ಬಳ್ಳಾರಿ: ಆ ಗ್ರಾಮದಲ್ಲಿ ಮನೆಗೊಬ್ರು ಪೈಲ್ವಾನ್ಗಳು.. ಊರಲ್ಲಿ ಏನ್ ತಪ್ಪಿದ್ರೂ, ಕುಸ್ತಿ ಪಂದ್ಯಾವಳಿ ಮಾತ್ರ ತಪ್ಪಲ್ಲ. ಹಾಗೇ, ಈ ಬಾರಿಯೂ ಕೂಡ ಖದರ್ ಕುಸ್ತಿ ನಡೀತು. ಮಟ್ಟಿ ಮೇಲೆ, ಊರಿನ ಮಕ್ಕಳೆಲ್ಲ ಧೂಳೆಬ್ಬಿಸಿದ್ರು. ಅದೇನ್ ಪಟ್ಟು.. ಅದೆಂತಹ ಹಿಡಿತ.. ಮಣ್ಣಿನ ಕೆಳಗೆ ಬಿದ್ದವನ ತೆಕ್ಕೆಗೆ ಹಿಡಿದುಕೊಂಡ್ರೇ ಮುಗೀತು. ಮಿಸುಕಾಡೋ ಮಾತೇಯಿಲ್ಲ. ನೆಲಕ್ಕೆ ಒಗೆಯದೆ ಬಿಡೋದೆ ಇಲ್ಲ. ಚೋಟಾ ಪೈಲ್ವಾನ್ರದ್ದು ಅದೇ ಗತ್ತು. ದೊಡ್ಡರ ಆಟವಂತೂ ಸಿಕ್ಕಾಪಟ್ಟೆ ಗಮ್ಮತ್ತು.
ತಾಕತ್ತು ತೋರಿಸಿದ ಪೈಲ್ವಾನರು:
ವೆಂಕಟೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಪ್ರತಿ ವರ್ಷ ಕುಸ್ತಿ ಪಂದ್ಯಾವಳಿ ನಡೆಯುತ್ತೆ. ಇಲ್ಲಿನ ನಾಣಿಕೇರಿ ಜಟ್ಟಿಗಳ ತವರೂರಾಗಿದ್ದು, ಸಾಕಷ್ಟು ಪೈಲ್ವಾನರಿದ್ರು. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇಲ್ಲಿ ಕುಸ್ತಿ ಪಂದ್ಯ ನಡೆಯುತ್ತಿದ್ದು, ಪರಂಪರೆಯನ್ನ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಒಟ್ನಲ್ಲಿ, ಮಟ್ಟಿಯ ಮೇಲೆ ಪೈಲ್ವಾನ್ಗಳು ಪಟ್ಟು ಹಾಕ್ತಿದ್ರೆ, ಜನರೆಲ್ಲ ಕೇಕೆ ಚಪ್ಪಾಳೆ ಹಾಕ್ತಿದ್ರು. ಕುಸ್ತಿ ಕಾಳಗ ರೋಚಕವಾಗಿತ್ತು.