ಹಿಜಾಬ್ ವಿವಾದದ ನಡುವೆ ದಕ್ಷಿಣ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್! ವಿಡಿಯೋ ವೈರಲ್

ಹಿಜಾಬ್ ವಿವಾದದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯಲ್ಲಿ ಮಕ್ಕಳು ನಮಾಜ್ ಮಾಡಿದ್ದಾರೆ. ಕಳೆದ ಮೂರು ವಾರಗಳಿಂದ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದಾರೆ.

ಹಿಜಾಬ್ ವಿವಾದದ ನಡುವೆ ದಕ್ಷಿಣ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್! ವಿಡಿಯೋ ವೈರಲ್
ನಮಾಜ್
TV9kannada Web Team

| Edited By: sandhya thejappa

Feb 12, 2022 | 10:34 AM

ಮಂಗಳೂರು: ರಾಜ್ಯದಾದ್ಯಂತ ಮಾತ್ರವಲ್ಲ ಇಡೀ ದೇಶದಲ್ಲಿ ಹಿಜಾಬ್ (Hijab) ವಿವಾದ ಚರ್ಚೆಗೆ ಕಾರಣವಾಗಿದೆ. ಕಾಲೇಜು ವಿದ್ಯಾರ್ಥಿಗಳು (Students) ಪ್ರತಿಭಟನೆ ನಡೆಸಿದ ಹಿನ್ನೆಲೆ ಸರ್ಕಾರ ಶಾಲೆ- ಕಾಲೇಜುಗಳಿಗೆ ರಜೆ ಘೊಷಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಹೀಗಾಗಿ ಈ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಸರಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ನಮಾಜ್ (Namaz) ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಿಜಾಬ್ ವಿವಾದದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯಲ್ಲಿ ಮಕ್ಕಳು ನಮಾಜ್ ಮಾಡಿದ್ದಾರೆ. ಕಳೆದ ಮೂರು ವಾರಗಳಿಂದ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದಾರೆ. 6ನೇ ಮತ್ತು 7ನೇ ತರಗತಿ ಮಕ್ಕಳು ನಮಾಜ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ, ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದರೂ ಶಾಲಾ ಸಿಬ್ಬಂದಿ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಎಡಿಎಂಸಿ ಸದಸ್ಯರು ಶಿಕ್ಷಣ ಇಲಾಖೆಗೆ ಮೌಖಿಕ ದೂರು ನೀಡಿದ್ದಾರೆ.

ವೈರಲ್ ಆದ ವಿಡಿಯೋ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಭಂಡಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇವಲ ಮೂರು ವಾರಗಳಿಂದಷ್ಟೇ ಆರಂಭವಾಗಿದೆ. ಮೊದಲು ಈ ಶಾಲೆಯಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಕಳೆದ ಸಭೆಯಲ್ಲಿ ನಮಾಜ್ ಮಾಡಲು ಅವಕಾಶ ಕೇಳಿದ್ದರು. ಆದರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿರಲಿಲ್ಲ. ನಮಾಜ್‌ಗೆ ಹೋಗುವುದಕ್ಕೆ ರಜೆ ಪಡೆದು ಹೋಗಲಿ. ಶಿಕ್ಷಕರು, ವಿದ್ಯಾರ್ಥಿಗಳಿಗೂ ಸೂಚನೆ ನೀಡಲಾಗಿತ್ತು. ನಿನ್ನೆ ತರಗತಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದರು. ಇದರ ಹಿಂದೆ ಯಾರೋ ಇದ್ದಾರೆ ಅಂತ ಹೇಳಿದರು.

ಹೈದರಾಬಾದ್​​ನಿಂದ ಉಡುಪಿಗೆ ಜನ ಆಗಮನ: ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್​​ನಿಂದ ಉಡುಪಿಗೆ ಜನ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಜಾಬ್ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಲು ಜನರು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಟಿವಿ9 ಗೆ ಹೇಳಿಕೆ ನೀಡಿದ ಶಾಸಕ ರಘುಪತಿ ಭಟ್, ಹೈದರಾಬಾದ್​ನಿಂದನಾದರೂ ಬರಲಿ. ಬೇರೆ ಎಲ್ಲಿಂದಲಾದರೂ ಬರಲಿ. ಅವರೆಲ್ಲಾ ಇಲ್ಲಿ ಬಂದು ಏನು ಮಾಡೋ ಅವಶ್ಯಕತೆ ಇಲ್ಲ‌. ಉಡುಪಿಯಲ್ಲಿ ಹಿಂದು ಮುಸ್ಲಿಂ ಒಂದಾಗಿದ್ದೇವೆ‌. ಮುಂದೆ ಒಂದಾಗಿರೋದು ಹೇಗೆ ಅಂತಾ ಗೊತ್ತಿದೆ ಅಂತ ಹೇಳಿದರು.

ಇದನ್ನೂ ಓದಿ

ಹಿಜಾಬ್​ ವಿಚಾರಕ್ಕೆ ತಲೆ ಹಾಕಿದ ಸೋನಂ ಕಪೂರ್​; ಇನ್ನೊಂದು ಧರ್ಮವನ್ನು ಪ್ರಶ್ನಿಸಿ ಟೀಕೆಗೆ ಗುರಿಯಾದ ನಟಿ

Horoscope Today- ದಿನ ಭವಿಷ್ಯ; ಈ ರಾಶಿಯ ವ್ಯಾಪಾರಿಗಳು ಈ ತಿಂಗಳು ಸರಾಸರಿ ಲಾಭ ಗಳಿಸುವ ಸಾಧ್ಯತೆಯಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada