ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೆಚ್ಡಿ ದೇವೇಗೌಡ ದಂಪತಿಯಿಂದ ತುಲಾಭಾರ ಸೇವೆ; ವಿಡಿಯೋ ನೋಡಿ
ದೇವಸ್ಥಾನದಲ್ಲಿ ತುಲಾಭಾರ ಸೇವೆಯನ್ನು ನೆರವೇರಿಸಿ ಶ್ರೀ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಕುಕ್ಕೆ ಸುಬ್ರಮಣ್ಯ ದೇಗುಲದ ಗೋಪುರದ ಬಳಿ ದೇವೆಗೌಡ ದಂಪತಿ ಗಿಡ ನೆಟ್ಟಿದ್ದಾರೆ. ಬಳಿಕ ಸಂಪುಟ ನರಸಿಂಹಪಡೆದರು ಸ್ವಾಮಿ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.
ಮಂಗಳೂರು: ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ದಂಪತಿ ಶನಿವಾರ (ಫೆಬ್ರವರಿ 12) ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ತುಲಾಭಾರ ಸೇವೆಯನ್ನು ನೆರವೇರಿಸಿ ಶ್ರೀ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಕುಕ್ಕೆ ಸುಬ್ರಮಣ್ಯ ದೇಗುಲದ ಗೋಪುರದ ಬಳಿ ದೇವೆಗೌಡ ದಂಪತಿ ಗಿಡ ನೆಟ್ಟಿದ್ದಾರೆ. ಬಳಿಕ ಸಂಪುಟ ನರಸಿಂಹಪಡೆದರು ಸ್ವಾಮಿ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್.ಡಿ. ದೇವೇಗೌಡ ದಂಪತಿ ಭೇಟಿ ನೀಡಿ ಅಕ್ಕಿ, ಕಾಯಿ, ಬೆಲ್ಲದಿಂದ ತುಲಾಭಾರ ಸೇವೆ ನೆರವೇರಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ. ಸುಬ್ರಹ್ಮಣ್ಯ ಸ್ವಾಮಿ, ನಾಗ ದೇವರ ಸೇವಾಕಾರ್ಯಗಳಿಗೆ ಬಹಳಷ್ಟು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.
ಹೆಚ್.ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ ಎಂದು ಅವರು ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತಾರೆ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಕುಮಾರಸ್ವಾಮಿ ಸ್ಪರ್ಧಿಸ್ತಾರೆ? ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಹಲವಾರು ಭಾವನೆ ಬರ್ತಿದೆ ಅಷ್ಟೇ. ಹೆಚ್ಡಿಕೆ ಜೆಡಿಎಸ್ ಪಕ್ಷದ ಮುಖ್ಯ ನಾಯಕ ಸ್ಥಾನದಲ್ಲಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಎಲ್ಲಿ ಬೇಕಾದರೂ ನಿಲ್ಲಬಹುದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಹೇಳಲಾಗಲ್ಲ. ಏನೇ ಆದರೂ ಹೆಚ್ಡಿಕೆ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಒಬ್ಬರಿಗೊಬ್ಬರು ಮಾತನಾಡುವಾಗ ಚರ್ಚೆಯಾಗುತ್ತಿದೆ ಅಷ್ಟೇ ಎಂದು ಮಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಇದನ್ನೂ ಓದಿ: Opinion: ಹೆಚ್ ಡಿ ದೇವೇಗೌಡರ ಕೈಯಲ್ಲಿ ಸಿಎಂ ಇಬ್ರಾಹಿಂ ಒಂದು ರಾಜಕೀಯ ಅಸ್ತ್ರವಾಗಬಹುದೇ? ಒಂದು ವಿಶ್ಲೇಷಣೆ
ಇದನ್ನೂ ಓದಿ: ಮೊಮ್ಮಗಳು ಆತ್ಮಹತ್ಯೆ ಹಿನ್ನೆಲೆ: ಬಿಎಸ್ ಯಡಿಯೂರಪ್ಪಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಹೆಚ್ಡಿ ದೇವೇಗೌಡ