‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ

Hijab Row: ಹಿಜಾಬ್ ವಿವಾದದ ಕುರಿತಂತೆ ರಂಗಕರ್ಮಿ, ನಾಟಕಕಾರ ಪ್ರಸನ್ನ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ
ರಂಗಕರ್ಮಿ ಪ್ರಸನ್ನ
Follow us
| Updated By: shivaprasad.hs

Updated on: Feb 12, 2022 | 9:03 AM

ಮೈಸೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ (Hijab Row) ಜೋರಾಗಿದೆ. ಈ ವಿವಾದದ ಕುರಿತಂತೆ ನಾಡಿನ ಪ್ರಜ್ಞಾವಂತರು, ಚಿಂತಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ನಾಟಕಕಾರ, ರಂಗಕರ್ಮಿ ಪ್ರಸನ್ನ (Prasanna Heggodu) ಅವರು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಅದಕ್ಕೆ ಅವರು ‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’ ಎಂದು ಶೀರ್ಷಿಕೆ ನೀಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ‘ಸೀತೆಯಂತೆ ಸೈರಣೆಯಿಂದ ಇರು ಮಗಳೇ, ನೀನೂ ಕೂಡ ಪರಿಸ್ಥಿತಿಯನ್ನು ತಾಳ್ಮೆಯಿಂದ‌ ಎದುರಿಸು. ಹಿಜಾಬಿನ ನೆಪವೊಡ್ಡಿ ಹೆಣ್ಣು ಮಗುವಿಗೆ ತಡೆಯೊಡ್ಡುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಸೇರಿ ಎಲ್ಲಾ ಕಡೆ ತಡೆಯೊಡ್ಡುವವರಿಗೆ ಧರ್ಮವಿಲ್ಲ‌ ಮಗು’ ಎಂದು ಪ್ರಸನ್ನ ಹೇಳಿದ್ದಾರೆ.

‘ರಾಮನ ಅನುಯಾಯಿ ನಾನು. ಹುಟ್ಟಿನಿಂದ ಹಿಂದೂ, ಹುಟ್ಟಿನಿಂದ ಗಂಡು ನಾನು. ರಾಮನಂತೆ ಗಂಡಸುತನ ಹಾಗೂ ಹಿಂದುತ್ವವನ್ನು ಸಭ್ಯತೆಯಿಂದ ನಿಭಾಯಿಸುವ ಪ್ರಯತ್ನ ನಡೆಸಿದ್ದೇನೆ ಅಷ್ಟೇ. ಕೇಸರಿ ಶಾಲು ಹೊದೆದು ನಿನ್ನನ್ನು ತಡೆಯುತ್ತಿರುವವರದ್ದು ಬಿಸಿರಕ್ತ. ಅವರಿಗೆ ರಾಮನಿಗೆ ಗರ್ವವಿರಲಿಲ್ಲ ಎಂಬುದು ತಿಳಿದಿಲ್ಲ. ಇತರರನ್ನು ಗರ್ವದಿಂದ ತಡೆಯಿರಿ ಎಂದು ರಾಮ ಹೇಳಿಲ್ಲ. ಸಭ್ಯನಾಗಿರು ಎಂದಷ್ಟೇ ರಾಮ ನಮಗೆಲ್ಲರಿಗೂ ಹೇಳಿದ್ದು’

‘ಹಿಂದುತ್ವವಿರಲಿ, ಮುಸಲ್ಮಾನತ್ವವಿರಲಿ, ಸಮಾಜವಾದವಿರಲಿ.. ಎಲ್ಲವೂ ಸಭ್ಯತೆಯ ಪ್ರತಿಪಾದನೆಗಳಲ್ಲವೇ ಮಗು? ಹುಡುಗರೂ ಕೆಟ್ಟವರೇನಲ್ಲ, ತಿಳಿದುಕೊಳ್ಳುತ್ತಾರೆ ಬಿಡು. ಗರ್ವ ರಾವಣನ ಗುಣವೇ ಹೊರತು ರಾಮನ ಗುಣವಲ್ಲ. ನೀನೂ ಗರ್ವ ಮಾಡದಿರು. ನಿನ್ನ ಅಣ್ಣತಮ್ಮಂದಿರೂ ಗರ್ವ ಮಾಡದಿರಲಿ. ಇದು ಸಭ್ಯದೇಶ ಮಗಳೇ. ಇವೆಲ್ಲ ಕ್ಷಣಿಕ ಕಷ್ಟಗಳಷ್ಟೇ..’ ಎಂದು ಪತ್ರದಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ ಪ್ರಸನ್ನ.

ಪ್ರಸನ್ನ ಬರೆದಿರುವ ಪತ್ರ ಇಲ್ಲಿದೆ:

Artist Prasanna letter on Hijab

ಶಾಲಾ ಕಾಲೇಜುಗಳಿಗೆ ಫೆ.16ರವರೆಗೆ ರಜೆ ವಿಸ್ತರಣೆ

ಬೆಂಗಳೂರು: ಹಿಜಾಬ್ ಕೇಸರಿ ಶಾಲು ವಿವಾದದ ಹಿನ್ನೆಲೆ ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಮತ್ತೆ ವಿಸ್ತರಣೆ ಮಾಡಿ  ಆದೇಶ ನೀಡಲಾಗಿದೆ. ಫೆಬ್ರವರಿ 16ರ ವರೆಗೆ ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಜೆ ಮುಂದುವರಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಕಾಲೇಜುಗಳಿಗೆ ಫೆಬ್ರವರಿ 16ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದ್ದು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ:

ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ

Karnataka Hijab Row: ಫೆಬ್ರವರಿ 16ರ ವರೆಗೆ ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ; ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು