ಬಳ್ಳಾರಿ: ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವನಪ್ಪಿದ್ದು, ಆದರೆ ಉಪ್ಪಿನಲ್ಲಿ ಶವವಿಟ್ಟರೇ ಬಾಲಕ ಬದುಕುಳಿದು ಬರತ್ತಾನೆ ಎಂದು ಗ್ರಾಮಸ್ಥರು ಮೌಡ್ಯತೆ ಮೆರೆದಿರುವಂತಹ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಬಳ್ಳಾರಿಯಲ್ಲಿ ಮೌಡ್ಯತೆ ಇನ್ನೂ ಜೀವಂತವಾಗಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ಮೇಸೇಜ್ ನಂಬಿ ಗ್ರಾಮಸ್ಥರು ಮೂಡನಂಬಿಕೆ ಮೆರೆದಿದ್ದಾರೆ ಎನ್ನಲಾಗುತ್ತಿದೆ. ಹೊಂಡದಲ್ಲಿ ಈಜಲು ಹೋಗಿ 10 ವರ್ಷದ ಬಾಲಕ ಸುರೇಶ ಸಾವನಪ್ಪಿದ್ದಾನೆ. ನಿನ್ನೆ ಸಂಜೆ ನಾಲ್ಕು ಗಂಟೆಗಳ ಕಾಲ ಬಾಲಕನ ಶವವನ್ನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಉಪ್ಪಿನಲ್ಲಿ ಮುಚ್ಚಿಟ್ಟಿದ್ದಾರೆ. ಕೊನೆಗೆ ಬಾಲಕ ಬದುಕಿ ಬಾರದ ಹಿನ್ನಲೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಘಟನೆಯ ಬಗ್ಗೆ ಇನ್ನೂ ದಾಖಲಾಗದ ದೂರು.
ಚರಂಡಿಯಲ್ಲಿ 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬೆಂಗಳೂರು: ಚರಂಡಿಯಲ್ಲಿ 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವಂತಹ ಘಟನೆ ನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿ ನಡೆದಿದೆ. ಚರಂಡಿಗೆ ಬಿದ್ದು ಅಥವಾ ಕರೆಂಟ್ ಶಾಕ್ನಿಂದ ಸಾವು ಶಂಕೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲಿದೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಮೇಲ್ಚಾವಣಿ ಕುಸಿದು ಇಬ್ಬರಿಗೆ ಗಾಯ
ಯಾದಗಿರಿ: ಭಾರಿ ಮಳೆಯಿಂದ ಮನೆ ಮೇಲ್ಚಾವಣಿ ಕುಸಿದು ಇಬ್ಬರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ದ್ಯಾಮನಾಳದಲ್ಲಿ ನಡೆದಿದೆ. ಕಳೆದ 2 ದಿನದಿಂದ ಸುರಿದ ಮಳೆಗೆ ಮೇಲ್ಛಾವಣಿ ಕುಸಿದು ಬಿದಿದ್ದು, ಬಶೀರಾ ಬೇಗಂ ಮತ್ತು ಇಮ್ರಾನ್ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಕ್ಕೆ ಕೊಡೆಕಲ್ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ಮಾಡಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:19 pm, Mon, 5 September 22