ಅನ್ನಭಾಗ್ಯ ಅಕ್ಕಿ ಹೊರ ರಾಜ್ಯಕ್ಕೆ ಸಾಗಿಸುವ ಜಾಲ ಪತ್ತೆ: ಕಂಪ್ಲಿ ಶಾಸಕ ಜೆ.ಎನ್.ಗಣೇಶ್​​ ರಾತ್ರೋ ರಾತ್ರಿ‌ ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 24, 2022 | 8:16 AM

ಒಂದು ಲಾರಿಯಲ್ಲಿ ‌ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿದ್ದು, ದಿನಕ್ಕೆ ಒಂದುವರೆ ಲಕ್ಷ ಲಾಭ ಪಡೆಯೋ ಪ್ರಭಾವಿ ನಾಯಕ ಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಅನ್ನಭಾಗ್ಯ ಅಕ್ಕಿ ಹೊರ ರಾಜ್ಯಕ್ಕೆ ಸಾಗಿಸುವ ಜಾಲ ಪತ್ತೆ: ಕಂಪ್ಲಿ ಶಾಸಕ ಜೆ.ಎನ್.ಗಣೇಶ್​​ ರಾತ್ರೋ ರಾತ್ರಿ‌ ದಾಳಿ
ಕಂಪ್ಲಿ ಶಾಸಕ ಜೆ ಎನ್ ಗಣೇಶ ರಾತ್ರೋ ರಾತ್ರಿ‌ ದಾಳಿ
Follow us on

ಬಳ್ಳಾರಿ: ಅನ್ನಭಾಗ್ಯದ (Annabhagya) ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಿಸೋ ಜಾಲ ಪತ್ತೆಯಾಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಕಂಪ್ಲಿ ಶಾಸಕ ಜೆ.ಎನ್ ಗಣೇಶ್​ ರಾತ್ರೋ ರಾತ್ರಿ‌ ದಾಳಿ ಮಾಡಿ ಜಾಲವನ್ನು ಪತ್ತೆ ಮಾಡಲಾಗಿದೆ. ಕೋಳಿ‌ ಫಾರಂ ಒಳಗೆ ನಡೆಯುತ್ತದೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕೋ ಕೆಲಸ ನಡೆಯುತ್ತಿದ್ದು, ದಿನಕ್ಕೆ ಎರಡು ಲಾರಿ ಲೋಡ್ ಅಕ್ಕಿಯನ್ನು ಕಂಪ್ಲಿಯಿಂದ ತಮಿಳುನಾಡು ಗುಜರಾತ್ ಕಡೆ ಸಾಗಣೆ ಮಾಡಲಾಗುತ್ತಿದೆ. ಒಂದು ಲಾರಿಯಲ್ಲಿ ‌ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿದ್ದು, ದಿನಕ್ಕೆ ಒಂದುವರೆ ಲಕ್ಷ ಲಾಭ ಪಡೆಯೋ ಪ್ರಭಾವಿ ನಾಯಕ ಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ದಾಳಿ ಮಾಡುತ್ತಿದ್ದಂತೆ ಸ್ಥಳದಿಂದ ಹಲವು ಖದೀಮರು ಓಡಿ ಹೋಗಿದ್ದು, ನಾಲ್ವರನ್ನ ಶಾಸಕರ ತಂಡ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಸೀರೆ ಕದಿಯುವ ನಾರಿಯರು! ಒಳ ಉಡುಪಿನಲ್ಲಿ ಮುಚ್ಚಿಟ್ಟು 26 ರೇಷ್ಮೆ ಸೀರೆ ಕದಿಯುವುದು ಸಿಸಿಟಿವಿಯಲ್ಲಿ ಪತ್ತೆ!

ಸ್ಥಳೀಯರಲ್ಲ ಮತ್ತು ಕನ್ನಡ ಭಾಷೆ ಬಾರದೇ ಇರೋರ‌‌ ಜೊತೆ ಖದೀಮರು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಪ್ರಭಾವಿ ನಾಯಕರು ಹಿಂದೆ ಇರೋ ಶಂಕೆಯಿದ್ದು, ಆದರೆ ಇಲ್ಲಿ ಕೆಲಸ ಮಾಡೋರಿಗೆ ಮಾಲೀಕರು ಯಾರು ಅನ್ನೋದೇ ಗೊತ್ತಿಲ್ಲ. ದಾಳಿ ಮಾಡಿದ ಬಳಿಕ ಬಂದ ಪೊಲೀಸರು ‌ಸಾವಿರಾರು ಚೀಲ ಅಕ್ಕಿ, ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.

ಎಪಿಎಮ್​ಸಿ ಮಾರುಕಟ್ಟೆಯಲ್ಲಿ ಕಳ್ಳತನ: 53 ಸಾವಿರ ನಗದು ದೋಚಿ ಪರಾರಿ

ತುಮಕೂರು: ತಿಪಟೂರು ನಗರದ ಎಪಿಎಮ್​ಸಿ ಮಾರುಕಟ್ಟೆಯಲ್ಲಿ ಕಳ್ಳತನವಾಗಿದ್ದು, ಸುಮಾರು 53 ಸಾವಿರ ನಗದು ದೋಚಿ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ತಿಪಟೂರು ನಗರದ ಎಪಿಎಮ್ ಸಿ ಮಾರುಕಟ್ಟೆ ಕೊಬರಿ ಯಾರ್ಡ್ ನಲ್ಲಿ ಘಟನೆ ಸಂಭವಿಸಿದೆ. ಕೊಬರಿ ಯಾರ್ಡ್​ನಲ್ಲಿರುವ ಬಾಗಿಲು ಮುರಿದು ನಗದು ಕಳವು ಮಾಡಲಾಗಿದೆ. ಕೊಬರಿ ಯಾರ್ಡ್​​ನಲ್ಲಿರುವ ಟಿಎಪಿಸಿಎಮ್​​ಎಸ್ ಲಿಮಿಟೆಡ್ ಕಚೇರಿ ಬೀಗ ಹೊಡೆದು ಕಳವು ಮಾಡಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.