ಬೆಂಗಳೂರು: ನಗರದ ಸೆಂಟ್ರಲ್ ಜೈಲಿನಲ್ಲಿ ಅಕ್ರಮದ ಬಗ್ಗೆ ಟಿವಿ9 ರಹಸ್ಯ ಕಾರ್ಯಾಚರಣೆ ಮಾಡಿದ ವರದಿಯ ಪರಿಣಾಮ ಜೈಲಿನ 7 ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಲಾಗಿದೆ. ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಲಕ್ಸುರಿ ಸೌಲಭ್ಯ ನೀಡುತ್ತಿ ಬಗ್ಗೆ ಮಾಹಿತಿ ತಿಳಿದ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಅದರಂತೆ ‘ಪಾಪಿ ಪ್ರಪಂಚ’ ಎಂಬ ಹೆಸರಿನಲ್ಲಿ ವರದಿ ಪ್ರಸಾರ ಮಾಡಿತ್ತು. ಈ ವರದಿ ಸಲ್ಲಿಕೆ ಬೆನ್ನಲ್ಲೆ ಎಡಿಜಿಪಿ ಮುರುಗನ್ ವರದಿ ಆಧರಿಸಿ 7 ಮಂದಿ ಸಿಬ್ಬಂದಿಗಳನ್ನು ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗಿದೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬ ನಿಟ್ಟಿನಲ್ಲಿ ಕಾನೂನು ಪ್ರಕಾರ ಜೈಲಿಗೆ ಕಳುಹಿಸಿದರೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕೆಲವು ಸಿಬ್ಬಂದಿಗಳು ಹಣಕ್ಕಾಗಿ ಅಡ್ಡದಾರಿ ಹಿದಿರುವುದು ಎಷ್ಟು ಸರಿ? ಲಕ್ಷ ಲಕ್ಷ ಹಣ ಪಡೆದು ಕೈದಿಗಳಿಗೆ ಐಶಾರಾಮಿ ಸೌಲಭ್ಯಗಳನ್ನು ಸಿಬ್ಬಂದಿಗಳು ನೀಡುತ್ತಿದ್ದರು. ಅದರಂತೆ ಜೈಲಿನಲ್ಲೇ ಕುಳಿತುಕೊಂಡು ಕೈದಿಗಳು ಫೈನಾನ್ಸ್ ದಂಧೆ, ಕೊಲೆ ನಡೆಸಲು ಪ್ಲ್ಯಾನ್ ಹಾಕಲು ಪ್ರಾರಂಭಿಸಿದ್ದರು. ಅಲ್ಲದೆ ಜೈಲಿನ ರೂಂಗಳಿಗೆ ತಿಂಗಳಿಗೆ 3.5 ಲಕ್ಷ, 5 ಲಕ್ಷ ಬಾಡಿಗೆ ಕೂಡ ನೀಡಲಾಗುತ್ತಿತ್ತು. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಕೂಡ ಇದೆ. ಈ ಬಗ್ಗೆ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿದಾಗ ಜೈಲಿನಲ್ಲಿ ಅಕ್ರಮ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Crime News: ಮನೆ ನಿರ್ಮಾಣಕ್ಕೆ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಎಸಿಬಿ ಬಲೆಗೆ
ವರದಿ ಪ್ರಸಾರವಾಗಿದ್ದು ಮಾತ್ರವಲ್ಲದೆ, ವರದಿಯನ್ನು ಸಲ್ಲಿಸಿದ ಬಳಿಕ ಎಡಿಜಿಪಿ ಮುರುಗನ್ ಅವರು 18 ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಪೈಕಿ 7 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ. ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್.ಅಶೋಕ್ (ವಿಜಯಪುರ), ಎಸ್.ಎನ್.ರಮೇಶ್ (ಬಳ್ಳಾರಿ), ಶಿವಾನಂದ ಕೆ.ಗಾಣಿಗಾರ್ (ಬೆಳಗಾವಿ), ಉಮೇಶ್ ಆರ್.ದೊಡ್ಡಮನಿ (ಮೈಸೂರು), ಲೊಕೇಶ್ ಪಿ. (ಧಾರವಾಡ), ಭೀಮಣ್ಣ ದೇವಪ್ಪ ನೆದಲಗಿ (ಶಿವಮೊಗ್ಗ), ಮಹೇಶ್ ಸಿದ್ದನಗೌಡ ಪಾಟೀಲ್( ಕಲಬುರಗಿ) ಅವರನ್ನು ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಆದೇಶದಲ್ಲಿ ಗೊಂದಲ
ಜೈಲಿನಲ್ಲಿ ಅಕ್ರಮ ನಡೆದಿದೆ ಎನ್ನಲಾದ ಕುರಿತು ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಲು ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಆದೇಶದಲ್ಲಿ ಗೊಂದಲ ಉಂಟಾಗಿದ್ದು, ಬಡ್ತಿ ನೀಡಿ ಆದೇಶ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಏಳು ಜೈಲಾಧಿಕಾರಿಗಳಿಗೆ ಅಧಿಕಾರಿಗಳ ಮುಖ್ಯ ವೀಕ್ಷಕನಿಂದ ಮುಖ್ಯ ಅಧೀಕ್ಷಕ ಬಡ್ತಿ ಎಂದು ಆದೇಶದಲ್ಲಿ ನಮೂದು ಮಾಡಲಾಗಿದ್ದು, ಕಾಣ್ತಪ್ಪಿನಿಂದ ವಿಷಯಾಂತರ ಆಗಿರುವ ಸಾಧ್ಯತೆ ಇದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