‘ಪುನೀತ್​ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್​ ಪ್ರಭಾಕರ್​ ಗರಂ

‘ಪುನೀತ್​ ಸರ್​ಗೆ ನಮನ ಅಂತ ಒಂದೇ ಒಂದು ಫೋಟೋ ಕೂಡ ಈ ಟ್ರೇಲರ್​ನಲ್ಲಿ ಹಾಕಿಲ್ಲ. ಅದರಿಂದ ಖುದ್ದಾಗಿ ನನಗೆ ತುಂಬ ಬೇಸರವಾಗಿದೆ’ ಎಂದು ವಿನೋದ್​ ಪ್ರಭಾಕರ್​ ಹೇಳಿದ್ದಾರೆ.

‘ಪುನೀತ್​ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್​ ಪ್ರಭಾಕರ್​ ಗರಂ
| Updated By: ಮದನ್​ ಕುಮಾರ್​

Updated on: Feb 12, 2022 | 2:14 PM

ಖ್ಯಾತ ನಟ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ‘ವರದ’ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್​ ಪ್ರಭಾಕರ್​ ಅವರು ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ನೇರವಾಗಿ ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನದ ನಂತರ ಅನೇಕ ಚಿತ್ರತಂಡಗಳು ಅವರಿಗೆ ನಮನ ಸಲ್ಲಿಸುತ್ತಿವೆ. ಆದರೆ ‘ವರದ’ (Varada Kannada Movie) ಸಿನಿಮಾದ ಟ್ರೇಲರ್​ನಲ್ಲಿ ಅದು ಕಾಣಿಸಿಲ್ಲ. ಆ ಕಾರಣಕ್ಕೆ ವಿನೋದ್​ ಪ್ರಭಾಕರ್​ ಕೋಪಗೊಂಡಿದ್ದಾರೆ. ‘ಟ್ರೇಲರ್​ ನೋಡಿ ನನಗೆ ನಿಜಕ್ಕೂ ಬೇಜಾರಾಯ್ತು. ಪುನೀತ್​ ಸರ್​ಗೆ ನಮನ ಅಂತ ಒಂದೇ ಒಂದು ಫೋಟೋ ಕೂಡ ಇದರಲ್ಲಿ ಹಾಕಿಲ್ಲ. ಅದರಿಂದ ಖುದ್ದಾಗಿ ನನಗೆ ತುಂಬ ಬೇಸರವಾಗಿದೆ. ಯಾಕೆ ಹೀಗಾಯ್ತು ಅಂತ ಈಗ ಕಾರಣ ಹೇಳೋಕೆ ಹೋದರೆ ಅದು ಎಲ್ಲೆಲ್ಲೋ ಹೋಗುತ್ತದೆ. ಟ್ರೇಲರ್​ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ’ ಎಂದು ವಿನೋದ್​ ಪ್ರಭಾಕರ್​ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ‘ವರದ’ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಈ ಚಿತ್ರಕ್ಕೆ ಉದಯ್​ ಪ್ರಕಾಶ್​ ನಿರ್ದೇಶನ ಮಾಡಿದ್ದಾರೆ. ಅಮಿತಾ ರಂಗನಾಥ್​, ಚರಣ್​ ರಾಜ್​, ಅನಿಲ್​ ಸಿದ್ದು, ಅಶ್ವಿನಿ ಗೌಡ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

‘ಪರಭಾಷೆಯ ಯಾವ ಚಿತ್ರಕ್ಕೂ ಕಮ್ಮಿ ಇಲ್ಲ ಜೇಮ್ಸ್​ ಟೀಸರ್​’; ಹಾಡಿ ಹೊಗಳಿದ ಪುನೀತ್​ ಫ್ಯಾನ್ಸ್​

ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​