Breaking ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಹೋಗಲು ಅನುಮತಿಗಾಗಿ ಎನ್ಐಎ ನ್ಯಾಯಾಲಯವನ್ನು ಸಂಪರ್ಕಿಸಲು ವರವರ ರಾವ್‌ಗೆ ಸುಪ್ರೀಂ ಸಮ್ಮತಿ

Varavara Rao ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಹೋಗಲು ಅನುಮತಿ ಪಡೆಯಲು ರಾವ್ ಎನ್ಐಎ ನ್ಯಾಯಾಲಯದ ಮೊರೆ ಹೋಗಲಿದ್ದಾರೆ.

Breaking ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಹೋಗಲು ಅನುಮತಿಗಾಗಿ ಎನ್ಐಎ ನ್ಯಾಯಾಲಯವನ್ನು ಸಂಪರ್ಕಿಸಲು ವರವರ ರಾವ್‌ಗೆ ಸುಪ್ರೀಂ ಸಮ್ಮತಿ
ಭೀಮಾ ಕೊರೆಗಾಂವ್ ಪ್ರಕರಣದ ಅರೋಪಿ ವರವರ ರಾವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 17, 2022 | 6:10 PM

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ(Bhima Koregaon case) ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಯುಎಪಿಎ ಅಡಿಯಲ್ಲಿ ಆರೋಪ ಎದುರಿಸುತ್ತಿರುವ 82ರ ಹರೆಯದ ತೆಲುಗು ಕವಿ ವರವರ ರಾವ್ (Varavara Rao)ಅವರಿಗೆ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯದ ಮೊರೆ ಹೋಗಲು ಸುಪ್ರೀಂಕೋರ್ಟ್ (Supreme Court) ಮಂಗಳವಾರ ಅನುಮತಿ ನೀಡಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಹೋಗಲು ಅನುಮತಿ ಪಡೆಯಲು ರಾವ್ ಎನ್ಐಎ ನ್ಯಾಯಾಲಯದ ಮೊರೆ ಹೋಗಲಿದ್ದಾರೆ.ಎರಡು ವಾರಗಳೊಳಗೆ ಇಂಥಾ ಮನವಿ ಮಾಡಬೇಕು ಎಂದು ರಾವ್ ಅವರಿಗೆ ಹೇಳಿದ ಕೋರ್ಟ್, ಅದನ್ನು ಸಲ್ಲಿಸಿದ ಮೂರು ವಾರಗಳಲ್ಲಿ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಅರ್ಜಿಯ ಅರ್ಹತೆಯ ಬಗ್ಗೆ ಅದು ಏನನ್ನೂ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠವು ಮೇಲಿನ ನಿರ್ದೇಶನಗಳೊಂದಿಗೆ ರಾವ್ ಅವರ ಅರ್ಜಿಯನ್ನು ಪರಿಗಣಿಸಿದೆ. ಕಳೆದ ವಾರ ವೈದ್ಯಕೀಯ ಕಾರಣಗಳಿಂದ ರಾವ್ ಅವರಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ಗ್ರೇಟರ್ ಮುಂಬೈ ಪ್ರದೇಶ ಬಿಟ್ಟು ಹೊರಹೋಗಬಾರದು ಎಂದು ಷರತ್ತು ವಿಧಿಸಿತ್ತು.

ಇಂದು ವರವರ ರಾವ್ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್, ಮುಂಬೈನಲ್ಲಿ ಚಿಕಿತ್ಸಾ ವೆಚ್ಚ ಬಲು ದುಬಾರಿ. ಹೈದರಾಬಾದ್ ರಾವ್ ಅವರ ಊರು ಆಗಿರುವುದರಿಂದ ಮನೆಯ ವಾತಾವರಣದಲ್ಲಿ ಅವರು ಬೇಗನೆ ಚೇಕರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ ಆದಾಗ್ಯೂ, ನ್ಯಾಯಾಪೀಠ ಎನ್ಐಎಗೆ ಯಾವುದೇ ನೋಟಿಸ್ ನೀಡಿಲ್ಲ. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ರಾವ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ರಾವ್ ಅವರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಹೋಗಲು ಅನುಮತಿ ನೀಡಲಾಗಿದ್ದರೂ ಅವರು ಆ ಅವಕಾಶವನ್ನು ಉಪಯೋಗಿಸಿಲ್ಲ. ಮುಂಬೈಯಲ್ಲಿಯೂ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳಿವೆ ಎಂದು ಅವರು ಹೇಳಿದ್ದಾರೆ. ಅದೇ ವೇಳೆ ಅವರಿಗೆ ಹಣದ ಸಮಸ್ಯೆ ಏನೂ ಇಲ್ಲ ಎಂದಿದ್ದಾರೆ ಎಎಸ್ ಜಿ. ತಿಂಗಳಿಗೆ 15000 ಪಿಂಚಣಿ ಪಡೆಯುವವರು ರಾವ್ ಎಂದು ಗ್ರೋವರ್ ಉತ್ತರಿಸಿದ್ದಾರೆ

ರಾವ್ ಅವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ರೋಚಕವಾಗಿ ತೋರಿಸಲಾಗಿದೆ. ಅವರ ಫೋಟೊ ನೋಡಿದರೆ 50 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ ಎಂದ ಎಎಸ್ ಜಿ ಹೇಳಿದ್ದಾರೆ. ಜೈಲಿನಲ್ಲಿ ಉತ್ತಮ ಸ್ಥಿತಿಯಲ್ಲಿ ನೋಡಿಕೊಳ್ಳಲಾಗುತ್ತದೆ ಎಂಬುದಕ್ಕೆ ನೀವು ಇದನ್ನು ಜಾಹೀರಾತಾಗಿ ಪ್ರಚಾರ ಮಾಡಬಹುದು ಎಂದು ನ್ಯಾಯಮೂರ್ತಿ ಲಲಿತ್ ತಮಾಷೆಯಾಗಿ ಹೇಳಿದಾಗ ನ್ಯಾಯಾಲಯದಲ್ಲಿ ತುಂಬಾ ನಗು. ನಿಯಮಿತ ಆಹಾರದಿಂದಾಗಿ ಜೈಲಿನಲ್ಲಿ ಹಲವರ ಆರೋಗ್ಯ ಸುಧಾರಣೆ ಆಗಿದ್ದನ್ನು ನಾನು ನೋಡಿದ್ದೇನೆ ಎಂದಿದ್ದಾರೆ ಎಎಸ್ ಜಿ ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ, ಸುಪ್ರೀಂ ಕೋರ್ಟ್ ನಿರ್ಧರಿಸುವ ಬದಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದೆ. ವೈದ್ಯಕೀಯ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ನಿರ್ಧರಿಸಲು ನ್ಯಾಯಾಲಯವು ಒಂದು ವರ್ಷವನ್ನು ತೆಗೆದುಕೊಂಡಿದೆ ಎಂದು ಗ್ರೋವರ್ ಸಮಯ ಮಿತಿಯನ್ನು ನಿದಿ ಪಡಿಸಲು ಮನವಿ ಮಾಡಿದರು. ಈ ಮನವಿಯನ್ನು ಸ್ವೀಕರಿಸಿದ ಪೀಠವು 3 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿತು. ಈ ಆದೇಶವು ಅರ್ಜಿಯ ಅರ್ಹತೆಯ ಬಗ್ಗೆ ಅಭಿಪ್ರಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

Published On - 4:50 pm, Wed, 17 August 22