20 ಕುರಿ ಕಳ್ಳತನ: ತಾಯಿ ಹಾಲು ಇಲ್ಲದೆ ಮರಿಗಳ ಪರದಾಟ, ಪರಿಸ್ಥಿತಿ ನೆನೆದು ಕುರಿಗಾಹಿ ಕುಟುಂಬದ ಗೋಳಾಟ

| Updated By: ರಮೇಶ್ ಬಿ. ಜವಳಗೇರಾ

Updated on: Oct 23, 2022 | 11:13 PM

ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಗೆ ಕುರಿಗಳ ಕಳ್ಳತನ ಹೆಚ್ಚಾಗಿದ್ದು ಬಡ ಕುರಿಗಾಹಿಗಳಿಗೆ ಬಾರಿ ಹೊಡೆತ ಬೀಳುತ್ತಿದೆ. ಹಾಲು ಇಲ್ಲದೆ ಮರಿಗಳ ಪರದಾಟ, ಪರಿಸ್ಥಿತಿ ನೆನೆದು ಕುರಿಗಾಹಿ ಕುಟುಂಬದ ಗೋಳಾಟ.

20 ಕುರಿ ಕಳ್ಳತನ: ತಾಯಿ ಹಾಲು ಇಲ್ಲದೆ ಮರಿಗಳ ಪರದಾಟ, ಪರಿಸ್ಥಿತಿ ನೆನೆದು ಕುರಿಗಾಹಿ ಕುಟುಂಬದ ಗೋಳಾಟ
ಕುರಿ ಮರಿಗಳು
Follow us on

ಬಾಲಕೋಟೆ: ಕಷ್ಟಪಟ್ಟು ಗುಡ್ಡಗಾಡು ಹೊಲ ಗದ್ದೆ ಸುತ್ತಾಡಿ ಮೇಯಿಸಿದ ಕುರಿಗಳು ಕಳ್ಳರ ಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಹಿರೆಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಇದರಿಂದ ಕುರಿಗಾಹಿಗೆ ಮಾತ್ರ ಸಂಕಷ್ಟ ಮಾತ್ರವಲ್ಲದೇ ತಾಯಿ ಮೊಲೆ ಹಾಲು ಇಲ್ಲದೇ ಕುರಿಗಳ ಮರಿಗಳು ಸಹ ಪರದಾಡುತ್ತಿವೆ.

ಕುರಿಗಾಹಿಗಳಿಗೆ ಕುರಿಗಳೇ ಆಸ್ತಿ. ಅದನ್ನು ಬಿಟ್ಟು ಬೇರೆ ವೃತ್ತಿ ಅವರಿಗೆ ಗೊತ್ತಿಲ್ಲ. ಆದ್ರೆ, ಹಿರೆಬೂದಿಹಾಳದ ಜಗನಪ್ಪ ಪೂಜಾರ ಎಂಬ ಕುರಿಗಾಹಿಯ ಒಟ್ಟು 20 ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಂದು ಟಗರು ಸೇರಿದಂತೆ 20 ಕುರಿಗಳನ್ನು ರಾತ್ರಿ ಕಳ್ಳತನ ಮಾಡಿದ್ದು ಎರಡುವರೆ ಲಕ್ಷಕ್ಕೂ ಅದಿಕ ನಷ್ಟ ಆಗಿದೆ.ಸಾಲ ಮಾಡಿ ತಂದ ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದು ಈ ಕುಟುಂಬಕ್ಕೆ ಈಗ ದಿಕ್ಕು ತಚದಂತಾಗಿದೆ. ಒಂದು ಎರಡು ಕುರಿ ಆಗಿದ್ದರೆ ಹೇಗೋ ತಡೆದುಕೊಳ್ಳಬಹುದಿತ್ತು. ಆದರೆ ಒಂದು ಟಗರು ಸೇರಿದಂತೆ 20 ಕುರಿ ಕಳ್ಳತನ ಮಾಡಿದ್ದು ನಮಗೆ ಸರಕಾರ ಪರಿಹಾರ ಕೊಡಬೇಕು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನಮಗೆ ಕುರಿಗಳನ್ನ ಕೊಡಿಸಿ ಎಂದು ಕುಟುಂಬ ಗುಳೇದಗುಡ್ಡ ಪೊಲೀಸ್ ಠಾಣೆಗೆ ದೂರು ನೀಡಿದೆ.

Ballari: ಅಕ್ಕಿ ವ್ಯಾಪಾರಿಯ ಕೊಲೆ ಪ್ರಕರಣ; ಹತ್ತು ಆರೋಪಿಗಳ ಬಂಧನ

ಕುರಿಗಳನ್ನು ಕಳೆದುಕೊಂಡು ಕುಟುಂಬಕ್ಕೆ ಎರಡುವರೆ ಲಕ್ಷದಷ್ಟು ಆರ್ಥಿಕ ಸಂಕಷ್ಟ ಎದುರಾಗಿದ್ದು ಒಂದು ಕಡೆ ಆದರೆ.ಕುರಿಕಳ್ಳತನವಾಗಿದ್ದರಿಂದ ಹತ್ತು ಕುರಿಮರಿಗಳು ಅನಾಥವಾಗಿವೆ. ಕಳ್ಳರು ಕದ್ದ ಕುರಿಗಳನ್ನು ಹತ್ತು ಮರಿಗಳ ತಾಯಿ ಕುರಿಗಳು ಸೇರಿದ್ದು ತಾಯಿ ಇಲ್ಲದೆ ಮರಿಗಳು ಪರದಾಡುತ್ತಿವೆ.ತಾಯಿ ಇಲ್ಲದ ಪರಿಣಾಮ ಹಾಲು ಸಿಗದೆ ಹಸಿವಿನಿಂದ ಬಳಲುತ್ತಿವೆ.ಇದರಿಂದ ಕುರಿಗಳ ಸಂಕಟ ನೋಡದೆ ಕುರಿಗಾಹಿ ಕುಟುಂಬ ಕಣ್ಣೀರು ಹಾಕುತ್ತಿದೆ. ಕುರಿಗಾಹಿ ಕುಟುಂಬದ ವೃದ್ದೆ ಹನುಮವ್ವ ಮಕ್ಕಳಂತೆ ಕುರಿಗಳನ್ನು ಸಾಕಿ ಬೆಳೆಸಿರುತ್ತೇವೆ. ಹೀಗೆ ಕಳ್ಳತನ ಮಾಡಿದರೆ ನಮ್ಮ ಗತಿಯೇನು? ಇನ್ನು ಕುರಿಮರಿಗಳ ಸಂಕಟ ನೋಡುವುದಕ್ಕೆ ಆಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಲಕ್ಷಗಟ್ಟಲೇ ಹೊಡೆತ ಇನ್ನೊಂದು ಕಡೆ ಮರಿಗಳ ಆರ್ತನಾದ ಕೇಳದೆ ಕುರಿಗಾಹಿ ಕುಟುಂಬ ಕಂಗಾಲಾಗಿದೆ.ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕುರಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ,ಪೊಲೀಸರು ಇಂತಹ ಕಳ್ಳರನ್ನು ಹಿಡಿದು ಕರಿಗಾಹಿ ಕುಟುಂಬಕ್ಕೆ ನ್ಯಾಯ ನೀಡಬೇಕಿದೆ.