ಬಳ್ಳಾರಿ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಳ್ಳಾರಿ ಪ್ರವೇಶಿಸಿ 1000 ಕಿ.ಮೀ ಪೂರೈಸಿದ ಯಾತ್ರೆ ಇಂದು ಆಂಧ್ರ ತಲುಪಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಪಡೆದ ಯಾತ್ರೆ ಆಂಧ್ರ ಪ್ರದೇಶದಲ್ಲಿ ಯಾವ ರೀತಿ ಸದ್ದು ಮಾಡಲಿದೆ ಎಂಬುವುದೇ ಕುತೂಹಲ. ಇಂದು ಮಂಗಳವಾರ ಬಳ್ಳಾರಿಯ ಸಂಗನಕಲ್‌ನಿಂದ ರಾಹುಲ್ ಗಾಂಧಿ(Rahul Gandhi) ಅವರು ಪಾದಯಾತ್ರೆ ಪ್ರಾರಂಭಿಸಿದ್ದು ಆಂಧ್ರಪ್ರದೇಶ ತಲುಪಿದ್ದಾರೆ.
ಸಂಗನಕಲ್‌ನಿಂದ 20 ಕಿ.ಮೀ ದೂರದಲ್ಲಿರುವ ಆಂಧ್ರದ ಗಡಿವರೆಗೆ ರಾಹುಲ್ ಗಾಂಧಿ ವಾಹನದಲ್ಲಿ ಪ್ರಯಾಣಿಸಿದ್ದು ಆಂಧ್ರದ ಗಡಿ ಆರಂಭದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಸದ್ಯ ಭಾರತ್ ಜೋಡೋ ಯಾತ್ರೆ ಹಲಹರ್ವಿ ಬಸ್ ನಿಲ್ದಾಣದಿಂದ ಚಾಗಿ ಹಳ್ಳಿಯತ್ತ ಸಾಗಿದೆ. ರಾಹುಲ್ ಗಾಂಧಿಯವರೊಂದಿಗೆ ಶಾಸಕ ನಾಗೇಂದ್ರ ಸೇರಿದಂತೆ ಇತರ ಮುಖಂಡರು ಹೆಜ್ಜೆ ಹಾಕಿದ್ದಾರೆ. ಶಾಸಕ ನಾಗೇಂದ್ರ ಅವರ ಸಹೋದರ ಜಯರಾಂ ಅವರ ಕ್ಷೇತ್ರವಾದ ಆಂಧ್ರದ ಆಲೂರು ವಿಧಾನಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿದೆ.
LIVE: Bharat Jodo Yatra | Halaharvi bus stop to Chagi village | Kurnool | Andhra Pradesh https://t.co/gMfI081kyF
— Rahul Gandhi (@RahulGandhi) October 18, 2022
Published On - 10:42 am, Tue, 18 October 22