AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 14 June : ಈ ರಾಶಿಯವರಿಗೆ ಬೋರೆನಿಸುವಷ್ಟು ಕಾಡಿಸುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ ಶನಿವಾರ ವ್ಯಾಪಾರದಲ್ಲಿ ಚೇತರಿಕೆ, ಯಶಸ್ಸಿಗೆ ಶ್ರಮ, ಮನೆಯವರ ಚಿಂತೆ, ವಸ್ತುಗಳ ಮಾರಾಟ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 14 June : ಈ ರಾಶಿಯವರಿಗೆ ಬೋರೆನಿಸುವಷ್ಟು ಕಾಡಿಸುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 14, 2025 | 2:36 AM

Share

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ – 06 – 04 am, ಸೂರ್ಯಾಸ್ತ – 07 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:19 – 10:56, ಯಮಘಂಡ ಕಾಲ 14:10 – 15:47, ಗುಳಿಕ ಕಾಲ 06:05 – 07:42

ಮೇಷ ರಾಶಿ: :ನಿಮ್ಮ ಪ್ರೀತಿಗೆ ಅಡ್ಡಿಯಾಗಬಹುದು. ನಿಮಗೆ ನೀವೇ ಘಾಸಿ ಮಾಡಿಕೊಳ್ಳುವುದು ಬೇಡ. ಇಂದು ಸಮಾಜ ಗುರುತಿಸುತ್ತಿಲ್ಲ‌ ಎಂಬ ಕೊರಗು ಕಾಡಬಹುದು. ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ಇರಲಿದೆ. ನಿಮ್ಮ ಕಾರ್ಯಕೌಶಲಕ್ಕೆ ನಿಬ್ಬೆರಗಾಗುವರು. ಒಂದೇ ವಿಚಾರವನ್ನು ಕೇಳಿ ಮನಸ್ಸು ಭಾರವಾಗಲಿದೆ. ನಿಯಮಗಳನ್ನು ಮುರಿದು ವರ್ತಿಸುವುದು ಬೇಡ. ಸ್ವಂತ ಉದ್ಯೋಗವನ್ನು ನಡೆಸಲು ಕಷ್ಟವೆಂದು ಅನ್ನಿಸಬಹುದು. ಭೋಗಜೀವನಕ್ಕೆ ಇಂದು ಹೆಚ್ಚು ಒತ್ತು ನೀಡುವಿರಿ. ಅಪರಿಚಿತ ಕರೆಗಳು ಅಧಿಕವಾಗುವುದು. ಇನ್ನೊಬ್ಬರಿಗೆ ಬೋರೆನಿಸುವಷ್ಟು ಮಾತನಾಡುವಿರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿಂದಿನ ಆಚರಣೆಯ ಬಗ್ಗೆ ನಿಮಗೆ ಪ್ರೀತಿ ಬಂದು ಅದನ್ನು ಆಚರಿಸುವ ಮನಃಸ್ಥಿತಿ ಇರಲಿದೆ. ಪರಿಶ್ರಮದಿಂದ ಸ್ವಲ್ಪ ಸಂಪತ್ತು ಬರಬಹುದು. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ನಿಮ್ಮಿಂದ ಹಣದ ಸಹಾಯವನ್ನು ಬಯಸುವವರು ವಂಚಿಸಲೂ ಸಾಧ್ಯವಿದೆ. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ.

ವೃಷಭ ರಾಶಿ: :ಸ್ಪೂರ್ತಿಯು ಯಾವ ನಕಾರಾತ್ಮಕತೆಯನ್ನೂ ಸ್ವೀಕರಿಸದು. ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ಅನಾರೋಗ್ಯದಿಂದ ತೊಳಲುವಿರಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ನಿಮ್ಮ ಇಂದಿನ ಕೆಲಸದಿಂದ ಅಧಿಕಾರಿಗಳು ಸಂತೋಷಪಡುವಿರಿ. ನಿಮಗೆ ಹೆಚ್ಚಿನ ಸ್ಥಾನವೂ ಸಿಗಬಹುದು. ಪ್ರಾಮಾಣಿಕ ವ್ಯವಹಾರಕ್ಕೆ ಇಂದು ಫಲವು ಸಿಗಬಹುದು. ವಿರೋಧಾಭಾಸದ ಮಾತುಗಳು ಬೇಡ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ದೂರಾಗುವುದು. ಯಾರನ್ನೋ ನಂಬಿ ಮೋಸ ಹೋಗಬಹುದು. ಅಧ್ಯಾತ್ಮವು ನಿಮಗೆ ಇಷ್ಟವಾಗುವುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು. ಯಾರ ಮಾತುಗಳೂ ನಿಮಗೆ ಸಹ್ಯವಾಗದು.

