ಕೊನೆಗೂ ಎಚ್ಚೆತ್ತ ಗೃಹ ಇಲಾಖೆ: ​ವಿಧಾನಸೌಧದ 4 ಗೇಟ್​​​ಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ

ವಿಧಾನಸೌಧದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭದ್ರತಾ ಲೋಪಗಳು ಆಗುತ್ತಲೇ ಇವೆ. ಹೀಗಾಗಿ ಎಚ್ಚೆತ್ತುಕೊಂಡ ಗೃಹ ಇಲಾಖೆ ಇವುಗಳಿಗೆಲ್ಲ ಬ್ರೇಕ್ ಹಾಕಲು ಮುಂದಾಗಿದೆ. ಈ ಕುರಿತಾಗಿ ನಗರದಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್​, 2 ರಿಂದ 3 ಕೋಟಿ ರೂ. ಹಣ ಖರ್ಚು ಮಾಡಿ ನಾಲ್ಕು ಗೇಟ್​​ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಹೇಳಿದ್ದಾರೆ. 

ಕೊನೆಗೂ ಎಚ್ಚೆತ್ತ ಗೃಹ ಇಲಾಖೆ: ​ವಿಧಾನಸೌಧದ 4 ಗೇಟ್​​​ಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ
ಕೊನೆಗೂ ಎಚ್ಚೆತ್ತ ಗೃಹ ಇಲಾಖೆ: ​ವಿಧಾನಸೌಧದ 4 ಗೇಟ್​​​ಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ
Edited By:

Updated on: May 17, 2024 | 4:02 PM

ಬೆಂಗಳೂರು, ಮೇ 17: ವಿಧಾನಸೌಧದಲ್ಲಿ (Vidhana Soudha) ಒಂದಲ್ಲ ಒಂದು ರೀತಿಯಲ್ಲಿ ಭದ್ರತಾ ಲೋಪಗಳು ಆಗುತ್ತಲೇ ಇವೆ. ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಅದೇ ರೀತಿಯಾಗಿ ಯಾವುದೇ ರೀತಿಯ ಅನುಮತಿ ಪತ್ರಗಳು ಅಥವಾ ಪಾಸ್​ಗಳು ಇಲ್ಲದೇ ವಿಧಾನಸೌಧಕ್ಕೆ ಅಪರಿಚಿತರು ಪ್ರವೇಶಿಸುವ ಮೂಲಕ ಭದ್ರತಾ ಲೋಪಗಳು (Security breach)
ಕಂಡುಬಂದಿದ್ದವು. ಅಷ್ಟೇ ಅಲ್ಲದೇ ಕೆಲವೊಮ್ಮೆ ರಾಜಕೀಯ ನಾಯಕರ ಹೆಸರು ಹೇಳಿಕೊಂಡು ವಿಧಾನಸೌಧ ಒಳಗೆ ಹೋಗುತ್ತಾರೆ. ಹೀಗಾಗಿ ರಾಜ್ಯದ ಶಕ್ತಿಸೌಧದೊಳಗೆ ಯಾರು ಯಾವಾಗ ಹೋಗಬಹುದು, ಬರಹುದು ಎನ್ನುವ ರೀತಿಯಾಗಿದೆ. ಇದೀಗ ಕೆಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಗೃಹ ಇಲಾಖೆ ಇವುಗಳಿಗೆಲ್ಲ ಬ್ರೇಕ್ ಹಾಕಲು ಮುಂದಾಗಿದೆ.

2 ರಿಂದ 3 ಕೋಟಿ ರೂ. ಹಣ ಖರ್ಚು ಮಾಡಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ 

ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್​, ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್​​ಗಳಿಲ್ಲ ಎಂದು ಹೇಳಿದರು. ಹಾಗಾಗಿ ಇಂದು 2 ರಿಂದ 3 ಕೋಟಿ ರೂ. ಹಣ ಖರ್ಚು ಮಾಡಿ ನಾಲ್ಕು ಗೇಟ್​​ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲಾಖೆಯ ಖಾತೆಯಲ್ಲಿ ಹಣ ಇದ್ದರೂ ಯಾಕೆ ಖರ್ಚು ಮಾಡಿಲ್ಲ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

ವಿಧಾನ ಸೌಧಕ್ಕೆ ಬರುಬೇಕು ಅಂದರೆ ಇನ್ನು ಮುಂದೆ ಕ್ಯೂಆರ್​ ಕೋಡ್ ಇರುವ ಪಾಸ್​ಗಳನ್ನು ನೀಡಲಾಗುತ್ತದೆ. ವಿಧಾನ ಸೌಧದಲ್ಲಿ ಯಾರಾದರೂ ಲೋಹದ ವಸ್ತುಗಳನ್ನು ತಗೊಂಡು ಹೋಗುತ್ತಿದ್ದರೆ ಈ ಬ್ಯಾಗೇಜ್ ಸ್ಕ್ಯಾನರ್​​ನಲ್ಲಿ ಗೊತ್ತಾಗುತದೆ. ಮೂರು ವರ್ಷಗಳಿಂದ ಈ ಬ್ಯಾಗೇಜ್ ಸ್ಕ್ಯಾನರ್ ಕೆಟ್ಟಿದ್ದವು. ಈಗ ಸಿಎಂ ಸಿದ್ದರಾಮಯ್ಯ ಅವರು ಹಣ ಬೀಡುಗಡೆ ಮಾಡಿದ ಮೇಲೆ ಈ ಬ್ಯಾಗೇಜ್ ಸ್ಕ್ಯಾನರ್ ತೆಗೆದುಕೊಂಡು ಬಂದಿದ್ದೇವೆ ಎಂದರು.

ವಿಧಾನ ಸೌಧದಲ್ಲಿ ಸೆಕ್ಯೂರಿಟಿ ಇನ್ನು ಜಾಸ್ತಿ ಮಾಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಇನ್ನು ಮುಂದೆ ವಿಧಾನ ಸೌಧ ಪ್ರವೇಶ ಮಾಡಲು ಬೇಕಾಬಿಟ್ಟಿ ಪಾಸ್​​ಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಖಾಲಿ ಖಜಾನೆಯಲ್ಲಿ ಉಳಿದ ಚಿಲ್ಲರೆ ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ – ಪ್ರತಿಪಕ್ಷ ನಾಯಕ ಆರ್. ಅಶೋಕ ಲೇವಡಿ

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ವಿಚಾರವಾಗಿ ಮಾತನಾಡಿದ ಅವರು, ಯಾವ ವಿಚಾರನೋ‌ ಗೊತ್ತಿಲ್ಲ. ಅಜೆಂಡಾ ಇನ್ನು ಸಿಕ್ಕಿಲ್ಲ. ಮಳೆ‌ ಪ್ರಾರಂಭವಾಗಿದೆ. ಆದರೆ ಬರಗಾಲದ ಪರಿಣಾಮ ಇನ್ನು ಕಡಿಮೆಯಾಗಿಲ್ಲ. ಈ‌ ವಿಚಾರವೂ ಸಿಎಂ ಚರ್ಚೆ ಮಾಡುತ್ತಾರೆ ಅಂದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us