ಗಣಿ ನಾಡಿನಲ್ಲಿ ತುತ್ತು ಅನ್ನಕ್ಕೂ ಪರದಾಟ, ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೊರಟ ಗ್ರಾಮಸ್ಥರು

|

Updated on: Feb 07, 2020 | 2:06 PM

ಬಳ್ಳಾರಿ: ಒಂದು ವಸ್ತುವನ್ನೂ ಬಿಟ್ಟಿಲ್ಲ. ಒಂದು ಸಾಮಾನೂ ಉಳಿದಿಲ್ಲ. ಎಲ್ಲವನ್ನೂ ಮೂಟೆ ಕಟ್ಟಿ ಗಾಡಿಗೆ ಹಾಕಿ ಬಿಡೋದೇ. ಹೀಗೆ ಎಲ್ರೂ ಗಂಟುಮೂಟೆ ಕಟ್ತಿದ್ರೆ ಮನೆಗಳಿಗೆಲ್ಲಾ ಬೀಗ. ಇಡೀ ಊರಿಗೂರೇ ಖಾಲಿ ಖಾಲಿ. ಅರೆ.. ಇದೇನ್ ಸ್ವಾಮಿ. ಎಲ್ರೂ ಒಮ್ಮೆಲೆ ಹೋಗ್ತಿದ್ದಾರೆ. ಯಾವುದಾದ್ರೂ ಜಾತ್ರೆಗೆ ಹೋಗ್ತಿದ್ದಾರಾ ಅಂತಾ ಕನ್ಫ್ಯೂಸ್ ಆಗ್ತಿದ್ಯಾ? ನೀವಂದುಕೊಂಡಿದ್ದಂತೂ ಅಲ್ಲ ಯಾಕಂದ್ರೆ, ಇವರೆಲ್ಲಾ ಗುಳೆ ಹೊರಟಿದ್ದಾರೆ. ಹೊಟ್ಟೆ ಪಾಡು ತುಂಬಿಸಿಕೊಳ್ಳಲು ಊರನ್ನೇ ಬಿಡ್ತಿದ್ದಾರೆ. ನಿಜ.. ಗಣಿನಾಡಿನ ಪ್ರತಿಯೊಬ್ಬರದ್ದೂ ಇದೇ ಗೋಳು. ಕೂಡ್ಲಿಗಿ ತಾಲೂಕಿನ ತೀರ್ಥಹಳ್ಳಿ, ಧರ್ಮಸ್ಥಳ […]

ಗಣಿ ನಾಡಿನಲ್ಲಿ ತುತ್ತು ಅನ್ನಕ್ಕೂ ಪರದಾಟ, ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೊರಟ ಗ್ರಾಮಸ್ಥರು
Follow us on

ಬಳ್ಳಾರಿ: ಒಂದು ವಸ್ತುವನ್ನೂ ಬಿಟ್ಟಿಲ್ಲ. ಒಂದು ಸಾಮಾನೂ ಉಳಿದಿಲ್ಲ. ಎಲ್ಲವನ್ನೂ ಮೂಟೆ ಕಟ್ಟಿ ಗಾಡಿಗೆ ಹಾಕಿ ಬಿಡೋದೇ. ಹೀಗೆ ಎಲ್ರೂ ಗಂಟುಮೂಟೆ ಕಟ್ತಿದ್ರೆ ಮನೆಗಳಿಗೆಲ್ಲಾ ಬೀಗ. ಇಡೀ ಊರಿಗೂರೇ ಖಾಲಿ ಖಾಲಿ.

