ಕೆಎಂಎಫ್​ ಗೆ ಇನ್ನು ಬಾಲಚಂದ್ರ ಸಾರಥ್ಯ! ಮುಗಿದ ರೇವಣ್ಣ ಅಧ್ಯಾಯ

|

Updated on: Sep 09, 2019 | 12:49 PM

ತೀವ್ರ ಕೂತೂಹಲ ಮೂಡಿಸಿದ್ದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್​) ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಸದಸ್ಯ ಬಲ ಹೊಂದಿರುವ ಕೆಎಂಎಫ್ ಒಕ್ಕೂಟದಲ್ಲಿ ಕಾಂಗ್ರೆಸ್ ಬೆಂಬಲಿತ 9,  ಜೆಡಿಎಸ್ ಬೆಂಬಲಿತ 3 ನಿರ್ದೇಶಕರು ಹಾಗೂ ನಾಲ್ವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಅವಿರೋಧ ಆಯ್ಕೆಯಾಗಲು ಸಹಕರಿಸಿದ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರಿಗೆ ಬಾಲಚಂದ್ರ ಜಾರಕಿಹೊಳಿ ಧನ್ಯವಾದ ತಿಳಿಸಿದ್ದಾರೆ. ಕೆಎಂಎಫ್​ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸುತ್ತೇನೆ. ಕೆಎಂಎಫ್​ ಅಧ್ಯಕ್ಷರು ಹಾಗೂ ಎಂಡಿಗಳ ನಡುವೆ […]

ಕೆಎಂಎಫ್​ ಗೆ ಇನ್ನು ಬಾಲಚಂದ್ರ ಸಾರಥ್ಯ! ಮುಗಿದ ರೇವಣ್ಣ ಅಧ್ಯಾಯ
Follow us on

ತೀವ್ರ ಕೂತೂಹಲ ಮೂಡಿಸಿದ್ದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್​) ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಸದಸ್ಯ ಬಲ ಹೊಂದಿರುವ ಕೆಎಂಎಫ್ ಒಕ್ಕೂಟದಲ್ಲಿ ಕಾಂಗ್ರೆಸ್ ಬೆಂಬಲಿತ 9,  ಜೆಡಿಎಸ್ ಬೆಂಬಲಿತ 3 ನಿರ್ದೇಶಕರು ಹಾಗೂ ನಾಲ್ವರು ನಾಮನಿರ್ದೇಶಿತ ಸದಸ್ಯರಿದ್ದಾರೆ.

ಅವಿರೋಧ ಆಯ್ಕೆಯಾಗಲು ಸಹಕರಿಸಿದ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರಿಗೆ ಬಾಲಚಂದ್ರ ಜಾರಕಿಹೊಳಿ ಧನ್ಯವಾದ ತಿಳಿಸಿದ್ದಾರೆ. ಕೆಎಂಎಫ್​ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸುತ್ತೇನೆ. ಕೆಎಂಎಫ್​ ಅಧ್ಯಕ್ಷರು ಹಾಗೂ ಎಂಡಿಗಳ ನಡುವೆ ಭಿನ್ನಾಭಿಪ್ರಾಯ ಬರಬಾರದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ ಎಂದು ಕೆಎಂಎಫ್​ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜುಲೈ 29 ರಂದು ನಡೆಯಬೇಕಾದ ಚುನಾವಣೆ ಮುಂದೂಡಿಕೆಯಾಗಿ ಇಂದು ನಿಗದಿಯಾಗಿತ್ತು. ಕೇವಲ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಜೆಡಿಎಸ್​ನ ಹೆಚ್​ಡಿ ರೇವಣ್ಣ ಚುನಾವಣಾ ಕಣದಿಂದ ಹಿಂದೆ ಸರಿದರು. ಕಾಂಗ್ರೆಸ್​ನ ಭೀಮಾ ನಾಯ್ಕ್​ ಮತ್ತು ಕಲಬುರ್ಗಿಯ ಕೆಎಂಎಫ್​ ನಿರ್ದೇಶಕ ಮಾರುತಿ ಕಾಂಶಪೂರ್  ಸಹ ಗೈರಾಗಿದ್ದರು.

Published On - 6:05 pm, Sat, 31 August 19