ಮಿಥುನ ರಾಶಿ: :ನಿಮ್ಮ ಯಶಸ್ಸು ಪರಿಶ್ರಮವನ್ನು ಬೇಡಬಹುದು. ಇಂದು ಇನ್ನೊಬ್ಬರ ತಂಟೆಗೆ ಹೋಗದೇ ನಿಮ್ಮ ಶಿಸ್ತಿನಲ್ಲಿ ನೀವಿರಿ. ನಕಾರಾತ್ಮಕ ಆಲೋಚನೆಯನ್ನು ಬಲವಂತವಾಗಿ ಕಡಿಮೆ ಮಾಡುವುದು ಉತ್ತಮ. ಇಲ್ಲವಾದರೆ ನಿಮಗೆ ಸಂತೋಷವೇ ಇರದಾಗುತ್ತದೆ. ಭಕ್ತಿಯ ಕೊರತೆ ಕಾಡಬಹುದು. ನಿಮ್ಮ ಉದ್ಯೋಗಕ್ಕೆ ಬಂಧುಗಳ ಬೆಂಬಲವನ್ನು ಇರಬಹುದು. ಆರ್ಥಿಕ ಸಂಕಷ್ಟವೆಂದು ಚಿಂತೆಗೆ ಒಳಗಾದರೆ ತೊಂದರೆಯಾದೀತು. ವಿದೇಶದ ಕಂಪೆನಿಯಿಂದ ಉದ್ಯೋಗಕ್ಕೆ ಕರೆ ಬರಬಹುದು. ಅಪರಿಚಿತರು ವಿಶ್ವಾಸಕ್ಕೆ ಬೇಕಾದ ಮಾತುಗಳನ್ನು ಆಡುವರು. ನಿಮ್ಮ ಇಷ್ಟಪಟ್ಟವರು ಇಂದು ವೈಯಕ್ತಿಕ ಕಾರಣಕ್ಕೆ ದೂರಾಗುವರು. ಪಶ್ಚಾತ್ತಾಪದಿಂದ ಮನಸ್ಸಿಗೆ ಸಮಾಧಾನ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗದು. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು.

ಕರ್ಕಾಟಕ ರಾಶಿ: :ಆರ್ಥಿಕ ಅನುಕೂಲಕ್ಕೆ ನಿಮ್ಮ ವಸ್ತುವನ್ನು ಮಾರಾಟ ಮಾಡಬೇಕಾದೀತು. ಇಂದು ಯಾರ ಜೊತೆ ಎಷ್ಟು ಮಾತನ್ನು ಆಡಬೇಕು ಎಂಬ ಗೊತ್ತಿರದು. ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸೇರ ಹಾಳಾಗಬಹುದು. ಯಾವುದನ್ನೂ ಕಷ್ಟ ಎಂದುಕೊಂಡರೆ ಯಾವಾಗಲೂ ಕಷ್ಟವೇ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಮಳೆ ಬಂದ ಅನಂತರದ ವಾತಾವರಣದಂತೆ ಏಕಾಂತ ಹಿತವಾಗುವುದು. ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಲಹವಾಗಬಹುದುಗಬಹುದು. ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ. ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ.

ಸಿಂಹ ರಾಶಿ: :ದಾಂಪತ್ಯದ ವಿರಸವು ಸ್ಫೋಟವಾಗಿ ವಿಚ್ಛೇದನದ ಹಂತಕ್ಕೂ ತಲುಪಬಹುದು. ಇಂದು ಬಹಳ ದಿನಗಳಿಂದ ನಡೆಸಿದ ಭೂಮಿಯ ವ್ಯವಹಾರ ಕುದುರುವುದು. ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ನಿಮಗೆ ಸಿಗುವ ಸಲಹೆ ನಿಮ್ಮವರಿಗೂ ಹಿತವಾಗುವಂತೆ ಇರಲಿ. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನು ಕೊಡುತ್ತದೆ. ಅಪ್ರಾಮಾಣಿಕತೆಯಿಂದ ನೀವು ಕೆಲವರನ್ನು ಕಳೆದುಕೊಳ್ಳುವಿರಿ. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಡಿ. ದೇವರ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮ್ಮ ಮಾತು ಸ್ಪಷ್ಟವಾಗಿದ್ದರೂ ಅಪಾರ್ಥಕ್ಕೆ ಕಾರಣವಾಗಲಿದೆ. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ.

