Cataract: ಆರಂಭಿಕ ಕಣ್ಣಿನ ಪೊರೆಯಂತಹ ಸಮಸ್ಯೆಗೆ ಇಲ್ಲಿದೆ ತಜ್ಞರ ಸಲಹೆ
ಇಂದಿನ ಬದಲಾದ ಆಹಾರ ಪದ್ದತಿಯಿಂದಾಗಿ ಆಹಾರದಲ್ಲಿ ಪ್ರೋಟೀನ್‌ನ ಅಂಶಗಳು ಕಡಿಮೆಯಾಗುತ್ತಾ ಹೋಗುತ್ತಿದೆ. ಇದ್ದರಿಂದಾಗಿ ನಿಮ್ಮ ದೃಷ್ಟಿಯಲ್ಲಿ ಅಸ್ಪಷ್ಟ ಗೋಚರಣೆಗೆ ಕಾರಣವಾಗಬಹುದು. ಆರಂಭಿಕ ಕಣ್ಣಿನ ಪೊರೆಗಳ ಬಗ್ಗೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯದಿದ್ದಲ್ಲಿ ಕಾಲಾನಂತರದಲ್ಲಿ ಅವು ನಿಮ್ಮ ದೃಷ್ಟಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಬಹುದು.
ಇಂದು ಕಣ್ಣಿನ ಪೊರೆಯಂತಹ ಸಮಸ್ಯೆಗಳು ವಯಸ್ಕರಲ್ಲಿ ಮಾತ್ರವಲ್ಲದೇ, ಯುವಕರಲ್ಲಿಯೂ ಕಂಡುಬರುವ ಒಂದು ಸಮಸ್ಯೆಯಾಗಿದೆ. ಪ್ರಾರಂಭದಲ್ಲಿಯೇ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳದ್ದಿದಲ್ಲಿ, ಮುಂದೆ ದೃಷ್ಟಿ ದೋಷದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂದಿನ ಬದಲಾದ ಆಹಾರ ಪದ್ದತಿಯಿಂದಾಗಿ ಆಹಾರದಲ್ಲಿ ಪ್ರೋಟೀನ್‌ನ ಅಂಶಗಳು ಕಡಿಮೆಯಾಗುತ್ತಾ ಹೋಗುತ್ತಿದೆ. ಇದ್ದರಿಂದಾಗಿ ನಿಮ್ಮ ದೃಷ್ಟಿಯಲ್ಲಿ ಅಸ್ಪಷ್ಟ ಗೋಚರಣೆಗೆ ಕಾರಣವಾಗಬಹುದು. ಆರಂಭಿಕ ಕಣ್ಣಿನ ಪೊರೆಗಳ ಬಗ್ಗೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯದಿದ್ದಲ್ಲಿ ಕಾಲಾನಂತರದಲ್ಲಿ ಅವು ನಿಮ್ಮ ದೃಷ್ಟಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಬಹುದು.
ಆರಂಭಿಕ ಕಣ್ಣಿನ ಪೊರೆಯಂತಹ ಸಮಸ್ಯೆಗೆ ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ರವರು ಕೆಲವೊಂದು ಪ್ರಾಥಮಿಕ ಹಂತದ ಸಲಹೆ ನೀಡಿದ್ದಾರೆ. ಅವು ಈ ಕೆಳಗಿನಂತಿವೆ:
1.ನೇತ್ರ ತರ್ಪಣ: ನೇತ್ರ ತರ್ಪಣವು ಪಂಚಕರ್ಮ ವಿಧಾನವಾಗಿದ್ದು, ಬೆಚ್ಚಗಿನ ಔಷಧೀಯ ತುಪ್ಪವನ್ನು ನಿರ್ದಿಷ್ಟ ಸಮಯದವರೆಗೆ ಕಣ್ಣುಗಳ ಮೇಲೆ ಅಚ್ಚು ಚೌಕಟ್ಟಿನಲ್ಲಿ ಕಣ್ಣಿನ ಮೇಲೆ ಇಡಲಾಗುವ ಚಿಕಿತ್ಸೆಯಾಗಿದೆ. ನೇತ್ರ ತರ್ಪಣವು ಕಣ್ಣುಗಳ ವಿಶ್ರಾಂತಿ ಮತ್ತು ವಿವಿಧ ಚಿಕಿತ್ಸೆಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
2.ವೀಟ್ ಗ್ರಾಸ್ ಜ್ಯೂಸ್: ಗೋಧಿ ಹುಲ್ಲಿನಲ್ಲಿ ಬೀಟಾ–ಕ್ಯಾರೋಟಿನ್ ಸಮೃದ್ಧವಾಗಿದ್ದು ಇದು ರೋಗ ನಿರೋಧಕ ಗುಣಗಳಿವೆ. ಈ ಗುಣಲಕ್ಷಣಗಳು ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ 1ರಿಂದ 2 ಗ್ಲಾಸು ಗೋಧಿ ಹುಲ್ಲಿನ ರಸದ ಜ್ಯೂಸ್ ಕುಡಿಯಿರಿ.