ಅರೆ.. ಇದೇನ್ ಸ್ವಾಮಿ. ಎಲ್ರೂ ಒಮ್ಮೆಲೆ ಹೋಗ್ತಿದ್ದಾರೆ. ಯಾವುದಾದ್ರೂ ಜಾತ್ರೆಗೆ ಹೋಗ್ತಿದ್ದಾರಾ ಅಂತಾ ಕನ್ಫ್ಯೂಸ್ ಆಗ್ತಿದ್ಯಾ? ನೀವಂದುಕೊಂಡಿದ್ದಂತೂ ಅಲ್ಲ ಯಾಕಂದ್ರೆ, ಇವರೆಲ್ಲಾ ಗುಳೆ ಹೊರಟಿದ್ದಾರೆ. ಹೊಟ್ಟೆ ಪಾಡು ತುಂಬಿಸಿಕೊಳ್ಳಲು ಊರನ್ನೇ ಬಿಡ್ತಿದ್ದಾರೆ.

ನಿಜ.. ಗಣಿನಾಡಿನ ಪ್ರತಿಯೊಬ್ಬರದ್ದೂ ಇದೇ ಗೋಳು. ಕೂಡ್ಲಿಗಿ ತಾಲೂಕಿನ ತೀರ್ಥಹಳ್ಳಿ, ಧರ್ಮಸ್ಥಳ ಸೇರಿದಂತೆ ವಿವಿಧೆಡೆ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಯಾಕಂದ್ರೆ, ಕೂಡ್ಲಿಗಿ ತಾಲೂಕಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆ ಇಲ್ಲದೇ ಬೆಳೆಗಳು ಒಣಗಿ ಹೋಗ್ತಿವೆ. ಕೂಲಿ ಕೆಲಸವೂ ಸಿಗ್ತಿಲ್ಲ. ಹೀಗಾಗಿ ಜನ ಕೂಲಿ ಅರಸಿ ಗುಳೆ ಹೊರಟಿದ್ದಾರೆ. ಮನೆಗೆ ಬೀಗ ಹಾಕಿ ಹೊಟ್ಟೆ ಪಾಡಿಗಾಗಿ ಊರೂರು ಅಲೆದಾಡುವಂತಾಗಿದೆ.

ಇನ್ನು, ಬರಗಾಲದಿಂದ ತತ್ತರಿಸಿರುವ ತಾಲೂಕುಗಳಲ್ಲಿ ಜನರು ಗುಳೆ ಹೋಗುವುದನ್ನ ತಪ್ಪಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಬರ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದ್ರೆ, ಬಳ್ಳಾರಿ ಜಿಲ್ಲಾಡಳಿತ, ತನ್ನ ಕರ್ತವ್ಯವನ್ನೇ ಮರೆತಿದೆ.

ಕೂಡ್ಲಿಗಿ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಇದುವರೆಗೆ ಉದ್ಯೋಗ ಖಾತ್ರಿ ಕೆಲ್ಸವನ್ನೇ ಕೊಟ್ಟಿಲ್ಲ. ಜನ ಬದುಕೋದೇ ಕಷ್ಟ ಆಗ್ತಿದೆ. ಹೀಗಾಗಿ, ಮನೆಗೆ ಬೀಗ ಹಾಕಿಕೊಂಡು ಗುಳೆ ಹೋಗುತ್ತಿದ್ದಾರೆ. ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆಗೆ ಕರೆದುಕೊಂಡು ಹೋಗ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಒಟ್ನಲ್ಲಿ, ಜಿಲ್ಲಾಡಳಿತ ಉದ್ಯೋಗ ಖಾತ್ರಿ ಕೆಲಸ ಕೊಟ್ಟಿಲ್ಲ. ಇದ್ರಿಂದಾಗಿ ಕೂಲಿ ಕೆಲಸ ಸಿಗದೇ ಜನ ಗುಳೆ ಹೋಗ್ತಿದ್ದಾರೆ. ಪುಟ್ಟ ಮಕ್ಕಳನ್ನ ಕಟ್ಕೊಂಡು ವಲಸೆ ಹೊರಟಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನೊಂದವರಿಗೆ ನೆರವಿಗೆ ನಿಲ್ಲಬೇಕಿದೆ.