ಆಟೋಗೆ ಡಿಕ್ಕಿಯಾದ ಸರ್ಕಾರಿ ಬಸ್​, ಸ್ಥಳದಲ್ಲೇ ಇಬ್ಬರ ಸಾವು; ಹೈದ್ರಾಬಾದ್​​ಗೆ ಹೋಗುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

| Updated By: ವಿವೇಕ ಬಿರಾದಾರ

Updated on: Jun 22, 2022 | 8:07 PM

ಸರ್ಕಾರಿ ಬಸ್​ ಟೈರ್ ಸ್ಫೋಟವಾಗಿ ಆಟೋಗೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಬಳಿ ನಡೆದಿದೆ.

ಆಟೋಗೆ ಡಿಕ್ಕಿಯಾದ ಸರ್ಕಾರಿ ಬಸ್​, ಸ್ಥಳದಲ್ಲೇ ಇಬ್ಬರ ಸಾವು; ಹೈದ್ರಾಬಾದ್​​ಗೆ ಹೋಗುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ
ಪ್ರಾತಿನಿಧಿಕ ಚಿತ್ರ
Follow us on

ವಿಜಯನಗರ: ಸರ್ಕಾರಿ ಬಸ್​ (KSRTC) ಟೈರ್ ಸ್ಫೋಟವಾಗಿ ಆಟೋಗೆ (Auto) ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ಕೂಡ್ಲಿಗಿ (Kudalgi) ತಾಲೂಕಿನ ಕುಪ್ಪಿನಕೇರಿ ಬಳಿ ನಡೆದಿದೆ. ಕೂಡ್ಲಿಗಿಯ ಎಸ್.ಎ.ವಿ.ಟಿ ಕಾಲೇಜಿನ (College) ವಿದ್ಯಾರ್ಥಿನಿಪುಷ್ಪಲತಾ(20), ಮೀನಾಕ್ಷಿ(38) ಮೃತ ದುರ್ದೈವಿಗಳು. ಸರ್ಕಾರಿ ಬಸ್​ ದಾವಣಗೆರೆಯಿಂದ ಕೂಡ್ಲಿಗಿ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿತ್ತು. ಈ ವೇಳೆ ಬಸ್​ ಟೈರ್ ಸ್ಫೋಟವಾಗಿ ಆಟೋಗೆ ಡಿಕ್ಕಿಯಾಗಿದೆ. ಪರಿಣಾಮ  ಆಟೋ, ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಆಟೋದಲ್ಲಿದ್ದ ರಮೇಶ, ಗೌಡ್ರು ಈರಣ್ಣ, ಅಭಿಷೇಕ್, ಸ್ವಾತಿ ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆ ಮತ್ತು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಪತ್ತೆ ಪ್ರಕರಣ: ಸುಳಿವು ಕೊಟ್ಟವರಿಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಹುಮಾನ

ಭಾಲ್ಕಿಯಿಂದ ಹೈದ್ರಾಬಾದ್​​ಗೆ ಹೋಗುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

ಬೀದರ್​​:  ಭಾಲ್ಕಿಯಿಂದ ಹೈದ್ರಾಬಾದ್ ಗೆ ಹೋಗುತ್ತಿದ್ದ  ಡಸ್ಟರ್ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ  ಕಾರು ಸಂಪೂರ್ಣ ಹೊತ್ತಿ ಉರಿದಿರುವ ಘಟನೆ   ಬೀದರ್ ‌ತಾಲೂಕಿನ‌ ಹೊನ್ನಿಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅದೃಷ್ಟವಶಾವತಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶ ಪಾಸಿಂಗ್ ಇದ್ದ ಡಸ್ಟರ್ ಕಾರಿಗೆ ಬೆಂಕಿ ಹತ್ತಿ ಹೊಗೆ‌ ಬರಲಾರಂಭಿಸಿದ ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ತಕ್ಷಣ ‌ಕೆಳಗಿಳಿದಿದ್ದಾರೆ.  ನೋಡು ನೋಡುತ್ತಿದ್ದಂತೆ ಕಾರು ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋಗಿದೆ.

ಇದನ್ನು ಓದಿ: ಟಿವಿ9 ರಹಸ್ಯ ಕಾರ್ಯಾಚರಣೆ ವರದಿಯ ಬಿಗ್​ ಇಂಪ್ಯಾಕ್ಟ್: ಸೆಂಟ್ರಲ್ ಜೈಲಿನ 7 ಸಿಬ್ಬಂದಿ ವರ್ಗಾವಣೆ!

ವೃದ್ದೆಯ ಮೂರು ಲಕ್ಷ ಚಿನ್ನದ ಸರ ಕದ್ದು ಪರಾರಿ

ಕೊಪ್ಪಳ: ಹಾಡುಹಗಲೆ ವೃದ್ದೆಯ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕದ್ದು ಪರಾರಿ ಕಳ್ಳರು ಪರಾರಿಯಾಗಿರುವ ಘಟನೆ  ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ಕನಕರತ್ನ ಎಂಬ ವೃದ್ದೆ ಮೂರು ಲಕ್ಷ ಮೌಲ್ಯದ ಚಿನ್ನದ ಸರ ಧರಿಸಿಕೊಂಡು ಗಂಗಾವತಿ ಇಂದ ಬಾಪಿರೆಡ್ಡಿ ಕ್ಯಾಂಪ್ ಗೆ ಹೊರಟಿದ್ದರು. ಈ ವೇಳೆ ಚಿನ್ನದ ಸರ ಎಗುರಿಸಿ ಕಳ್ಳರು ಪರಾರಿಯಾಗಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:07 pm, Wed, 22 June 22