ಕನ್ಯಾ ರಾಶಿ: :ನಿಮ್ಮ ಒತ್ತಡವನ್ನು ಕಂಡು ಮನೆಯಲ್ಲಿ ಚಿಂತೆ ಕಾಣಿಸುವುದು. ಇಂದು ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಸಂಗಾತಿಯ ಮುನಿಸಿಗೆ ನೀವು ಸೊಪ್ಪು ಹಾಕುವುದು ಬೇಡ. ಅಲ್ಲಿಯೇ ಶಾಂತವಾಗಲಿ. ವಾಹನವನ್ನು ಖರೀದಿಸಿ ಹೊಸ ಉದ್ಯೋಗವನ್ನು ಆರಂಭಿಸಬಹುದು. ಅಜ್ಞಾತವಾಗಿ ಉಳಿದುಕೊಳ್ಳಲು ಇಷ್ಟವಾಗುವುದು. ಆಲಂಕಾರಿಕ ವಸ್ತುವಿನ‌ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌ ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ.

ತುಲಾ ರಾಶಿ: :ಅನೇಕರು ನಿಮ್ಮ‌ ಮೇಲೆ ಅಪವಾದ ಮಾಡಬಹುದು. ನಿಮ್ಮ ಸೌಂದರ್ಯದ ಬಗ್ಗೆ ಟೀಕೆಗಳು ಬರಬಹುದು. ಯಾರ ಭಾವನೆಗಳನ್ನು ಕ್ಷುಲ್ಲಕವಾಗಿ ಕಾಣುವುದು ಬೇಡ. ಸಂಪಾದನೆಗೆ ಉತ್ತಮಮಾರ್ಗವು ನಿಮಗೆ ಗೊತ್ತಾಗಲಿದೆ. ಅತಿಯಾದ ಶಿಸ್ತಿನಿಂದ ಸಮಯಕ್ಕೆ ಕೆಲಸವನ್ನು ಮುಗಿಸಲಾಗದು. ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ಹಂಬಲವಿರಲಿದೆ. ನಿಮ್ಮ ಪ್ರಾಮಾಣಿಕತೆಯು ನಿಮಗೆ ಯಶಸ್ಸನ್ನು ತರುವುದು. ಏಕಾಂತವು ನಿಮಗಿಂದು ಇಷ್ಟವಾಗುವುದು. ಅಪ್ತರ ಮೇಲೆ ನಿಮ್ಮ ಸ್ವಭಾವವನ್ನು ಹೇರುವುದು ಬೇಡ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ: :ಸಹೋದ್ಯೋಗಿ ಮಿತ್ರರ ಜೊತೆ ಮನಸ್ತಾಪ. ಮೇಲಧಿಕಾರಿಗಳಿಂದ ಮಧ್ಯಪ್ರವೇಶವಾಗಲಿದೆ. ಯಾವುದಾದರೂ ಹೊಸ ಮಾರ್ಗಗಳು ನಿಮ್ಮ ಗಮನ ಸೆಳೆಯಬಹುದು. ಆನಾರೋಗ್ಯದಿಂದ ವ್ಯತ್ಯಾಸವಾದ ನಿಮ್ಮ ದೇಹ, ಮನಸ್ಸುಗಳು ಸ್ವಸ್ಥವಾಗುವ ಕಡೆಗೆ ಹೋಗುತ್ತಿವೆ. ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದೇ ಇರುವುದು ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಹೊಸ ಆವಿಷ್ಕಾರಗಳ ಕಡೆ ಗಮನವು ಅಧಿಕವಾಗಿರುವುದು. ಅಧಿಕೃತ ಮಾಹಿತಿ ಇಲ್ಲದೇ ಯಾವ ಕ್ರಮವನ್ನು ತೆಗದುಕೊಳ್ಳಬಾರದು. ಅನಾರೋಗ್ಯದಿಂದ ನೀವು ವಿಶ್ರಾಂತಿ ಪಡೆಯುವಿರಿ. ನಿಮ್ಮ ಒರಟುತನವು ನಿಮ್ಮವರಿಗೆ ಹಿಂಸೆಯನ್ನು ಕೊಡಬಹುದು. ಮಕ್ಕಳು ನಿಮ್ಮನ್ನು ಪ್ರಶ್ನಿಸುವರು. ನಿಮಗೆ ಸಂತೋಷವೂ ಬೇಸರೂ ಆಗಬಹುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ.

