AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಗೆ ಖಾಸಗಿ ಬಸ್​ ಮಾಲೀಕರಿಂದ ಶಾಕ್: ಹುಬ್ಬಳ್ಳಿಗೆ ಹೋಗಲು ಟಿಕೆಟ್ ದರ ಕೇಳಿ ಥರಗುಟ್ಟಿದ ಪ್ರಯಾಣಿಕರು

ಹಬ್ಬ-ಹರಿದಿನ ಬಂತೆಂದರೆ ಸಾಕು ಖಾಸಗಿ ಬಸ್​ಗಳ ದರ ಹೆಚ್ಚಾಗುತ್ತೆ. ಅದರಲ್ಲೂ ಈ ಬಾರಿ ವಿಮಾನ ಟಿಕೆಟನ್ನೇ ಮೀರಿಸಿದೆ. ಎರಡು ದಿನದ ಹಿಂದೆ 600 -700 ಇದ್ದಂತಹ ಟಿಕೆಟ್ ದರ ಈಗ ಡಬಲ್ ಆಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ.

ದೀಪಾವಳಿಗೆ ಖಾಸಗಿ ಬಸ್​ ಮಾಲೀಕರಿಂದ ಶಾಕ್: ಹುಬ್ಬಳ್ಳಿಗೆ ಹೋಗಲು ಟಿಕೆಟ್ ದರ ಕೇಳಿ ಥರಗುಟ್ಟಿದ ಪ್ರಯಾಣಿಕರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 22, 2022 | 12:43 PM

Share

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ಎರಡು ದಿನದ ಹಿಂದೆ ಇದ್ದ ದರಗಳೆಲ್ಲವು ಇಂದು ಡಬಲ್ ಆಗಿವೆ. ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್ಸು ಟಿಕೆಟ್ ದರ ಹೆಚ್ಚಿಸಿದ್ದಾರೆ.

ಎರಡು ದಿನದ ಹಿಂದೆ 600 -700 ಇದ್ದಂತಹ ಟಿಕೆಟ್ ದರ ಈಗ ಡಬಲ್ ಆಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಹುಬ್ಬಳ್ಳಿ – ಬೆಳಗಾವಿ ಟಿಕೇಟ್ ದರ 5 ಸಾವಿರಕ್ಕೆ ಏರಿಸಲಾಗಿದೆ. ಖಾಸಗಿ ಬಸ್ಸು ಮಾಲೀಕರು ಹಬ್ಬದ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಖಾಸಗಿ ಬಸ್ಸು ಮಾಲೀಕರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ದುಪ್ಪಟ್ಟು ಹಣ ಏರಿಕೆಗೆ ಪ್ರಯಾಣಿಕರು ಶಾಕ್

ಹಬ್ಬಗಳು ಬಂದ್ರೆ ಸಾಕು ಖಾಸಗಿ ಬಸ್ಸುಗಳಲ್ಲಿ ಹೋಗುವುದೇ ಕಷ್ಟವಾಗಿದೆ. ನಾವು ಟಿಕೇಟ್ ಬುಕ್ ಮಾಡೋಣ ಅಂತ ಬಂದಿದ್ವಿ. ಆದ್ರೆ ಟಿಕೆಟ್ ದರ ನೋಡಿ ಬುಕ್ ಮಾಡ್ಲಿಲ್ಲ. ಹುಬ್ಬಳ್ಳಿಗೆ ಐದು ಸಾವಿರ ಹೇಳಿದ್ರು. ಇದು ಮೊದಲನೇ ಸಾರಿ ಅಲ್ಲ ಹಲವಾರು ಬಾರಿ ಹೀಗೆ ಆಗಿದೆ. ಯಾಕೆ ಅಧಿಕಾರಿಗಳು ಖಾಸಗಿ ಬಸ್ಸುಗಳ ವಿರುದ್ಧ ಕ್ರಮ ತಗೆದುಕೊಳ್ಳುತ್ತಿಲ್ಲ. ನಾವು ಜಾಸ್ತಿ ಮಾತಾಡಿದ್ರೆ ಬುಕ್ ಮಾಡಿದ್ರೆ ಮಾಡಿ, ಇಲ್ಲ ಅಂದ್ರೆ ಹೋಗಿ ಅಂತಾರೇ. ಖಾಸಗಿ ಬಸ್ಸುಗಳಿಗೆ ಕಡಿವಾಣ ಹಾಕುವವರು ಯಾರು ಇಲ್ವ ಅಂತ ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Festive Season: ಖಾಸಗಿ ಬಸ್​ ಮಾಲೀಕರಿಂದ ದುಪ್ಪಟ್ಟು ಟಿಕೆಟ್ ದರ ನಿಗದಿ; ಅಖಾಡಕ್ಕಿಳಿದ ತನಿಖಾ ತಂಡ

ವಿಮಾನ ಟಿಕೆಟ್ ಮೀರಿಸಿದ ಬಸ್ ದರ

ಹಬ್ಬ-ಹರಿದಿನ ಬಂತೆಂದರೆ ಸಾಕು ಖಾಸಗಿ ಬಸ್​ಗಳ ದರ ಹೆಚ್ಚಾಗುತ್ತೆ. ಅದರಲ್ಲೂ ಈ ಬಾರಿ ವಿಮಾನ ಟಿಕೆಟನ್ನೇ ಮೀರಿಸಿದೆ. ಅ. 21ರಂದು ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನಯಾನಕ್ಕೆ 3,694 ರೂ. ಪ್ರಯಾಣ ದರ ನಿಗದಿಯಾಗಿದೆ. ಹಬ್ಬಕ್ಕೂ ಮುನ್ನ ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದವರು ಸಾಮಾನ್ಯವಾಗಿ 500 ರಿಂದ 800 ರೂ ಕೊಡುತ್ತಿದ್ದರು. ಆದ್ರೆ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ ಟಿಕೆಟ್‌ ದರ 5 ಸಾವಿರಕ್ಕೇರಿದೆ. ಬೆಂಗಳೂರು- ಕಾರವಾರ ನಡುವೆ ಸ್ಲೀಪರ್‌ ಕೋಚ್‌ ಬಸ್‌ಗೆ 4,099 ರೂ. ದರವಿದ್ದರೆ, ಬೆಂಗಳೂರು- ಮಂಗಳೂರು ನಡುವೆ 3,400 ರೂ. ಹಾಗೂ ಹೊರ ರಾಜ್ಯಗಳಾದ ಬೆಂಗಳೂರು- ಗೋವಾ ನಡುವೆ 4 ಸಾವಿರ ರೂ. ಮತ್ತು ಬೆಂಗಳೂರು-ಹೈದರಾಬಾದ್‌ ನಡುವೆ 3,999 ರೂ. ದರವಿದೆ. ಇದರಿಂದ ಬಸ್​ಗಳಿಗಿಂತ ವಿಮಾನದಲ್ಲಿ ಪ್ರಯಾಣಿಸುವುದೇ ಬೆಸ್ಟ್ ಎನ್ನುವಂತಾಗಿದೆ.

Published On - 12:36 pm, Sat, 22 October 22