3.ಅಲೋವೆರಾ:
ಅಲೋವೆರಾ ಉರಿಯೂತದ ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕಣ್ಣುಗಳಿಗೆ ಪೋಷಣೆಯನ್ನು ನೀಡುತ್ತದೆ ಮತ್ತು ಆರಂಭಿಕ ಕಣ್ಣಿನ ಪೊರೆಯಂತಹ ಸಮಸ್ಯೆಯನ್ನು ಗುಣಪಡಿಸಲು ಸಹಾಯಕವಾಗಿದೆ. ಪ್ರತಿದಿನ ಒಂದು ಬಾರಿಯಾದರೂ ಕಣ್ಣುಗಳಿಗೆ ತಾಜಾ ಅಲೋವೆರಾ ಜೆಲ್ ಅನ್ನು ಹಚ್ಚಿ ಮತ್ತು 15-20 ನಿಮಿಷದ ರವರೆಗೆ ಬಿಡಿ. ಇದು ನಿಮ್ಮ ಕಣ್ಣುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
4.ತೆಂಗಿನಕಾಯಿ ನೀರು:
ತೆಂಗಿನ ನೀರು ದೇಹವನ್ನು ತಂಪಾಗಿಡಲು ಸಹಾಯಮಾಡುತ್ತದೆ ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕಣ್ಣುಗಳಿಗೆ ಉಂಟಾದ ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳಿಗೆ ತಣ್ಣಗಿರುವ ತೆಂಗಿನ ಕಾಯಿನ್ನು ಹಾಕಿ ಮತ್ತು 5-10 ನಿಮಿಷಗಳ ಕಾಲ ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಿರಿ.
5.ಗ್ರೀನ್ ಟೀ:
ಇದು ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿದ್ದು ಇದು ಕಣ್ಣಿನ ಮಸೂರವನ್ನು ಹಾನಿಯಿಂದ ರಕ್ಷಿಸಲು ಮತ್ತು ಅಸ್ತಿತ್ವದಲ್ಲಿರುವ ಕಣ್ಣಿನ ಪೊರೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಗ್ರೀನ್ ಟೀ ಸೇರಿಸಿ ಕುದಿಸಿ. ಇದನ್ನು ದಿನಕ್ಕೆ 2 ಬಾರಿ ಕುಡಿಯಿರಿ.
ಇದನ್ನು ಓದಿ;Mental Health Insurance: ಮಾನಸಿಕ ಆರೋಗ್ಯ ವಿಮೆ ಮಾಡಿಸುತ್ತೀರಾ? ಈ ವಿಷಯಗಳು ನಿಮಗೆ ತಿಳಿದಿರಲಿ
ಮೇಲೆ ಚರ್ಚಿಸಿದ ಪರಿಹಾರಗಳು ಪ್ರಾಥಮಿಕವಾಗಿ ಸ್ಥಿತಿಯ ಅಪಾಯ ತಡೆಗಟ್ಟಲು ಸಹಕಾರಿಯಾಗಿದೆ. ರೋಗ ನಿರೋಧಕಗಳು ಸಮೃದ್ಧವಾಗಿರುವ ಆಹಾರವು ಕಣ್ಣಿನ ಪೊರೆ ರಚನೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಚಿಕಿತ್ಸೆಯ ಆಯ್ಕೆಗಳಿಗಾಗಿ, ನೀವು ವೈದ್ಯಕೀಯ ಮಾರ್ಗದರ್ಶನವನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
Published On - 11:15 am, Sat, 22 October 22