ಕಾಂಗ್ರೆಸ್ನ ಟ್ರಬಲ್ ಶೂಟರ್ ಕನಕಪುರದ ಬಂಡೇ ಎಂದೇ ಖ್ಯಾತಿಯಾಗಿರುವ ಮಾಜಿ ಸಚವಿ ಡಿಕೆ ಶಿವಕುಮಾರ್ ಗಣೇಶ ಹಬ್ಬದ ದಿನದಂದೇ ಕಣ್ಣೀರು ಹಾಕಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಡಿಕೆಶಿಯನ್ನು ವಿಚಾರಣೆ ನಡೆಸುತ್ತಿದೆ.
ಗಣೇಶ ಹಬ್ಬದಂದೂ ಇಡಿ ವಿಚಾರಣೆಗೆ ನಡೆಸುತ್ತಿದೆ. ಇಂದು ನಮ್ಮ ತಂದೆಗೆ, ಹಿರಿಯರಿಗೆ ಪೂಜೆ ಮಾಡಬೇಕಿತ್ತು. ಆದ್ರೆ ಎಡೆ ಇಡುವುದಕ್ಕೂ ನಮ್ಮನ್ನು ಬಿಟ್ಟಿಲ್ಲ. ನನ್ನ ಕೆಲ ಸ್ನೇಹಿತರು ಹೇಳುತ್ತಿದ್ದಾರೆ ಉಪ್ಪು ತಿಂದವನು ನೀರು ಕುಡಿಬೇಕು ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ, ನನ್ನ ನಂಬಿದ ಜನರಿಗಾಗಿ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಧ್ಯಮದು ಮುಂದೆ ಮಾತನಾಡುವ ವೇಳೆ ಡಿಕೆಶಿ ಕಣ್ಣೀರು ಹಾಕಿದ್ದಾರೆ.
ದೆಹಲಿಯ ಡಿಕೆ ಶಿವಕುಮಾರ್ ಮನೆಯಲ್ಲಿ ಐಟಿ ದಾಳಿ ವೇಳೆ ದಾಖಲೆಯಿಲ್ಲದ ಹಣ ಪತ್ತೆಯಾಗಿತ್ತು. ಈ ಸಂಬಂಧ ಇಡಿ ಹಣದ ಮೂಲ ತಿಳಿಸುವಂತೆ ಸಮನ್ಸ್ ನೀಡಿತ್ತು. ಇಡಿ ಸಮನ್ಸ್ ವಿರುದ್ಧ ಡಿಕೆಶಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಹೈಕೋರ್ಟ್ನಲ್ಲಿ ಹಿನ್ನಡೆಯಾದ ಬಳಿಕ ಡಿಕೆಶಿ ಜಾರಿ ನಿರ್ದೇಶನಾಯಲ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
Published On - 2:51 pm, Tue, 3 September 19