ಧನು ರಾಶಿ: :ವ್ಯವಹಾರಕ್ಕೆ ಬೇಕಾದ ಉತ್ತಮ‌ ದಾರಿ ಸಿಗುವುದು. ಯಾರನ್ನೋ ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಪ್ರಶಂಸೆಯಿಂದ ಮುಜುಗರವಾಗಲಿದೆ. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ಯಾವುದನ್ನು ಪಡೆಯುವುದಿದ್ದರು ಅದಕ್ಕೆ ಕೊಡುವ ಮೌಲ್ಯ, ಗೌರವವನ್ನು ಕೊಟ್ಟು ಪಡೆಯಿರಿ. ಮಂಗಲಕರವಾದ ಸಮಾರಂಭಗಳಿಗೆ ಭೇಟಿಯಾಗುವಿರಿ. ನಿಮಗಾಗದವರು ನಿಮ್ಮ ಬಗ್ಗೆ ಹೊಂಚುಹಾಕುತ್ತ ಇರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು.

ಮಕರ ರಾಶಿ: :ಪ್ರೀತಿಯನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ನಿಮ್ಮಿಂದಾದ ಸಹಕಾರ ನೀಡಿ, ಸಂರೋಷಪಡಿಸಿ. ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ನಿಮ್ಮ ದೂರನ್ನು ಯಾರೂ ಆಲಿಸದೇ ಇರಬಹುದು.‌ ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ‌ ಕಾರಣ ಅದು ಸಿಗದೇ ಹೋಗಬಹುದು. ನಿಮ್ಮ ತಾಳ್ಮೆಗೆ ಸಹೋದ್ಯೋಗಿಗಳು ಮೆಚ್ಚುಗೆ ಕೊಡುವರು. ಎಲ್ಲದಕ್ಕೂ ಬೇರೆಯವರನ್ನು ದೂಷಿಸುವ ಅಗತ್ಯವಿಲ್ಲ. ನಿಮ್ಮ ತಪ್ಪೂ ಕಾರಣವಾಗಿರಬಹುದು. ತಪ್ಪನ್ನು ನೀವೇ ತಿದ್ದಿಕೊಂಡರೆ ಒಳ್ಳೆಯದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.

ಕುಂಭ ರಾಶಿ: :ಏನೇ ಆದರೂ ಒಳ್ಳೆಯದನ್ನು ಬಿಡಲು ಆಗದು. ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ. ನಿಮಗೆ ಆಗದ್ದನ್ನು ಅನ್ಯರ ಮೂಲಕ ಮಾಡಿಸುವಿರಿ. ಕೈಬಿಡಬೇಕಂದು ನಿರ್ಧರಿಸಿರುವ ನಿಮಗೆ ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯನ್ನು ಬೆಂಬಲಿಸುವಂತೆ ಹೇಳುವಿರಿ. ಬೆಳಗಿನ ಜಾವದಲ್ಲಿ ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಮರುದಿನ ದೇವರಿಗೆ ತುಪ್ಪದ ದೀಪವನ್ನು ಬೆಳಗಿ. ನಿಮಗೆ ಸಲಹೆಯನ್ನು ಕೊಡುವವರು ಹತ್ತಾರು ಮಂದಿ ಇರುವರು. ಅವರ ಸಲಹೆಯನ್ನು ತಳ್ಳಿಹಾಕದೇ ನಯವಾಗಿ ಜಾರಿಕೊಳ್ಳಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ಹೂಡಿಕೆಯಿಂದ ಇಂದು ದೂರವಿರುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು.

ಮೀನ ರಾಶಿ: :ವ್ಯಾಪಾರದ ಚೇತರಿಕೆಯಿಂದ ಅನೇಕ ಗೊಂದಲಕ್ಕೆ ಪೂರ್ಣವಿರಾಮ. ಎಲ್ಲ ಕಾರ್ಯದಲ್ಲಿ ಉತ್ಸಾಹ. ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ಅಹಂಕಾರದಿಂದ ಯಾರಿಗೂ ಲಾಭವಾಗದು. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮುಂದುವರಿಯಿರಿ. ಕುಟುಂಬ ವಿಚಾರಗಳು ನಿಮಗೆ ತಿಳಿಯದು ಎಂಬ ಬಗ್ಗೆ ಚಿಂತೆ ಇರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಗದಂತೆ ನಿಮ್ಮ ಮಾತಿರಲಿ.

-ಲೋಹಿತ ಹೆಬ್ಬಾರ್ – 8762924271 (what’s app only)