ಬಳ್ಳಾರಿಯ ವಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; 21 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ

ಬಳ್ಳಾರಿಯ ವಿಮ್ಸ್‌ ವೈದ್ಯಕೀಯ ಕಾಲೇಜಿನ ಹಾಸ್ಟೋಲ್​ನಲ್ಲಿ 250 ವಿದ್ಯಾರ್ಥಿಗಳಿದ್ದು, ಇದರಲ್ಲಿ 21 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿಯ ವಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; 21 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ
ವಿಮ್ಸ್‌ ವೈದ್ಯಕೀಯ ಕಾಲೇಜು
Updated By: preethi shettigar

Updated on: Jan 05, 2022 | 11:33 AM

ಬಳ್ಳಾರಿ: ವಿಮ್ಸ್‌ ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿಗಳಿಗೆ ಕೊರೊನಾ ಧೃಡಪಟ್ಟಿದೆ. ಬಳ್ಳಾರಿಯ ವಿಮ್ಸ್‌ (Vims) ವೈದ್ಯಕೀಯ ಕಾಲೇಜಿನ ಹಾಸ್ಟೋಲ್​ನಲ್ಲಿ 250 ವಿದ್ಯಾರ್ಥಿಗಳಿದ್ದು, ಇದರಲ್ಲಿ 21 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳನ್ನು (Students) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಹಾಸ್ಟೆಲ್​ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಟಿವಿ9 ಡಿಜಿಟಲ್​ಗೆ ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿ: ಕೊರೊನಾ ಪಾಸಿಟಿವ್ ಬಂದ ನಾಲ್ವರ ಪೋನ್ ಸ್ವಿಚ್ ಆಫ್​
ಕಲಬುರಗಿಯಲ್ಲಿ ಕೊರೊನಾ ಪಾಸಿಟಿವ್ ಬಂದ ನಾಲ್ವರ ಪೋನ್ ಸ್ವಿಚ್ ಆಪ್ ಆಗಿದೆ. ಆರೋಗ್ಯ ಇಲಾಖೆಯ ಕೈಗೆ ಸಿಗದೇ ನಾಲ್ವರು ನಾಟ್ ರೀಚಬಲ್ ಮಾಡಿಕೊಂಡಿದ್ದಾರೆ. ಟೆಸ್ಟ್ ಮಾಡಿಸುವಾಗ ಕೊಟ್ಟ ಫೋನ್ ನಂಬರ್ ಸ್ವಿಚ್ ಆಫ್ ಆಗಿದ್ದು, ವಿಳಾಸ ಹುಡುಕಿಕೊಂಡು ಹೋದರೂ ನಾಲ್ವರು ವಿಳಾಸದಲ್ಲಿ ಪತ್ತೆಯಾಗಿಲ್ಲ. ನಾಲ್ವರನ್ನು ಪತ್ತೆ ಮಾಡಿ ಕೊಡುವಂತೆ ಆರೋಗ್ಯ ಇಲಾಖೆ ಪೋಲೀಸರ ಮೊರೆ ಹೋಗಿದೆ.

ತುಮಕೂರು: ಜಿಲ್ಲೆಯಲ್ಲಿ ಇಂದು 11 ಜನರಿಗೆ ಕೊರೊನಾ ದೃಢ
ಜಿಲ್ಲೆಯಲ್ಲಿ ಇಂದು 11 ಜನರಿಗೆ ಕೊರೊನಾ ದೃಢಪಟ್ಟಿದೆ.  ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ಇಂದು ಹೊಸದಾಗಿ 11 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದೆ. ಜಿಲ್ಲೆಯಲ್ಲಿ ಒಟ್ಟು 76 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಶೇಕಡಾ 0.30 ಪಾಸಿಟಿವ್ ರೇಟ್ ಇದೆ.

ಬೆಂಗಳೂರು: ಇಂದು 3,605 ಕೊವಿಡ್ ಕೇಸ್ ಪತ್ತೆ ಸಾಧ್ಯತೆ
ನಿನ್ನೆ 2,053 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು 3,605 ಜನರಲ್ಲಿ ಕೊರೊನಾ ಸೋಂಕು ಧೃಢಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:
ದೇಶದಲ್ಲಿ ಇಂದು ಬರೋಬ್ಬರಿ 58,097 ಕೊರೊನಾ ಸೋಂಕಿನ ಕೇಸ್​ಗಳು ದಾಖಲು; 534 ಮಂದಿ ಸಾವು, 2000 ದಾಟಿದ ಒಮಿಕ್ರಾನ್​ ಸೋಂಕಿತರ ಸಂಖ್ಯೆ

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಕೊರೊನಾ ಸೋಂಕು ದೃಢ

 

Published On - 11:08 am, Wed, 5 January 22