‘ನಾನು ಶೋಕಿಗಾಗಿ ಸಿನಿಮಾ ಮಾಡಿಲ್ಲ’; ವಿವಾದದ ಬಳಿಕ ‘ವರದ’ ಸಿನಿಮಾ ನಿರ್ದೇಶಕರ ನೇರ ಮಾತು

‘ನಾನು ಶೋಕಿಗಾಗಿ ಸಿನಿಮಾ ಮಾಡಿಲ್ಲ’; ವಿವಾದದ ಬಳಿಕ ‘ವರದ’ ಸಿನಿಮಾ ನಿರ್ದೇಶಕರ ನೇರ ಮಾತು

TV9 Web
| Updated By: ಮದನ್​ ಕುಮಾರ್​

Updated on: Feb 12, 2022 | 4:07 PM

‘ವೃತ್ತಿಪರ ಮೌಲ್ಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನಾನು ಶೋಕಿಗಾಗಿ ಈ ಚಿತ್ರ ಮಾಡಿಲ್ಲ’ ಎಂದು ‘ವರದ’ ಸಿನಿಮಾ ನಿರ್ದೇಶಕ-ನಿರ್ಮಾಪಕ ಖಡಕ್​ ಆಗಿ ಮಾತನಾಡಿದ್ದಾರೆ.

ನಟ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ‘ವರದ’ ಚಿತ್ರತಂಡದಲ್ಲಿ ಮನಸ್ತಾಪ ಭುಗಿಲೆದ್ದಿದೆ. ಚಿತ್ರದ ಟ್ರೇಲರ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಿಲ್ಲ ಎಂಬ ವಿಷಯದ ಕುರಿತು ವಿನೋದ್​ ಪ್ರಭಾಕರ್​ ಅವರು ಅಸಮಾಧಾನ ತೋಡಿಕೊಂಡರು. ಅದರ ಬೆನ್ನಲೇ ‘ವರದ’ (Varada Kannada Movie) ಚಿತ್ರತಂಡದಲ್ಲಿ ಇರುವ ವೈಮನಸ್ಸಿನ ಬಗ್ಗೆ ಬಹಿರಂಗ ಆಯಿತು. ಈ ಸಿನಿಮಾವನ್ನು ಉದಯ್​ ಪ್ರಕಾಶ್​ (Director Uday Prakash) ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ಅವರು ನಿಭಾಯಿಸಿದ್ದಾರೆ. ‘ನಾನು ಚಿತ್ರರಂಗಕ್ಕೆ ಬಂದು 25 ವರ್ಷ ಆಯ್ತು. ಒಂದು ಹೊತ್ತಿನ ಊಟಕ್ಕೆ ಗತಿ ಇರಲಿಲ್ಲ. ಆದರೆ ಒಂದು ಸಿನಿಮಾವನ್ನು ನಿರ್ಮಾಣವನ್ನು ಮಾಡುವಷ್ಟು ಶಕ್ತಿಯನ್ನು ದೇವರು ಇಂದು ಕೊಟ್ಟಿದ್ದಾನೆ. ಅದು ನಾನು ನನ್ನ ಕೆಲಸದ ಮೇಲೆ ಇಟ್ಟಿರುವ ನಂಬಿಕೆ. ಇಲ್ಲಿಯವರೆಗೂ ನಾನು ಯಾರಿಗೂ ಬಕೆಟ್​ ಹಿಡಿದಿಲ್ಲ. ನಾನು ಶೋಕಿಗಾಗಿ ಈ ಸಿನಿಮಾ ಮಾಡಿಲ್ಲ. ವೃತ್ತಿಪರ ಮೌಲ್ಯಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ’ ಎಂದು ಉದಯ್​ ಪ್ರಕಾಶ್​ ಹೇಳಿದ್ದಾರೆ. ಅಮಿತಾ ರಂಗನಾಥ್​, ಚರಣ್​ ರಾಜ್​, ಅನಿಲ್​ ಸಿದ್ದು, ಅಶ್ವಿನಿ ಗೌಡ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಸ್​. ಪ್ರದೀಪ್​ ವರ್ಮಾ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:

‘ಪುನೀತ್​ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್​ ಪ್ರಭಾಕರ್​ ಗರಂ

ಪುನೀತ್​ ಅಭಿನಯದ ‘ಜೇಮ್ಸ್’ ಟೀಸರ್​ ನೋಡಿ ವಿಶೇಷ ಸಾಲುಗಳನ್ನು ಬರೆದುಕೊಂಡ ನಟ ಪ್ರಭಾಸ್