Gujarat Plane Crash; ಪ್ರತೀಕ್ ಬೇರೆ ರಾಜ್ಯದವರಾಗಿದ್ದರೂ ಕರ್ನಾಟದಲ್ಲಿ ಮೆಡಿಕಲ್ ಓದಿದ್ದರು: ಜಗದೀಶ್ ಶೆಟ್ಟರ್
ಪ್ರತೀಕ್ ಜೋಶಿ ಅವರ ಇಡೀ ಕುಟುಂಬವೇ ದುರಂತಕ್ಕೆ ಬಲಿಯಾಗಿದ್ದು ಬಹಳ ದುರದೃಷ್ಟ ಸಂಗತಿ, ಅವರ ಕುಟುಂಬದ ಬೇರೆ ಸದಸ್ಯರು ಅನುಭವಿಸುತ್ತಿರುವ ನೋವನ್ನು ನೆನೆಸಿ ಮನಸ್ಸು ವ್ಯಾಕುಲಗೊಳ್ಳುತ್ತದೆ, ಅವರಿಗೆಲ್ಲ ನೋವು ಮತ್ತು ನಷ್ಟ ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಜಗದೀಶ್ ಶೆಟ್ಟರ್ ಹೇಳಿದರು.
ಬೆಂಗಳೂರು, ಜೂನ್ 13: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ಜಗದೀಶ್ ಶೆಟ್ಟರ್ (Jagadish Shettar), ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದ ಡಾ ಪ್ರತೀಕ್ ಜೋಶಿ ಅವರಿಗೆ ಸಂತಾಪ ಸೂಚಿಸಿದರು. ದುರ್ಘಟನೆಯಲ್ಲಿ ಬಾರತೀಯರು ಮತ್ತು ವಿದೇಶಿಯರು ಸೇರಿದಂತೆ ಒಟ್ಟು 242 ಜನ ಸತ್ತಿದ್ದಾರೆ, ಪ್ರತೀಕ್ ಬೇರೆ ರಾಜ್ಯದವರಾಗಿದ್ದರೂ ಕರ್ನಾಟಕದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದಾರೆ ಮತ್ತು ರಾಜ್ಯದಲ್ಲಿ ಹಲವಾರು ಸ್ನೇಹಿತರನ್ನು ಹೊಂದಿದ್ದಾರೆ. ಸ್ನೇಹಿತರೆಲ್ಲ ಜೊತೆಗೂಡಿ ಇವತ್ತು ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಿದ್ದರು. ಅವರು ಸಾವನ್ನಪ್ಪಿದ್ದು ಅತ್ಯಂತ ನೋವಿನ ಮತ್ತು ದುರ್ದೈವದ ಸಂಗತಿ, ಮುಂದೆ ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದ ಹೇಳಿದರು.
ಇದನ್ನೂ ಓದಿ: Gujarat Plane Crash: ಕುಟುಂಬದೊಂದಿಗೆ ಬಲಿಯಾದ ಪ್ರತೀಕ್ ಜೋಶಿಯನ್ನು ನೆನೆದು ದುಃಖಿಸುತ್ತಿರುವ ಸಹಪಾಠಿಗಳು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