ಬೆಳಕಿನ ಹಬ್ಬ ದೀಪಾವಳಿ ಬಾಳಲ್ಲಿ ಅಂಧಕಾರ ತರೋದು ಬೇಡ: ಮಿಂಟೋ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ
ಕಣ್ಣಿನ ಚಿಕಿತ್ಸೆಗಾಗಿ ಹಾಸ್ಪಿಟಲ್ ನಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆ ಚಿಕಿತ್ಸೆ ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆ(Minto Hospital) ಸಭಾಂಗಣದಲ್ಲಿ ದೀಪಾವಳಿ(Deepavali 2022) ಪ್ರಯುಕ್ತ ಸುರಕ್ಷಿತ ದೀಪಾವಳಿ ಅಚರಣೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ದುರಂತಕ್ಕೆ ಆಸ್ಪದ ಬೇಡ ಕಣ್ಣಿನ ಸುರಕ್ಷತೆ ಬಗ್ಗೆ ಜನ ಜಾಗೃತಿ ಮತ್ತು ಸುರಕ್ಷತೆ ಸಂದೇಶ ಸಾರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಕಣ್ಣುಗಳಿಗೆ ಹಾನಿ ಮಾಡಿಕೊಂಡು ಕಣ್ಣು ಕಳೆದುಕೊಂಡವರ ಸಂಖ್ಯೆ ಹೆಚ್ಚು. ದೀಪಾವಳಿಯ ಸಮಯದಲ್ಲಿ ಕಣ್ಣು ಹಾನಿ ಮಾಡಿಕೊಂಡು ಅನೇಕರು ಚಿಕಿತ್ಸೆಗೆಂದು ಮಿಂಟೋ ಕಣ್ಣಿನ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಹೀಗಾಗಿ ಆಸ್ಪತ್ರೆ ವರ್ಗ ದೀಪಾವಳಿ ಹಬ್ಬ ಮುನ್ನವೇ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ದುರಂತಕ್ಕೆ ಆಸ್ಪದ ಬೇಡ ಕಣ್ಣಿನ ಸುರಕ್ಷತೆ ಬಗ್ಗೆ ಜನ ಜಾಗೃತಿ ಮತ್ತು ಸುರಕ್ಷತೆ ಸಂದೇಶ ಸಾರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಾಗೂ ಕಣ್ಣಿನ ಚಿಕಿತ್ಸೆಗಾಗಿ ಹಾಸ್ಪಿಟಲ್ ನಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆ ಚಿಕಿತ್ಸೆ ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ. ಇದನ್ನೂ ಓದಿ: Cataract: ಆರಂಭಿಕ ಕಣ್ಣಿನ ಪೊರೆಯಂತಹ ಸಮಸ್ಯೆಗೆ ಇಲ್ಲಿದೆ ತಜ್ಞರ ಸಲಹೆ
ಪಟಾಕಿ ಹಚ್ಚುವ ವೇಳೆ ಉಂಟಾಗುವ ಅಪಘಾತಗಳ ಬಗ್ಗೆ ಜಾಗೃತಿ ಅಗತ್ಯ. ಪಟಾಕಿ ಅನಾಹುತ ಆಗೋದು ಮಕ್ಕಳಲ್ಲಿ ಹೆಚ್ಚು. ಹೀಗಾಗಿ ಪೋಷಕರು ಮುಂಜಾಗ್ರತೆ ವಹಿಸೋದು ಒಳ್ಳೆದ್ದು. ಕಣ್ಣಿಗೆ ಏನಾದರೂ ತೊಂದರೆಯಾದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಆದಷ್ಟು ಪಟಾಕಿ ಸಿಡಿಸದೆ ಹಬ್ಬ ಮಾಡುವುದು ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದು ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ಡಿ.ಎಂ.ಇ.& ನಿರ್ದೇಶಕಿ ಡಾ.ಸುಜಾತ ರಾಥೋಡ್ ತಿಳಿಸಿದರು.
ಪಟಾಕಿ ಸಿಡಿತ ಪ್ರಕರಣಗಳಲ್ಲಿ ಶೇ 38ರಷ್ಟು ಜನರಿಗೆ ಬೆರಳುಗಳಿಗೆ ಗಾಯವಾದರೆ, ಶೇ. 19ರಷ್ಟು ಕಣ್ಣಿನ ಗಾಯಗಳಾಗಿವೆ. ಕಳೆದ ವರ್ಷ 34 ಪ್ರಕರಣಗಳು ವರದಿಯಾಗಿದ್ದು, 7 ಜನರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರಿಗೆ ಸಂಪೂರ್ಣ ದೃಷ್ಟಿಯೇ ಹೋಗಿದೆ. ಪ್ರತೀ ವರ್ಷ ದೀಪಾವಳಿಯಲ್ಲಿ 50-60 ಜನರು ಕಣ್ಣಿನ ಗಾಯದ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 30 ಹಾಸಿಗೆ ಮೀಸಲಿಡಲಾಗಿದೆ. ಮುಂದಿನ ಒಂದು ವಾರ ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. 33 ವೈದ್ಯರ ಜೊತೆಗೆ ಪಿಜಿ ವಿದ್ಯಾರ್ಥಿಗಳು ಕೂಡ ಈ ಸಂದರ್ಭದಲ್ಲಿ ಲಭ್ಯವಿರಲಿದ್ದಾರೆ. ಮಕ್ಕಳು ಮತ್ತು ಮಹಿಳೆಯರಿಗೆ ಕೆಳ ಮಹಡಿಯಲ್ಲಿ ಹಾಗೂ ಪುರುಷರಿಗೆ ಮೊದಲನೇ ಮಹಡಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಸುಜಾತ ರಾಥೋಡ್ ಮಾಹಿತಿ ನೀಡಿದ್ದಾರೆ.