Updated on:Oct 22, 2022 | 5:37 PM
ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು.
ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿಯಾಗಿದೆ.ಆದ್ದರಿಂದ ಪ್ರತಿ ದಿನ ನಿಯಮಿತವಾಗಿ ಅಗಸೆ ಬೀಜವನ್ನು ಸೇವಿಸಿ.
ತೂಕ ಇಳಿಸುವಲ್ಲಿ ಅಗಸೆ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕರು ತಮ್ಮ ದೇಹದ ತೂಕವನ್ನು ಬಹು ಬೇಗನೆ ಕಳೆದುಕೊಳ್ಳಲು ಪ್ರತಿದಿನದ ಉಪಾಹಾರವನ್ನು ತ್ಯಜಿಸುವುದನ್ನು ಕಾಣಬಹುದು. ಆದ್ದರಿಂದ ಉಪಾಹಾರವನ್ನು ತ್ಯಜಿಸುವ ಬದಲಾಗಿ ಪ್ರತಿದಿನ ನಿಯಮಿತವಾಗಿ ಅಗಸೆ ಬೀಜವನ್ನು ಸೇವಿಸುವುದು ಉತ್ತಮ.
ಕೂದಲು ಉದುರುವಿಕೆ ಪ್ರತಿಯೊಬ್ಬರಲ್ಲೂ ಕಂಡುಬರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಗಟ್ಟಲು ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನು ಸೇವಿಸಿ.
ವಿಟಮಿನ್ ಇ ದೇಹದಲ್ಲಿ ಹೆಚ್ಚಾಗಲು ಪ್ರತಿ ದಿನ ನಿಯಮಿತವಾಗಿ ಅಗಸೆ ಬೀಜವನ್ನು ಸೇವಿಸಿ. ದೇಹದಲ್ಲಿ ವಿಟಮಿನ್ ಇ ಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಒಮೆಗಾ 3 ಕೊಬ್ಬಿನಾಂಶ ನಮ್ಮ ದೇಹದಲ್ಲಿ ಕಮ್ಮಿಯಾದರೆ ಒಬೆಸಿಟಿ, ಮಧುಮೇಹ, ಹೃದಯ ಸಮಸ್ಯೆಯಂತಹಾ ತೊಂದರೆಗಳೂ ಕಾಣಿಸಿಕೊಳ್ಳುವುದು. ಫ್ಯಾಟಿ ಲಿವರ್ ಸಮಸ್ಯೆ ಇರುವವರು ಒಮೆಗಾ 3 ತೆಗೆದುಕೊಳ್ಳುವುದರಿಂದ ಲಿವರ್ ಗಾತ್ರ ಕಡಿಮೆಯಾಗುವುದು.ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಒಮೆಗಾ 3 ಕೊಬ್ಬಿನಾಂಶ ಹೆಚ್ಚಾಗುತ್ತದೆ.
ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
Published On - 3:59 pm, Sat, 22 October 22