‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ನೋಡಿ ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ ರೈ
ದಿಗಂತ್ ಮಂಚಾಲೆ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರ ಇಂದು (ಜೂನ್ 13) ರಿಲೀಸ್ ಆಗಿದೆ. ಒಂದು ದಿನ ಮೊದಲೇ ಸೆಲೆಬ್ರಿಟಿಗಳಿಗಾಗಿ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ದಿಗಂತ್ ಅವರ ಪತ್ನಿ ಐಂದ್ರಿತಾ ರೇ ಕೂಡ ಸಿನಿಮಾ ನೋಡಿ ತಮ್ಮ ವಿಮರ್ಶೆ ತಿಳಿಸಿದರು.
ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾ ಇಂದು (ಜೂನ್ 13) ಬಿಡುಗಡೆ ಆಗಿದೆ. ಒಂದು ದಿನ ಮುಂಚೆ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ದಿಗಂತ್ (Diganth) ಪತ್ನಿ ಐಂದ್ರಿತಾ ರೇ ಅವರು ಸಿನಿಮಾ ನೋಡಿ ತಮ್ಮ ವಿಮರ್ಶೆ ತಿಳಿಸಿದರು. ‘ನನಗೆ ಸಿನಿಮಾ ತುಂಬ ಇಷ್ಟ ಆಯಿತು. ಈ ಸಿನಿಮಾ ಹಿಟ್ ಆಗಿಲ್ಲ ಎಂದರೆ ನಾನು ಹೋಪ್ಸ್ ಬಿಟ್ಟುಬಿಡುತ್ತೇನೆ. ದಿಗಂತ್ ಬಗ್ಗೆ ತುಂಬ ಹೆಮ್ಮೆ ಆಗುತ್ತಿದೆ. ನಾನು ತುಂಬ ನಕ್ಕಿದ್ದೇನೆ. ನಟಿಯರಾದ ಧನು ಮತ್ತು ನಿಧಿ ಚೆನ್ನಾಗಿ ನಟಿಸಿದ್ದಾರೆ. ನಿರ್ದೇಶಕ ಸಮರ್ಥ ಅವರಿಗೆ ಎಲ್ಲ ಕ್ರೆಡಿಟ್ ಸಲ್ಲುತ್ತದೆ’ ಎಂದು ಐಂದ್ರಿತಾ ರೇ (Aindrita Ray) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

