ಬಳ್ಳಾರಿ: ಹಬ್ಬದ ದಿನಗಳಲ್ಲಿ ಪ್ರಯಾಣಿಕರಿಂದ (passenger) ದುಪ್ಪಟ್ಟು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು ಮಾಡುತ್ತೇವೆ. ಖಾಸಗಿ ಬಸ್ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಈ ಕುರಿತು ಟಾಸ್ಕ್ಫೋರ್ಸ್ ರಚನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಕಳೆದ ಭಾರಿ 110 ಕೇಸ್ಗಳನ್ನ ದಾಖಲು ಮಾಡಲಾಗಿದೆ. ಸದ್ಯ ಈಗಾಗಲೇ 60 ಕೇಸ್ಗಳು ದಾಖಲಾಗಿವೆ. ದಾಖಲಾದ ಕೇಸ್ಗಳನ್ನ ಪರಿಶೀಲಿಸಿ ಪರ್ಮಿಟ್ ರದ್ದು ಮಾಡಲಾಗುವುದು ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಇನ್ನು ದೀಪಾವಳಿ ಹಬ್ಬಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ಎರಡು ದಿನದ ಹಿಂದೆ ಇದ್ದ ದರಗಳೆಲ್ಲವು ಇಂದು ಡಬಲ್ ಆಗಿವೆ. ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್ಸು ಟಿಕೆಟ್ ದರ ಹೆಚ್ಚಿಸಿದ್ದಾರೆ.
ಎರಡು ದಿನದ ಹಿಂದೆ 600 -700 ಇದ್ದಂತಹ ಟಿಕೆಟ್ ದರ ಈಗ ಡಬಲ್ ಆಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಹುಬ್ಬಳ್ಳಿ – ಬೆಳಗಾವಿ ಟಿಕೇಟ್ ದರ 5 ಸಾವಿರಕ್ಕೆ ಏರಿಸಲಾಗಿದೆ. ಖಾಸಗಿ ಬಸ್ಸು ಮಾಲೀಕರು ಹಬ್ಬದ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಖಾಸಗಿ ಬಸ್ಸು ಮಾಲೀಕರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಿಂದ ಇತರೆ ಜಿಲ್ಲೆಗಳಿಗೆ ಇಂದಿನ ಮತ್ತು ಹಿಂದಿನ ಟಿಕೇಟ್ ದರಗಳು ಹೀಗಿದೆ.
ಬೆಂಗಳೂರು TO ಜಿಲ್ಲೆಗಳಿಗೆ
ಸ್ಥಳ ಇಂದಿನ ಟಿಕೇಟ್ ದರ ಹಿಂದಿನ ಟಿಕೇಟ್ ದರ
ಧರ್ಮಸ್ಥಳ – 1000 509
ಕುಕ್ಕೆ ಸುಬ್ರಮಣ್ಯ – 1000 523
ವಿಜಯಪುರ – 1100 650
ಸಿಂಧಗಿ – 1300 750
ಹುಬ್ಬಳ್ಳಿ – 3000- 5000 600
ಬೆಳಗಾವಿ – 3500 700
ಮಂಗಳೂರು – 2500 700
ಹಾಸನ – 1900 550
ಉಡುಪಿ – 2500 700
ತಿರುಪತಿ – 5000 577
ಶಿವಮೊಗ್ಗ – 2050 600
ನ. 20ರಂದು ಎಸ್ಟಿ ಬೃಹತ್ ಸಮಾವೇಶ
ಇನ್ನು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ಎಸ್ಟಿ ಸಮಾವೇಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನವಂಬರ್ 20 ರಂದು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ಎಸ್ಟಿ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದೇವೆ. ಕಾರ್ಯಕ್ರಮದ ರೂಪುರೇಷೆ ಮತ್ತು ಸಮಾವೇಶಕ್ಕೆ ಯಾರು ಬರಲಿದ್ದಾರೆಂದು ಸಭೆ ಬಳಿಕ ತಿಳಿಸುವೆ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಎಸ್ಟಿ ಸಮುದಾಯದ ಜನ ಬಹಳ ಇದ್ದಾರೆ. ಅದಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡಲಾಗುತ್ತಿದೆ. ಮುಂದೆ ಪೊಲಿಟಿಕಲ್ ಅಡ್ವಾಟೇಜ್ ಆಗಲಿದೆ. 2023 ರಲ್ಲಿ ವಿಜಯ ಸಂಕಲ್ಪ ಯಾತ್ರೆ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ್ದು, ಪಕ್ಷದ ನಿರ್ಧಾರಕ್ಕೆ ಬದ್ದ, ಸಚಿವ ಸಂಪುಟ ಏನೇ ನಿರ್ಧಾರಕ್ಕೆ ಬಂದ್ದರು ನಾನು ಒಪ್ಪುವೆ. ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ. ನಾಗಮೋಹನ ದಾಸ್ ವರದಿ ಬಿಜೆಪಿ ಸರ್ಕಾರ ಜಾರಿ ಮಾಡಿದೆ. ಕಾಂಗ್ರೆಸ್ ಮೀಸಲಾತಿಗೆ ನಾಗಮೋಹನದಾಸ್ ಕಮೀಟಿ ಕಾಂಗ್ರೆಸ್ ಕೊಟ್ಟಿದೆ ಅಂತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.