ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿದ್ದ ಗಡಿಯಾರ ಕಂಬವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. 140 ಅಡಿ ಎತ್ತರದ ಕ್ಲಾಕ್ ಟವರ್ ನಿರ್ಮಿಸಲು ಗಡಿಯಾರ ಕಂಬ ತೆರವು ಮಾಡಿದ್ದು, ಲೆಬೆನಾನ್ ಮಾದರಿ ಕ್ಲಾಕ್ ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಹಳೆಯದಾಗಿದ್ದ ಗಡಿಗಿ ಚೆನ್ನಪ್ಪ ಸ್ಮಾರಕ ಗಡಿಯಾರ ಕಂಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಮ್ಮುಖದಲ್ಲಿ ತೆರವು ಮಾಡಲಾಯಿತು. 7 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕ್ಲಾಕ್ ಟವರ್ ತಲೆ ಎತ್ತಲಿದೆ. 2009ರಲ್ಲಿ ಗಡಿಗಿ ಚೆನ್ನಪ್ಪ ವೃತ್ತವನ್ನು ರೆಡ್ಡಿ ಬ್ರದರ್ಸ್, ಶ್ರೀರಾಮುಲು ತೆರವು ಮಾಡಿದ್ದರು. ರಾಯಲ್ ವೃತ್ತದಲ್ಲಿ ಗಡಿಯಾರ ಗೋಪುರ ತೆರವಿಗೆ ಕಾಂಗ್ರೆಸ್ ವಿರೋಧಿಸಿದೆ.
ಸುಸಜ್ಜಿತ ಗಡಿಯಾರ ಗೋಪುರ ತೆರವಿಗೆ ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಗಡಿಯಾರ ಕಂಬ ತೆರವು ನಂತರ ‘ಕೈ’ ನಾಯಕರು ಸ್ಥಳಕ್ಕೆ ಆಗಮಿಸಿದರು. ಗಡಿಯಾರ ಗೋಪುರ ತೆರವು ವೇಳೆ ಸುಮ್ಮನಿದ್ದ ಕಾಂಗ್ರೆಸ್ ನಾಯಕರು, 7 ಕೋಟಿ ವೆಚ್ಚದಲ್ಲಿ ಲೆಬಿನಾನ್ ಮಾದರಿಯ ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ರಾಯಲ್ ವೃತ್ತದಲ್ಲಿ ರಾತ್ರಿಯಿಂದ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ ಮಾಡುತ್ತಿದ್ದು, ಪಾಲಿಕೆಯಿಂದ ಒಪ್ಪಿಗೆ ಪಡೆಯದೇ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದ್ದು, 7 ಕೋಟಿ ವೆಚ್ಚದಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಾಣಕ್ಕೆ ಕೈ ಪಡೆ ಗರಂ ಆಗಿದೆ.
ಇನ್ನೂ ಕಾಂಗ್ರೆಸ್ ಆಕ್ಷೇಪಕ್ಕೆ ಪಾಲಿಕೆ ಆಯುಕ್ತ ರುದ್ರೇಶ ಸ್ಪಷ್ಟಿಕರಣ ನೀಡಿದ್ದು, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಅನುಮತಿ ಪಡೆಯಲಾಗಿದೆ. ಸಾರ್ವಜನಿಕ ಸಭೆ ಕರೆದು ಅಭಿಪ್ರಾಯ ಪಡೆಯಲಾಗಿದೆ. ಕಾನೂನುಬದ್ದವಾಗಿ ಟೆಂಡರ್ ಕರೆದು ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Wed, 24 August 22