿಯೂಟದ ವೇಳೆ 6ನೇ ತರಗತಿಯ ನಾಲ್ಕು ವಿದ್ಯಾರ್ಥಿನಿಯರು ನಮಾಜ್ ಮಾಡಿದ್ದಾರೆ. ಇದು ಯಾವುದೇ ಶಿಕ್ಷಕರ ಗಮನಕ್ಕೆ ಬಾರದೆ ಘಟನೆ ನಡೆದಿದೆ ಎಂದು ಮುಖ್ಯ ಶಿಕ್ಷಕಿ ಹೆಚ್ ವೈ ಕಾರಕೂನ್ ಹೇಳಿದರು.
ಜಿಲ್ಲಾ ಅಧಿಕಾರಿ ಎಂಎನ್ ಮೇಲಿನಮನಿ ಟಿವಿ9 ಜೊತೆ ಮಾತನಾಡಿ, ನಿನ್ನೆ ಮದ್ಯಾಹ್ನ ಊಟದ ಸಮಯದಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ವರದಿ ನೀಡುವುದಕ್ಕೆ ಹೇಳಿದ್ದೇನೆ. ವರದಿ ಬಂದ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲು ಶಾಲಾ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಇಲಾಖೆಯ ತಾಲೂಕು ಅಧಿಕಾರಿಗಳ ಜೊತೆ ಸಭೆ ಕೂಡ ನಡೆಸುತ್ತೇನೆ. ಇನ್ನು ಹಿಜಾಬ್ ಧರಿಸಿರುವ ಬಗ್ಗೆ ನಮ್ಮ ಇಲಾಖೆಯಿಂದ ಇದುವರೆಗೂ ಸುತ್ತೋಲೆ ಬಂದಿಲ್ಲ. ಶಿಕ್ಷಣ ಇಲಾಖೆಯಿಂದ ಏನೆಲ್ಲ ನಿಯಮ ಬರುತ್ತವೆ ಎಲ್ಲವನ್ನೂ ಪಾಲಿಸೋದಾಗಿ ಮಾಹಿತಿ ನೀಡಿದ್ದಾರೆ.
ಮಂಗಳೂರು ಹಾಗೂ ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಚಾರಕ್ಕೆ ಸಂಬಂರಧಿಸಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತೀವಿ. ಡಿಡಿಪಿಐ ಹೋಗಿ ಪರಿಶೀಲನೆ ಮಾಡಲು ಹೇಳುತ್ತೇವೆ. ಘಟನೆ ನಡೆದಿದ್ದರೇ ತಕ್ಷಣ ಕ್ರಮವಹಿಸಲು ಸೂಚಿಸಲಾಗುತ್ತದೆ. ಇದು ನಿನ್ನೆ ಮೊನ್ನೆ ಶುರವಾದ ಸಮಸ್ಯೆ ಅಲ್ಲ. ಈ ದೇಶದಲ್ಲಿ ಸ್ವತಂತ್ರ ಬಂದಾಗಿನಿಂದಲೂ ಅಫೀಸ್ಮೆಂಟ್ ಪಾಲಿಟಿಕ್ಸ್ ನಡೆದಿದೆ. ದೇಶದಲ್ಲಿ ಅನೇಕ ಸಮಸ್ಯೆ ಗಳನ್ನ ಪೂರ್ಣವಾಗಿ ವಿರಾಮ ಹೇಳಲು ಸರ್ಕಾರ ಅನೇಕ ಕ್ರಮಗಳನ್ನ ವಹಿಸಲು ಆರಂಭಿಸಿದೆ. ನಾವು ಒಂದು ಪ್ರಾಂತವನ್ನ ಬಿಟ್ಟುಕೊಡುವ ಮಟ್ಟಕ್ಕೆ ಹೋದವಿ. ಇದೆಲ್ಲಾ ನಡೆತಿದೆ, ಇದಕ್ಕೆ ಮುಕ್ತಾಯವಾಗುವ ಕಾಲ ಬರುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ
‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ
ಪರಭಾಷೆಯಲ್ಲೂ ‘ಜೇಮ್ಸ್’ ಟೀಸರ್ ಮಿಲಿಯನ್ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?
Published On - 11:01 am, Sat, 12 February 22